Advertisement
ದೇವಸ್ಥಾನದಲ್ಲಿ ಬಹಳ ವರ್ಷಗಳಿಂದಲೂ ಆರು ಹುಂಡಿಗಳಿದ್ದರೂ, ಭಕ್ತರಿಗೆ ತೊಂದರೆಯಾಗುವ ರೀತಿಯಲ್ಲಿ ದೊಡ್ಡದಾದ ಮತ್ತೆ ಮೂರು ಹುಂಡಿ ಪೆಟ್ಟಿಗೆಗಳನ್ನು ಇರಿಸಿ ಭಕ್ತರಿಂದ ಹಣ ಸಂಗ್ರಹಿಸುವುದೇ ನಮ್ಮ ಗುರಿ ಎಂದು ಬಿಂಬಿಸಿಕೊಂಡಿದ್ದಾರೆ.
Related Articles
Advertisement
ಹೊಸದಾಗಿ ದೊಡ್ಡ ಹುಂಡಿಗಳನ್ನು ಇರಿಸಿರುವ ಕುರಿತು ಪಟ್ಟಣದ ಅನೇಕರು ಮುಖಂಡರು, ಸಾರ್ವಜನಿಕರು ಅಧಿಕಾರಿಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿ ಪ್ರಶ್ನಿಸಿದಾಗ, ತಮ್ಮದೇ ಮೊಂಡು ವಾದವನ್ನು ಅಧಿಕಾರಿಗಳು ಇರಿಸಿದ್ದಾರೆ. ಭಕ್ತರಿಗೆ ಅನುಕೂಲವಾಗುವಂತೆ ಹುಂಡಿ ಇರಿಸಿದ್ದೇವೆ. ಈಗ ಇಟ್ಟಿರುವ ಹುಂಡಿಗಳಿಂದ ಭಕ್ತರಿಗೆ ತೊಂದರೆಯಿಲ್ಲ. ತೊಂದರೆ ಎಂದು ಭಕ್ತರು ಹೇಳಿದರೆ ತೆಗೆಯುತ್ತೇವೆ ಎಂದು ಉಡಾಫೆ ಉತ್ತರ ನೀಡಿದ್ದಾರೆ. ದೊಡ್ಡ ದೇವಸ್ಥಾನಗಳಲ್ಲಿ ಇಂತಹ ಹುಂಡಿಗಳಿವೆ ಎಂತಲೂ ಕೆಟ್ಟ ಸಮರ್ಥನೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ರೀತಿ ಆಕ್ಷೇಪ ವ್ಯಕ್ತಪಡಿಸಿದರಿಗೆ ನೀವು ಅರ್ಚಕರ ಪರವಾಗಿ ಮಾತನಾಡುತ್ತಿದ್ದೀರಿ, ಅವರು ನಿಯಮ ಮೀರಿ ಹುಂಡಿ ಇರಿಸಿಕೊಂಡಿದ್ದಾರೆ. ಅದರ ವಿರುದ್ಧ ಏಕೆ ಮಾತಾಡುತ್ತಿಲ್ಲ ಎಂದು ಮರು ಪ್ರಶ್ನೆ ಹಾಕಿದ್ದಾರೆ. 3 ದೊಡ್ಡ ಹುಂಡಿಗಳನ್ನು ಮಾಡಿಸಲು ಎಷ್ಟು ಹಣ ಖರ್ಚಾಗಿದೆ ಎಂಬುದಕ್ಕೆ ಧಾರ್ಮಿಕ ಇಲಾಖೆ ಎಸಿಯವರಿಗೆ ಮಾಹಿತಿಯೇ ಇಲ್ಲದಿರುವುದು ಅನುಮಾನ ಮೂಡಿಸಿದೆ.-ರಾಮಲಿಂಗ ರೆಡ್ಡಿ ಮುಜರಾಯಿ ಸಚಿವ.. ಹಾಲಿ ಇರುವ ಹುಂಡಿಗಳ ಜೊತೆಗೆ ಭಕ್ತರಿಗೆ ಅನುಕೂಲಕ್ಕೆ ಹೊಸ ಹುಂಡಿಗಳನ್ನು ಇಒ ಇರಿಸಿದ್ದಾರೆ. ಇದರಿಂದ ಯಾರಿಗೂ ತೊಂದರೆಯಿಲ್ಲ. ಹಣ ಸಂಗ್ರಹ ಮಾಡಬೇಕು. ಭಕ್ತರಿಗೆ ತೊಂದರೆ ಎಂದು ಮನವಿ ಬಂದರೆ ತೆಗೆಯುತ್ತೇವೆ. ಮೂರು ಹುಂಡಿಗಳನ್ನು ಮಾಡಿಸಲು ಎಷ್ಟು ಹಣ ಖರ್ಚಾಗಿದೆ ಎಂಬ ಮಾಹಿತಿ ಇಲ್ಲ.
