Advertisement

ಮುಧೋಳ್‌ ಹುಡ್ಗ ವಿಕ್ರಂ! : ಹೊರಬಿತ್ತು ಟೈಟಲ್‌ ಮತ್ತು ಫ‌ಸ್ಟ್‌ಲುಕ್‌

10:38 AM Apr 27, 2023 | Team Udayavani |

ನಟ ರವಿಚಂದ್ರನ್‌ ದ್ವಿತೀಯ ಪುತ್ರ ವಿಕ್ರಮ್‌ ರವಿಚಂದ್ರನ್‌ ಅಭಿನಯದ ಎರಡನೇ ಸಿನಿಮಾದ ಟೈಟಲ್‌ ಅನೌನ್ಸ್‌ ಆಗಿದೆ. ಅಂದಹಾಗೆ, ವಿಕ್ರಮ್‌ ಅಭಿನಯದ ಎರಡನೇ ಸಿನಿಮಾಕ್ಕೆ “ಮುಧೋಳ್‌’ ಎಂದು ಹೆಸರಿಡಲಾಗಿದ್ದು, ಈ ಸಿನಿಮಾದಲ್ಲಿ ವಿಕ್ರಮ್‌ ಮುಧೋಳ್‌ ಊರಿನ ಶಶಿ ಎಂಬ ಗ್ಯಾಂಗ್‌ಸ್ಟರ್‌ ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

ಬೆಂಗಳೂರಿನ ನವರಂಗ್‌ ಚಿತ್ರಮಂದಿರದಲ್ಲಿ ಅಭಿಮಾನಿಗಳ ನಡುವೆ ವಿಕ್ರಮ್‌ “ಮುಧೋಳ್‌’ ಸಿನಿಮಾದ ಟೈಟಲ್‌ ಮತ್ತು ಫ‌ಸ್ಟ್‌ ಲುಕ್‌ ಅನಾವರಣ ಮಾಡಲಾಯಿತು.

ಇದೇ ವೇಳೆ ತಮ್ಮ “ಮುಧೋಳ್‌’ ಸಿನಿಮಾದ ಬಗ್ಗೆ ಮಾತನಾಡಿದ ವಿಕ್ರಮ್‌, “ನನ್ನ ಎರಡನೇ ಸಿನಿಮಾದ ಟೈಟಲ್‌ ಲಾಂಚ್‌ ಮಾಡುತ್ತಿದ್ದೇವೆ. ಪ್ರಯತ್ನ ಅನ್ನೋದು ನಿರಂತರ. ಪ್ರಯತ್ನ ಮಾಡಿ ಜೀವನದಲ್ಲಿ ಗೆಲ್ಲುವುದು ಮುಖ್ಯವಲ್ಲ. ಜೀವನವನ್ನೇ ಗೆಲ್ಲಬಹುದು. ಆ ರೀತಿ ಒಂದು ಪ್ರಯತ್ನ ನಮ್ಮ ತಂಡದಿಂದ ಆಗುತ್ತಿದೆ. ಈ ಸಿನಿಮಾದಲ್ಲಿ ನಾನು ಮುಧೋಳ್‌ ಊರಿನ ಶಶಿ ಎಂಬ ಹುಡುಗನ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಇಲ್ಲಿ ತಾಯಿ-ಮಗನ ಬಾಂಧವ್ಯವಿದೆ. ಲವ್‌, ಆ್ಯಕ್ಷನ್‌ ಹೀಗೆ ಎಲ್ಲ ಥರದ ಎಂಟರ್‌ಟೈನ್ಮೆಂಟ್‌ ಎಲಿಮೆಂಟ್ಸ್‌ ಸಿನಿಮಾದಲ್ಲಿದೆ’ ಎಂದು ಮಾಹಿತಿ ನೀಡಿದರು.

ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಗುರುತಿಸಿಕೊಂಡಿರುವ ಕಾರ್ತಿಕ್‌ ರಾಜನ್‌ “ಮುಧೋಳ್‌’ ಸಿನಿಮಾಗೆ ಆಕ್ಷನ್‌-ಕಟ್‌ ಹೇಳಿದ್ದಾರೆ.

“ಇದೊಂದು ಗ್ಯಾಂಗ್‌ಸ್ಟರ್‌ ಸಬ್ಜೆಕ್ಟ್ ಸಿನಿಮಾ. ಮುಧೋಳ್‌ ನಾಯಿ ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತದೆ. ಸಿನಿಮಾದಲ್ಲಿ ಹೊಸ ಲುಕ್‌ನಲ್ಲಿ ವಿಕ್ರಮ್‌ ಅವರ ಪಾತ್ರವಿದ್ದು, ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ’ ಎಂಬ ವಿಶ್ವಾಸ ನಿರ್ದೇಶಕ ಕಾರ್ತಿಕ್‌ ರಾಜನ್‌ ಅವರದ್ದು. “ತಂಡವ್‌ ಸ್ಟುಡಿಯೋಸ್‌’ ಬ್ಯಾನರ್‌ನಡಿ ರಕ್ಷಾ ವಿಜಯ ಕುಮಾರ್‌ ಹಾಗೂ ಸಿಲ್ಜು ಕಣ್ಣನ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ “ಮುಧೋಳ್‌’ ಸಿನಿಮಾಕ್ಕೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದು, ಈಗಾಗಲೇ ಸುಮಾರು 25 ದಿನಗಳ ಕಾಲ ಸಿನಿಮಾದ ಮೊದಲ ಹಂತದ ಚಿತ್ರೀಕರಣವನ್ನು ಚಿತ್ರತಂಡ ಮುಗಿಸಿದೆ.

Advertisement

ಸಿನಿಮಾಕ್ಕೆ ಸಂದೀಪ್‌ ವಲ್ಲೂರಿ ಛಾಯಾಗ್ರಹಣ, ಡಾ. ಕೆ. ರವಿವರ್ಮಾ ಸಾಹಸ ಸಂಯೋಜನೆಯಿದೆ. “ಮುಧೋಳ್‌’ ಸಿನಿಮಾದಲ್ಲಿ ವಿಕ್ರಮ್‌ ರವಿಚಂದ್ರನ್‌ ಅವರೊಂದಿಗೆ ಅಭಿಲಾಷ್‌, ರಘು ಮ್ಯೂಟಂಟ್‌ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next