Advertisement

ಶಾಶ್ವತ ನೆಲೆಗಾಗಿ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

05:51 PM Aug 01, 2021 | Team Udayavani |

ತೇರದಾಳ: ಶಾಶ್ವತ ಪರಿಹಾರಕ್ಕಾಗಿ ಬೇಗನೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಕೃಷ್ಣಾ ನದಿ ತಮದಡ್ಡಿ ಗ್ರಾಮಸ್ಥರು ಪಟ್ಟಣದ ಜಮಖಂಡಿ-ಕಾಗವಾಡ ರಾಜ್ಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

Advertisement

ಕಳೆದ 10-15ವರ್ಷಗಳಿಂದ ಪ್ರತಿ ಬಾರಿಯೂ ನದಿಯ ಪ್ರವಾಹಕ್ಕೆ ಒಳಗಾಗಿ ದನ-ಕರು, ಸಾಮಾನು ಸರಮಜಾಮು ಸಹಿತ ತೇರದಾಳದೆಡೆಗೆ ಬರುವಂತಾಗಿದೆ. ಪುನರ್ವಸತಿಗೆ ಅಂಗಲಾಚಿದರೂ ಸಹ ನಮಗೆ ಪ್ರತಿವರ್ಷವೂ ಮಳೆಗಾಲದಲ್ಲಿ ಜೀವನ ಸಾಗಿಸುವುದೇ ಕಷ್ಟವಾಗುತ್ತಿದೆ. ಈ ಬಾರಿ ನಮಗೆ ನ್ಯಾಯ ಸಿಗದಿದ್ದರೆ ಸಾಮೂಹಿಕ ಆತ್ಮಹತ್ಯೆಗೂ ಸಿದ್ಧರಿದ್ದೇವೆ ಎಂದು ಕೆಲವರು ಬೆಳೆಗಳಿಗೆ ಸಿಂಪಡಿಸುವ ಔಷಧ ಸೇವನೆಗೆ ಮುಂದಾದರು.

ಪೊಲೀಸರು ಅವರನ್ನು ತಡೆದು ಕೈಯಲ್ಲಿನ ಬಾಟಲ್‌ಗ‌ಳನ್ನು ಕಸಿದುಕೊಂಡರು. ಪಟ್ಟಣದ ಜಮಖಂಡಿ ರಸ್ತೆ ಮೇಲೆ ಸುಕುಮಾರ ಪಾಟೀಲ, ಸುರೇಶ ಅಕಿವಾಟ, ಮಹಾವೀರ ಭಿಲವಡಿ, ಗಂಗಪ್ಪ ಶಿರಗಾರ, ಮಧು ಕಾಂಬಳೆ, ಜಗದೀಶ ಜಾರಿ, ಬಸವರಾಜ ಯಾದವಾಡ, ಲಕ್ಕಪ್ಪ ಕರೆನ್ನವರ, ನೇಮಣ್ಣ ಜಮಖಂಡಿ, ಅಭಯ ಪಾಟೀಲ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ಸಹಸ್ರಾರು ಜನರು ಕುಳಿತು ಪ್ರತಿಭಟನೆ ನಡೆಸಿದರು. ಶಾಸಕ ಸಿದ್ದು ಸವದಿ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿದರು.

ಬಳಿಕ ಮಾತನಾಡಿದ ಅವರು, ತಮದಡ್ಡಿ ಮುಳುಗಡೆ ಗ್ರಾಮವಾಗಿದ್ದು, ಪುನರ್ವಸತಿ ವಿಳಂಬವಾಗಿದೆ. ಈಗ ಹಳಿಂಗಳಿ ಗ್ರಾಮದ ಸರ್ವೇ ನಂಬರ್‌ನಲ್ಲಿ ಪುನರ್ವಸತಿಗೆ ಸ್ಥಳ ನಿಗದಿಗೊಳಿಸಿ, ಅದನ್ನು ಸಮತಟ್ಟುಗೊಳಿಸಲು ಭೂಮಿಪೂಜೆ ನೆರವೇರಿಸಲಾಗಿದೆ. ಅಲ್ಲಿ ಜೆಸಿಬಿಯಿಂದ ಅಭಿವೃದ್ಧಿ ಕಾರ್ಯ ಮಾಡಲು ಮುಂದಾದಾಗ ಮತ್ತೆ ಕೆಲವರು ಅಡಚಣೆ ಮಾಡಿರುವ ಮೂಲಕ ಮತ್ತೆ ಕಾರ್ಯ ಸ್ಥಗಿತಗೊಂಡಿದೆ. ಈ ಎಲ್ಲ ವಿಚಾರಗಳು ಪಾರದರ್ಶಕವಾಗಿವೆ. ನಿಮ್ಮ ಬೇಡಿಕೆಹಾಗೂ ಆಗ್ರಹವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಶಾಸಕಾಂಗ ಸಭೆಯಲ್ಲೂ ಚರ್ಚಿಸಿ ಕಾಯಂ ಪುನರ್ವಸತಿ ಹಾಗೂ ಅದರ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

ಪೊಲೀಸ್‌ ಬಂದೋಬಸ್ತ್ ತೆಗೆದುಕೊಂಡು ಕಾರ್ಯ ಆರಂಭಿಸುತ್ತೇವೆ. 2-3 ತಿಂಗಳಲ್ಲಿ ಶೀಘ್ರ ಹಕ್ಕುಪತ್ರ ವಿತರಿಸಲಾಗುವುದು. ಬೇಡಿಕೆ ಈಡೇರಿಸಲು ನಾನು ಬದ್ಧನಿದ್ದೇನೆ ಎಂದು ಪ್ರತಿಭಟನಾಕಾರರ ಮನವೊಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next