-ಗಂಗಾಧರಪ್ಪ, ಎಸಿ, ಧಾರ್ಮಿಕ ಇಲಾಖೆ, ವಿಜಯನಗರ ಬಳ್ಳಾರಿ. ದೇವಸ್ಥಾನದಲ್ಲಿ ಸ್ಥಳಾವಕಾಶದ ಕೊರತೆಯಿದೆ. ಹಾಲಿ ಆರು ಹುಂಡಿಗಳಿದ್ದರೂ, ಮತ್ತೆ 3 ದೊಡ್ಡ ಬಾಕ್ಸ್ ಗಳನ್ನು ಮಾಡುವ ಅವಶ್ಯತೆ ಇರಲಿಲ್ಲ. ಧರ್ಮಕರ್ತರಾದ ನಮಗೆ ಇದರ ಮಾಹಿತಿಯನ್ನೂ ಇಒ ನೀಡಿಲ್ಲ.
-ಎಎಚ್ಎಂ ಶೇಖರಯ್ಯ, ಧರ್ಮಕರ್ತ, ಶ್ರೀ ಕೊಟ್ಟೂರೇಶ್ವರ ದೇವಸ್ಥಾನ ಕೊಟ್ಟೂರು. ದೇವಸ್ಥಾನದಕ್ಕೆ ಬರುವ ಭಕ್ತರಿಗೆ ಸ್ವಾಮಿ ದರ್ಶನಕ್ಕೆ, ಇತರೆ ಸೌಲಭ್ಯಕ್ಕೆ ಆದ್ಯತೆ ನೀಡಬೇಕಾದ ಅಧಿಕಾರಿಗಳು, ದೇವಸ್ಥಾನದ ತುಂಬೆಲ್ಲಾ ಹುಂಡಿಗಳನ್ನು ಇರಿಸಿ, ವಾಣಿಜ್ಯೀಕರಣ ಮಾಡ ಹೊರಟಿರುವುದು ಖಂಡನೀಯ. ಬಹಳ ವರ್ಷಗಳಿಂದ ಇರುವ ಆರು ಹುಂಡಿಗಳ ಹೊರತು ಮತ್ತೆ ಹೆಚ್ಚುವರಿ ಹುಂಡಿ ಇರಿಸದಂತೆ ಅಧಿಕಾರಿಗಳಿಗೆ ಹೇಳಿದರೂ ತಮ್ಮದೇ ವಾದ ಮಾಡಿದ್ದಾರೆ.
-ಎಂಎಅಜೆ ಹರ್ಷವರ್ಧನ, ಜಿಪಂ ಮಾಜಿ ಸದಸ್ಯ, ಕೊಟ್ಟೂರು.
-ಪಿ.ಎಚ್.ದೊಡ್ಡರಾಮಣ್ಣ, ಜಿಪಂ ಮಾಜಿ ಉಪಾಧ್ಯಕ್ಷ, ಕೊಟ್ಟೂರು.