Advertisement
ತಾಲೂಕಿನ ಮಳಲಿ ಗ್ರಾಮದಲ್ಲಿನ ಘನ ತ್ಯಾಜ್ಯವಿಲೇವಾರಿಘಟಕದಲ್ಲಿಕಸವಿಲೇವಾರಿ ಮಾಡುವ ನಿಟ್ಟಿನಲ್ಲಿ ಐದು ತಿಂಗಳ ಹಿಂದೆ ಪುರಸಭೆಯವರು ಕಸ ತೆಗೆದುಕೊಂಡು ಹೋದಾಗ ಗ್ರಾಮಸ್ಥರು ತೀವ್ರ ವಿರೋಧವ್ಯಕ್ತಪಡಿಸಿದ್ದರು. ಈ ವೇಳೆ ಕಸ ವಿಲೇವಾರಿಘಟಕದಲ್ಲಿ ವೈಜ್ಞಾನಿಕ ಯಂತ್ರೋಪಕರಣ ಅಳವಡಿಸಲಾಗುವುದು ಎಂದು ಎಸಿ ಗಿರೀಶ್‌ನಂದನ್ ಗ್ರಾಮಸ್ಥರಿಗೆ ತಿಳಿಸಿದ್ದರು.
Related Articles
Advertisement
ಈ ವೇಳೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಕಳೆದ12 ವರ್ಷಗಳಿಂದ ಗ್ರಾಮಸ್ಥರ ಹಿತಕ್ಕಾಗಿ ನಾನು ಗ್ರಾಮದಲ್ಲಿಕಸವಿಲೇವಾರಿ ಮಾಡಲುಅವಕಾಶ ನೀಡಿಲ್ಲ. ನಾನು ಕೇವಲ ಮಳಲಿ ಗ್ರಾಮಕ್ಕೆ ಮಾತ್ರ ಶಾಸಕನಲ್ಲ, ಪುರಸಭೆ ಸೇರಿದಂತೆ ಕ್ಷೇತ್ರದ ಜನರ ಹಿತಕಾಯಬೇಕಾಗಿದೆ.ಘನ ತ್ಯಾಜ್ಯ ವಿಲೇವಾರಿಘಟಕ ನಿರ್ಮಾಣವಾಗುವ ಸಮಯದಲ್ಲೆ ಗ್ರಾಮಸ್ಥರು ಸರಿಯಾಗಿ ವಿರೋಧ ಮಾಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.
ಆತಂಕ ಪಡುವುದು ಬೇಡ: ಇದೀಗ ನ್ಯಾಯಾಲಯದ ಆದೇಶವನ್ನು ನಾವೆಲ್ಲ ಪರಿ ಪಾಲನೆ ಮಾಡಬೇಕಾಗಿರುವುದಿರಂದ ಗ್ರಾಮ ಸ್ಥರು ಗ್ರಾಮದ ತ್ಯಾಜ್ಯವಿಲೇವಾರಿಘಟಕದಲ್ಲಿ ಕಸ ವಿಲೇವಾರಿ ಮಾಡಲು ಅವಕಾಶ ನೀಡ ಬೇಕು. ಈಗಾಗಲೇ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು2 ಕೋಟಿ ರೂ. ವೆಚ್ಚದ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಗ್ರಾಮಸ್ಥರು ಈ ಕುರಿತು ಯಾವುದೇ ಆತಂಕ ಪಡುವುದು ಬೇಡ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಮಾತನಾಡಿ, ಈ ಹಿಂದೆ ಕಸವನ್ನು ಟಿಪ್ಪರ್ ಗಳಲ್ಲಿ ತಂದು ಸುರಿಯಲು ಬಂದಾಗ ಗ್ರಾಮಸ್ಥರು ವೈಜ್ಞಾನಿಕವಾಗಿ ಕಸ ಸುರಿಯಲಿ ಎಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ವೈಜ್ಞಾನಿಕ ವಾಗಿ ಕಸ ವಿಲೇವಾರಿ ಮಾಡಲು ಟೆಂಡರ್ ಕರೆಯಲಾಗಿದೆ. ಇದೀಗಕಾಮಗಾರಿ ಆರಂಭಿಸಬೇಕಾಗಿದೆ. ನ್ಯಾಯಾಲಯದ ಆಜ್ಞೆಯನ್ನು ನಾವು ಪಾಲನೆ ಮಾಡಬೇಕಾಗಿದೆ. ಇದೀಗ ಗ್ರಾಮಸ್ಥರು ಕಸ ಹಾಕಲು ಬಿಡುವುದಿಲ್ಲ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಅಂತಿಮವಾಗಿ ಸಭೆಯಲ್ಲಿ ಕಸ ವಿಲೇವಾರಿಗೆ ಗ್ರಾಮಸ್ಥರು ಒಪ್ಪದ ಹಿನ್ನೆಲೆಯಲ್ಲಿ ಸಭೆಯನ್ನು ಮೊಟಕುಗೊಳಿಸಲಾಯಿತು.ಸಭೆಯಲ್ಲಿ ತಹಶೀಲ್ದಾರ್ ಮಂಜುನಾಥ್, ಪುರಸಭಾಮುಖ್ಯಾಧಿಕಾರಿ ಸ್ಟೀಫನ್‌ಪ್ರಕಾಶ್, ಪುರಸಭಾ ಅಧ್ಯಕ್ಷ ಕಾಡಪ್ಪ, ಉಪಾಧ್ಯಕ್ಷ ಜರೀನಾ, ಗ್ರಾಮಸ್ಥರಾದ ಶಿವಣ್ಣ, ಶಾಂತ ಕುಮಾರ್, ವೇಣು ಸಭೆಯಲ್ಲಿ ಹಾಜರಿದ್ದರು.