ಮುಂಬಯಿ: ವಿಕ್ರೋಲಿ ಪೂರ್ವ ಠಾಕೂರ್ ನಗರದ ತುಳು-ಕನ್ನಡಿಗರ ಸಂಚಾಲಕತ್ವದ ಚಾರ್ಲಿ ನ್ಪೋರ್ಟ್ಸ್ ಕ್ಲಬ್ ಇದರ ಮೂರನೇ ವಾರ್ಷಿಕ ವೃಕ್ಷಾರೋಹಣ ಕಾರ್ಯಕ್ರಮವು ಜೂ. 17ರಂದು ವಿಕ್ರೋಲಿಯ ವಿವಿಧೆಡೆಗಳಲ್ಲಿ ನಡೆಯಿತು.
ಸಂಸ್ಥೆಯ ಹಿರಿಯರಾದ ಮುಕೇಶ್ ಶೆಟ್ಟಿ ಅವರು ತೆಂಗಿನಕಾಯಿ ಒಡೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಪದಾಧಿಕಾರಿಗಳಾದ ವಿಕ್ರೋಲಿ ಬಂಟ್ಸ್‌ನ ಅಧ್ಯಕ್ಷ, ಸಮಾಜ ಸೇವಕ ಗಣೇಶ್ ಎಂ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಯುಗಾನಂದ ಎಸ್. ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ನಗರ ಸೇವಕ ಉಪೇಂದ್ರ ಸಾವಂತ್ ಅವರು ಪಾಲ್ಗೊಂಡು ಶುಭಹಾರೈಸಿದರು.
ಸಂಸ್ಥೆಯ ಸದಸ್ಯರುಗಳಾದ ಪ್ರದೀಪ್ ಶೆಟ್ಟಿ, ಸಂತೋಷ್ ಕದಂ, ಹರೀಶ್ ಪೂಜಾರಿ, ಜುಡೆ ಬಬೊìಜ್, ಸುಂದರ್ ಪಿಳ್ಳೈ, ಸಂಕೇತ್ ಗುಜರಾತಿ, ದಿನೇಶ್ ಹುಲೆ, ಲಬ್ಬ, ಬಾಬು, ಮಹೇಂದ್ರ ಕದಂ, ಸತೀಶ್ ಎಂ. ಶೆಟ್ಟಿ, ಕೆಲ್ವಿನ್ ಸೈಮನ್, ಡಿ. ಗಣೇಶ್ ಶೆಟ್ಟಿ, ಗಣೇಶ್ ಎಸ್. ಶೆಟ್ಟಿ, ರಮೇಶ್ ಎಂ. ಅಂಚನ್, ಓಂಕಾರ್ ಕಾನ್ಸೆ, ಪ್ರವೀಣ್ ಬಂಗೇರ, ಸಿದ್ಧೇಶ್ ಎಂ. ಶೆಟ್ಟಿ, ಪ್ರಸಾದ್ ಎಸ್. ಶೆಟ್ಟಿ, ಸುರೇಶ್ ಎಸ್. ಶೆಟ್ಟಿ, ರಾಹುಲ್ ವಾಗªರೆ, ಐವನ್ ಡಿ’ಸೋಜಾ, ಶೈಲೇಶ್ ತಾಬ್ಡೆ, ಮನೀಶ್ ಚೌಭೆ, ರೋಮ ಚೌಭೆ, ಶೃಷ್ಟಿ ಚೌಭೆ, ಸ್ವಾಮಿ, ಸಂತೋಷ್ ಗಾಯಕ್ವಾಡ್, ವಿಕ್ರಮ್, ರೋಶನ್ ಶೆಟ್ಟಿ, ರಾಜ್‌ಶೇಖರ್, ಶೈಲೇಶ್ ತಾಬ್ಡೆ, ಸುನೀಲ್ ಮಂಗೇಕರ್, ನಿಖೀಲ್ ಜಾಧವ್, ಹರೀಶ್ ಕೆ. ಹೊಕ್ಕೊಳ್ಳಿ, ನಾರಾಯಣ ದಾಸರಿ ಮೊದಲಾದವರು ಪಾಲ್ಗೊಂಡಿದ್ದರು.
ವಿಕ್ರೋಲಿ ಅಯ್ಯಪ್ಪ ಸೇವಾ ಮಂದಿರದ ಕಾರ್ಯಕಾರಿ ಸಮಿತಿಯ ಸದಸ್ಯರು, ವಿಕ್ರೋಲಿ ಬಂಟ್ಸ್ ಹಾಗೂ ಇತರ ತುಳು-ಕನ್ನಡಪರ, ಇನ್ನಿತರ ಜಾತೀಯ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈಸ್ಟರ್ನ್ ಎಕ್ಸ್ ಪ್ರಸ್ ಹೈವೆಯ ವಿಕ್ರೋಲಿಯಿಂದ ಘಾಟ್‌ಕೋಪರ್ ಪ್ರಾರಂಭದವರೆಗೆ ಸುಮಾರು 108 ಗಿಡಗಳನ್ನು ನೆಡಲಾಯಿತು.