Advertisement
ಕಂದಾಯ, ಭೂ ದಾಖಲೆಗಳ ಇಲಾಖೆ, ಪಂಚಾಯತ್ ರಾಜ್, ಕೃಷಿ, ತೋಟಗಾರಿಕೆ, ಆರೋಗ್ಯ, ಅರಣ್ಯ, ಮಹಿಳಾಮತ್ತು ಮಕ್ಕಳ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಇಲಾಖೆಗಳುಸೇರಿದಂತೆ ಪ್ರಮುಖ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮಇಲಾಖೆಗಳ ಮೂಲಕ ಜಾರಿಯಾಗಿರುವ ಎಲ್ಲ ಯೋಜನೆಗಳ ವಿಸ್ತೃತ ವರದಿ ನೀಡಿದರಲ್ಲದೇ ಸಮಸ್ಯೆಗಳ ಕುರಿತು ಜನರಅಹವಾಲು ಆಲಿಸಿ ಪರಿಹರಿಸಲು ಪ್ರಯತ್ನಿಸಿದರು. ಶಿಂಗನಹಳ್ಳಿ ಗ್ರಾಮದ ಸಂಗಪ್ಪ ಮಾತನಾಡಿ, ಇರುವ ಒಂದೇ ಟಿಸಿ ಅನ ಧಿಕೃತ ಸಂಪರ್ಕಗಳ ಒತ್ತಡದಿಂದ ಮೇಲಿಂದಮೇಲೆ ಕೆಡುತ್ತಿರುವುದಲ್ಲದೇ ಅದಕ್ಕೆ ಅಳವಡಿಸಿರುವ ಕೇಬಲ್ ಕೂಡಾ ಸುಟ್ಟು ಹೋಗುತ್ತಲಿದೆ. ಕಾರಣ ಅಧಿಕೃತ ಸಂಪರ್ಕದಾರರಿಗೆ ಯಾವುದೇ ತೊಂದರೆಯಾಗದಂತೆ ನಿರಂತರ-ಸಮರ್ಪಕ ವಿದ್ಯುತ್ ಸರಬಾರಾಜಿಗೆ ತಕ್ಷಣ ಕ್ರಮಜರುಗಿಸಬೇಕೆಂದರು. ಇದಕ್ಕೆ ಸ್ಪಂದಿಸಿದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹರ್ಷಾ ಬೆಂತೂರ, ತಾಲೂಕಿನಲ್ಲಿ10,163 ನೋಂದಾಯಿತ ನೀರಾವರಿ ಪಂಪ್ ಸೆಟ್‌ಗಳಿದ್ದರೆ,ಇನ್ನುಳಿದಂತೆ ಸುಮಾರು 5 ಸಾವಿರಕ್ಕೂ ಹೆಚ್ಚಿನ ನೀರಾವರಿ ಪಂಪಸೆಟ್‌ಗಳು ಅಕ್ರಮವಾಗಿ ಬಳಕೆಯಾಗುತ್ತಿವೆ. ಇದರಿಂದ ಟ್ರಾನ್ಸ್‌ಫಾರ್ಮರ್, ಕೇಬಲ್‌ಗಳು ಹಾಗೂ ವಿತರಣಾ ಕೇಂದ್ರದಲ್ಲಿ ಮೇಲಿಂದ ಮೇಲೆ ದುರಸ್ತಿಗೊಳಪಡುತ್ತಿದ್ದು, ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಈ ಕುರಿತು ಅನೇಕ ಬಾರಿ ರೈತರಿಗೆ, ಗ್ರಾಹಕರಿಗೆ, ಸಾರ್ವಜನಿಕರಿಗೆಸಭೆಗಳನ್ನು ಜರುಗಿಸಿ ಮನವರಿಕೆ ಮಾಡಿಕೊಡಲಾಗಿದೆ. ಕಾರಣ ರೈತರ ಹಿತ ಕಾಪಾಡಲು ರೈತರೇ ತಮ್ಮ ನೀರಾವರಿ ಪಂಪಸೆಟ್ ಗಳನ್ನು ಸಕ್ರಮಗೊಳಿಸಿಕೊಂಡು ಗುಣಮಟ್ಟದ ವಿದ್ಯುತ್ ಪೂರೈಸಲು ಇಲಾಖೆಗೆ ಸಹಕರಿಸಬೇಕೆಂದರು. ಈಗಾಗಲೇ ರೈತ ವರ್ಗಕ್ಕೆ ಗುಣಮಟ್ಟದ ವಿದ್ಯುತ್ ಪೂರೈಸಲು ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಿದ್ದು, ತಬಕದ ಹೊನ್ನಳ್ಳಿಯಲ್ಲಿ ವಿದ್ಯುತ್‌ವಿತರಣಾ ಕೇಂದ್ರ ಸ್ಥಾಪನೆಗೊಳ್ಳಲಿದ್ದು, ದೇವಿಕೊಪ್ಪದಲ್ಲೂವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
Related Articles
Advertisement
ಸಹಾಯಕ ಕೃಷಿ ನಿರ್ದೇಶಕ ಎನ್.ಎಫ್. ಕಟ್ಟೆಗೌಡರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಮ್.ವೀಣಾ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದಬಲರಾಮ ಚವ್ಹಾಣ, ಭೂಮಾಪನ ಇಲಾಖೆಯ ಶಿವಶಂಕರ್ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ,ಆರೋಗ್ಯ ಇಲಾಖೆಯ ಡಾ|ಎಸ್.ಬಿ.ನಿಂಬಣ್ಣವರ, ಡಾ|ಬಸವರಾಜ ಬಾಸೂರ, ಸಮಾಜ ಕಲ್ಯಾಣ ಇಲಾಖೆಯ ಎ.ಜಿ. ಯೊಗಪ್ಪನವರ್ ಸಾರ್ವಜನಿಕರ ಅಹವಾಲುಗಳಿಗೆ ಉತ್ತರಿಸಿದರು. ಕಾರ್ಮಿಕ ಹಾಗೂ ಪಶುಸಂಗೋಪನಾ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಗೈರು ಹಾಜರಿರುವುದು ಕಂಡು ಬಂದಿತು. ಜಿಪಂ ಸದಸ್ಯೆ ವಿದ್ಯಾ ಬಾವನವರ, ತಾಪಂ ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಸದಸ್ಯಬಸವರಾಜ ಬಾವಕಾರ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಬಾವುಕಾರ, ಉಪಾಧ್ಯಕ್ಷ ನಿಂಗಪ್ಪ ಬೈಚವಾಡ, ಸದಸ್ಯರಾದ ಶೋಭಾ ಕಮ್ಮಾರ, ಪಾರವ್ವ ಮುಂಡಗಿ, ಮಂಜುಳಾ ಲಮಾಣಿ, ಗೌಸಿಯಾ ಮುಲ್ಲಾನವರ, ಪರಶುರಾಮ ಹುಲಗೋಡ, ಇಮಾಮ್‌ಸಾಬ್ ಗಂಜಿಗಟ್ಟಿ, ಮಾಂತೇಶ ಚಿಕ್ಕಲಗಿ ಮತ್ತಿತರರಿದ್ದರು.