Advertisement

Bheema; ಹೊಸ ವರ್ಷದಲ್ಲಿ ಮಾಸ್‌ ಸಿನಿಮಾ

12:40 PM Dec 22, 2023 | Team Udayavani |

“ಸಲಗ’ ಸಿನಿಮಾ ಮೂಲಕ ನಿರ್ದೇಶಕರಾಗಿಯೂ ಯಶಸ್ಸು ಕಂಡಿದ್ದ ವಿಜಯ್‌ “ಭೀಮ’ ಎಂಬ ಸಿನಿಮಾ ಮಾಡುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಬೆಂಗಳೂರಿನ ವಿನೋಬಾನಗರದ ಗಲ್ಲಿಗಳಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುವ ಮೂಲಕ ಚಿತ್ರಕ್ಕೆ ಕುಂಬಳಕಾಯಿ ಹೊಡೆಯಲಾಗಿದೆ. ಈ ಮೂಲಕ “ಭೀಮ’ ಚಿತ್ರೀಕರಣ ಪೂರ್ಣಗೊಳಿಸಿದೆ. ಚಿತ್ರವನ್ನು ನೈಜವಾಗಿ ಕಟ್ಟಿಕೊಡುವ ದೃಷ್ಟಿಯಿಂದ ನೈಜ ಲೊಕೇಶನ್‌ಗಳನ್ನೇ ಆಯ್ಕೆ ಮಾಡಲಾಗಿದೆ.

Advertisement

ಇನ್ನು, ದೀಪಾವಳಿ ಸಮಯದಲ್ಲಿ  ಚಿತ್ರದ “ಸೈಕ್‌’ ಹಾಡು ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿತ್ತು. ಇತ್ತೀಚೆಗೆ ಚಿತ್ರದ ಡ್ಯುಯೆಟ್‌ ಸಾಂಗ್‌ವೊಂದು ಬಿಡುಗಡೆಯಾಗಿದ್ದು, ಅದು ಕೂಡಾ ಹಿಟ್‌ಲಿಸ್ಟ್‌ ಸೇರಿದೆ. “ಐ ಲವ್‌ ಯೂ ಕಣೇ..’ ಎಂಬ ಡ್ಯುಯೆಟ್‌ ಹಾಡು ಗುರುವಾರ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ರೆಗ್ಯುಲರ್‌ ಶೈಲಿ ಬಿಟ್ಟು ತಯಾರಾಗಿರುವ ಈ ಹಾಡಿನ ಚಿತ್ರೀಕರಣವನ್ನು ವಿಭಿನ್ನವಾಗಿ ಮಾಡಲಾಗಿದೆ.

ಇನ್ನು, “ಭೀಮ’ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ ಈ ಹಿಂದೆ ಬಿಡುಗಡೆಯಾಗಿರುವ ಭೀಮ ಟೀಸರ್‌ನಲ್ಲಿರುವ ಮಾಸ್‌ ಡೈಲಾಗ್‌, ವಿಜಯ್‌ ಶೈಲಿ ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿರುವುದು ಸುಳ್ಳಲ್ಲ. ಅಂದಹಾಗೆ, “ಭೀಮ’ ಇದು ಕೂಡಾ ಒಂದು ಗಂಭೀರ ಹಾಗೂ ಪ್ರೇಕ್ಷಕರಿಗೆ ಇಷ್ಟವಾಗುವ ವಿಷಯವನ್ನಿಟ್ಟುಕೊಂಡು ಮಾಡುತ್ತಿದ್ದಾರೆ. ಈ ಕಥೆಗಾಗಿ ಸುಮಾರು ಎಂಟು ತಿಂಗಳಿಗೂ ಹೆಚ್ಚು ತಮ್ಮನ್ನು ವಿಜಯ್‌ ತೊಡಗಿಸಿಕೊಂಡು, ಎಲ್ಲವನ್ನು ಪಕ್ಕಾ ಮಾಡಿಕೊಂಡು ಮಾಡಿರುವ ಸಿನಿಮಾವಿದು. “ಸಲಗ’ದಲ್ಲಿ ಸಿಕ್ಕ ದೊಡ್ಡ ಯಶಸ್ಸು “ಭೀಮ’ನಲ್ಲಿ ಮುಂದುವರೆಯುವ ವಿಶ್ವಾಸ ವಿಜಯ್‌ ಅವರಿಗಿದೆ.

ಅಂದಹಾಗೆ, ಈ ಚಿತ್ರವನ್ನು ಕೃಷ್ಣ ಸಾರ್ಥಕ್‌ ಹಾಗೂ ವಿತರಕ ಜಗದೀಶ್‌ ಗೌಡ ನಿರ್ಮಾಣ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next