Advertisement

ವಿಜಯಶಂಕರ್‌ ಬಳಿ 34.12 ಲಕ್ಷ ರೂ.ಚರಾಸ್ತಿ

01:04 PM Mar 26, 2019 | Lakshmi GovindaRaju |

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ 34,12,974 ರೂ. ಮೌಲ್ಯದ ಚರಾಸ್ತಿ, 2,05,70 ಕೋಟಿ ಮೊತ್ತದ ಸ್ವಯಾರ್ಜಿತ ಸ್ವತ್ತುಗಳು, 10 ಲಕ್ಷ ರೂ. ಮೌಲ್ಯದ ಪಿತ್ರಾರ್ಜಿತ ಸ್ವತ್ತು ಹೊಂದಿದ್ದಾರೆ.

Advertisement

ಗೃಹಿಣಿಯಾಗಿರುವ ಅವರ ಪತ್ನಿ ಬಬಿತಾ ಅವರು 1,96,81,515 ರೂ. ಮೊತ್ತದ ಚರಾಸ್ತಿ, 10 ಲಕ್ಷ ರೂ.ಮೊತ್ತದ ಸ್ವಯಾರ್ಜಿತ ಆಸ್ತಿ ಹೊಂದಿದ್ದಾರೆ. ಮಗ ಚೇತನ್‌ಕುಮಾರ್‌ ಹೆಸರಲ್ಲಿ 7,70,301 ರೂ. ಮೌಲ್ಯದ ಚರಾಸ್ತಿ ಇದೆ.

ಬ್ಯಾಂಕು, ಹಣಕಾಸು ಸಂಸ್ಥೆಗಳಲ್ಲಿ ವಿಜಯಶಂಕರ್‌ ಹೆಸರಲ್ಲಿ 35 ಲಕ್ಷ ಸಾಲವಿದೆ. ಪತ್ನಿ ಹೆಸರಲ್ಲಿ ಯಾವುದೇ ಸಾಲವಿಲ್ಲ. ಬದಲಿಗೆ ಬಬಿತ ಅವರೇ ಪತಿ ವಿಜಯಶಂಕರ್‌ ಅವರಿಗೆ 15 ಲಕ್ಷ ರೂ. ಸಾಲ ನೀಡಿದ್ದಾರೆ.

ವಿಜಯಶಂಕರ್‌ ಕೈಯಲ್ಲಿ 2 ಲಕ್ಷ ರೂ. ಹಣ ಇದ್ದರೆ, ಬಬಿತಾ ಅವರ ಬಳಿ 15 ಸಾವಿರ ರೂ. ಹಣ ಇದೆ. ನಜರ್‌ಬಾದ್‌ನ ಕೆನರಾಬ್ಯಾಂಕ್‌ ಶಾಖೆಯ ಉಳಿತಾಯ ಖಾತೆಯಲ್ಲಿ 86,043.38 ರೂ. , ಬೆಂಗಳೂರಿನ ಶಾಸಕರ ಭವನದ ಅಪೆಕ್ಸ್‌ ಬ್ಯಾಂಕ್‌ ಶಾಖೆಯ ಚಾಲ್ತಿ ಖಾತೆಯಲ್ಲಿ 16,05,658.80 ರೂ. ಸಹರಾ ಇ-ಶೈನ್‌ ಸಹರಾ ಕ್ರೆಡಿಟ್‌ ಕೋ ಆಫ್ ಸೊಸೈಟಿಯಲ್ಲಿ 1,12,000 ರೂ. ಹೊಂದಿದ್ದಾರೆ.

ಬಬಿತಾ ಅವರು ಹುಣಸೂರಿನ ಎಸ್‌ಬಿಐ ಶಾಖೆಯಲ್ಲಿ 50,589 ರೂ. ಠೇವಣಿ ಇರಿಸಿದ್ದು, ಮೈಸೂರಿನ ನಜರ್‌ಬಾದ್‌ ಕೆನರಾಬ್ಯಾಂಕ್‌ ಶಾಖೆಯಲ್ಲಿ 72,56,308 ರೂ. ಠೇವಣಿ ಹೊಂದಿದ್ದಾರೆ. ಮೈಸೂರಿನ ನಜರ್‌ಬಾದ್‌ ಕೆನರಾಬ್ಯಾಂಕ್‌ ಶಾಖೆಯ ಉಳಿತಾಯ ಖಾತೆಯಲ್ಲಿ 1,11,863 ರೂ. ಹೊಂದಿದ್ದಾರೆ.

Advertisement

ವಿಜಯಶಂಕರ್‌ ಹೆಸರಲ್ಲಿ 25 ಸಾವಿರ ರೂ. ಮೌಲ್ಯದ 2013ರ ಮಾಡೆಲ್‌ನ ಹೊಂಡಾ ಆಕ್ಟೀವಾ ಸ್ಕೂಟರ್‌ ಇದ್ದರೆ, ಬಬಿತಾ ಅವರ ಹೆಸರಲ್ಲಿ 1.50 ಲಕ್ಷ ರೂ. ಮೌಲ್ಯದ 2009ರ ಮಾಡೆಲ್‌ನ ಮಾರುತಿ ಸ್ವಿಫ್ಟ್ ಕಾರು ಇದೆ.

ಮಗ ಚೇತನ್‌ಕುಮಾರ್‌ ಹೆಸರಲ್ಲಿ 2009ರ ಮಾಡೆಲ್‌ನ ಸುಜಕಿ ಆಕ್ಸಿಸ್‌ ಬೈಕ್‌ ಇದೆ. 30 ಗ್ರಾಂ ಚಿನ್ನಾಭರಣ ಹೊಂದಿದ್ದಾರೆ. ಬ್ಯಾಡಗಿ ತಾಲೂಕು ಗುಮ್ಮನಹಳ್ಳಿಯಲ್ಲಿ 1.34 ಎಕರೆ ಪಿತ್ರಾರ್ಜಿತ ಆಸ್ತಿ ಹೊಂದಿದ್ದು, ಇದರ ಮಾರುಕಟ್ಟೆ ಮೌಲ್ಯ 10 ಲಕ್ಷ ಎಂದು ಅಂದಾಜಿಸಲಾಗಿದೆ.

ಬೆಂಗಳೂರಿನ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ 2007ರಲ್ಲಿ ಖರೀದಿಸಿದ ನಿವೇಶನದ ವ್ಯಾಜ್ಯ ಹೈಕೋರ್ಟ್‌ನಲ್ಲಿರುವುದರಿಂದ ಅದರ ಮಾರುಕಟ್ಟೆ ಮೌಲ್ಯ ಅಂದಾಜಿಸಿಲ್ಲ. ಅಕ್ಕ ಸರೋಜಮ್ಮ ಅವರಿಗೆ 15 ಲಕ್ಷ, ಅಕ್ಕನ ಮಗ ಮಾಲತೇಶ್‌ರಿಂದ 5 ಲಕ್ಷ , ಪತ್ನಿ ಬಬಿತಾ ಅವರಿಂದ 15 ಲಕ್ಷ ಸಾಲ ಪಡೆದಿದ್ದಾರೆ. ಬಬಿತಾ ಅವರ ಬಳಿ 12 ಲಕ್ಷ ಮೊತ್ತದ 400 ಗ್ರಾಂ ಚಿನ್ನಾಭರಣ, 2.25 ಲಕ್ಷ ಮೊತ್ತದ 5 ಕೆ.ಜಿ ಬೆಳ್ಳಿ ಪದಾರ್ಥಗಳಿದೆ.

Advertisement

Udayavani is now on Telegram. Click here to join our channel and stay updated with the latest news.

Next