Advertisement
ಐಕಳ ಗ್ರಾ.ಪಂ. ವ್ಯಾಪ್ತಿಯ ಐಕಳ, ಉಳೆಪಾಡಿ, ಏಳಿಂಜೆ ಗ್ರಾಮಗಳ ಎರಡನೇಯ ಹಂತದ ಗ್ರಾಮ ಸಭೆಯು ಗ್ರಾ.ಪಂ. ಅಧ್ಯಕ್ಷ ದಿವಾಕರ ಚೌಟ ಅಧ್ಯಕ್ಷತೆಯಲ್ಲಿ ಜ. 2 ರಂದು ರಾಜೀವ ಗಾಂಧಿ ಸಭಾಭವನದಲ್ಲಿ ನಡೆಯಿತು. ಗಾ.ಪಂ. ಕಳೆದ 20 ವರ್ಷದಿಂದ ನಿವೇಶನ ರಹಿತರ ಪಟ್ಟಿ ಮಾಡಲಾಗುತ್ತಿದೆ. ಆದರೆ ಸರಕಾರಿ ಜಾಗ ಇಲ್ಲ ಎಂಬ ನೆಪದಿಂದ ಪ್ರತಿ ಗ್ರಾಮ ಸಭೆಯಲ್ಲೂ ಚರ್ಚೆ ನಡೆದರೂ ಫಲಪ್ರದವಾಗಿಲ್ಲ. ಆದರೆ ಕಳೆದ ಬಾರಿ ಜನರ ಒತ್ತಡದ ಮೇರೆಗೆ ಕಂಗುರಿಯಲ್ಲಿ 2 ಎಕರೆ ಜಾಗ ಗೊತ್ತು ಪಡಿಸಿದ್ದರೂ ನಿವೇಶನ ರಹಿತರಿಗೆ ಹಂಚಿಕೆಯಾಗಿಲ್ಲ ಯಾಕೆ ಎಂದು ಗ್ರಾಮಸ್ಥ ವಸಂತ್ ಹಾಗೂ ಇನ್ನಿತರು ಪ್ರಶ್ನಿಸಿದರು. ಈ ಬಗ್ಗೆ ಜಿಲ್ಲಾಡಿಳಿತದಿಂದ ಮಾಹಿತಿ ಬಂದಿಲ್ಲ. ಬಂದ ಕೂಡಲೇ ಕ್ರಮಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ದಿವಾಕರ ಚೌಟ ತಿಳಿಸಿದರು.
15 ಕೋಟಿ ರೂ. ವೆಚ್ಚದ ಬಹುಗ್ರಾಮ ಯೋಜನೆಯಲ್ಲಿ ನೀರು ಬರುತ್ತಿಲ್ಲ. ಬಂದರೂ ಉಪ್ಪು ನೀರು ಬರುತ್ತಿದೆ. ಜನರ ಹಣ ಪೋಲಾಗುತ್ತಿದೆ ಎಂದು ಉಳೆಪಾಡಿ ನಿವಾಸಿ ಕೃಷ್ಣ ಉಳೆಪಾಡಿ ಕೇಳಿದಾಗ ಜಿ.ಪಂ. ಸದಸ್ಯ ವಿನೋದ್ ಬೊಳ್ಳೂರು ಮಾತನಾಡಿ, ಬಹುಗ್ರಾಮ ಕುಡಿಯುವ ನೀರಿನ
ಯೋಜನೆಯ ಸದ್ಯ ಸ್ಥಗಿತಗೊಂಡಿದೆ. ಎಂದು ತಿಳಿಸಿದರು. ಟ್ಯಾಂಕ್ ತೆರವುಗೊಳಿಸಿ
ಉಳೆಪಾಡಿಯಲ್ಲಿ ನೀರಿನ ಟ್ಯಾಂಕ್ ಸಿಮೆಂಟ್ ತುಂಡುಗಳು ಉದುರುತ್ತವೆ. ಹಿಂದಿನ ಗ್ರಾಮ ಸಭೆಯಲ್ಲಿ ತಿಳಿಸಲಾಗಿದೆ. ಆದರೂ ದುರಸ್ತಿಯಾಗಿಲ್ಲ ಎಂದು ಕೃಷ್ಣ ಅವರು ತಿಳಿಸಿದಾಗ ಈ ಬಗ್ಗೆ ಎಂಜಿನಿಯರ್ ಬಂದು ಸ್ಥಳ ಪರೀಶೀಲಿಸಿ, ಯೋಜನೆ ಸಿದ್ಧ ಪಡಿಸಿ ತೆರವು ಮಾಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
Related Articles
Advertisement
ಅಭಿವೃದ್ಧಿಯಾಗದ ದೊಜಲಗುರಿಪಂಚಾಯತ್ ವ್ಯಾಪ್ತಿಯ ದೊಜಲಗುರಿ ಸಮರ್ಪಕವಾಗಿ ರಸ್ತೆ ನಿರ್ಮಾಣವಾಗಿಲ್ಲ. ನಿಮ್ಮಲ್ಲಿ ಅನುದಾನ ಇಲ್ಲದಿದ್ದರೇ ಬೇರೆ ನಿಧಿಯಿಂದ ಕೆಲಸ ಮಾಡಿಸಿ ಎಂದು ಅಲ್ಲಿನ ನಿವಾಸಿ ಶರತ್ ತಿಳಿಸಿದಾಗ ನಮ್ಮ ಗ್ರಾಮ ಪಂಚಾಯತ್‌ಗೆ 75 ಲಕ್ಷ ರೂ. ಅನುದಾನ ಬಂದಿದೆ. ಮೂರು ಗ್ರಾಮಗಳಿಗೂ ಅದ್ಯತೆಯ ಮೇರೆಗೆ ಹಂಚಲಾಗಿದೆ. ಮುಂದಿನ ದಿನಗಳಲ್ಲಿ ಅನುದಾನದಲ್ಲಿ ಕಾಮಗಾರಿ ಮಾಡಲಾಗುವುದು ಎಂದು ತಿಳಿಸಿದರು. ಸ್ಥಳಂತಗುತ್ತು ರಸ್ತೆ ದುರಸ್ತಿ ಹಾಗೂ ಮೋರಿ ರಚನೆ ಮಾಡುವಂತೆ ಎಂದು ರುಡಾಲ್ಫ್ ಹಾಗೂ ಜೆಸಿಂತಾ ಒತ್ತಾಯಿಸಿದರು. ಈ ಬಗ್ಗೆ ನೀವು ಜನ ಹಾಗೂ ಜೆಸಿಬಿ ಗೊತ್ತು ಪಡಿಸಿ ಕೆಲಸ ಮಾಡಿಸಿ. ಅದರ ಖರ್ಚ್ ಪಂಚಾಯತ್‌ನಿಂದ ಕೊಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ಪೊಲೀಸರಿಗೆ ತಿಳಿಸಿ
ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಕೊಲೆ ಹಾಗೂ ಚಿನ್ನ ಕಳವು ಪ್ರಕರಣ ವಾಗಿದೆ. ಜನರು ಈ ಬಗ್ಗೆ ಜಾಗ್ರತರಾಗಬೇಕು. ಶಂಕಿತರು ಕಂಡುಬಂದರೆ ಕೂಡಲೇ ಪೊಲೀಸರಿಗೆ ತಿಳಿಸಬೇಕು ಎಂದು ಪಂಚಾಯತ್ ಅಧ್ಯಕ್ಷ ದಿವಾಕರ ಚೌಟ ತಿಳಿಸಿದರು.