Advertisement

2.30 ಲಕ್ಷ ಬಗರ್‌ಹುಕುಂ ಅರ್ಜಿ ತಿರಸ್ಕೃತ: ಕೃಷ್ಣ ಭೈರೇಗೌಡ ಮಾಹಿತಿ

12:19 AM Dec 10, 2024 | Team Udayavani |

ಬೆಳಗಾವಿ: ರಾಜ್ಯದಲ್ಲಿ ಈವರೆಗೆ 2.30 ಲಕ್ಷ ಬಗರ್‌ಹುಕುಂ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಉಳಿದಂತೆ ಬಗರ್‌ಹುಕುಂ ಸಾಗುವಳಿ ಸಮಿತಿಗಳಲ್ಲಿ ನಿರ್ಣಯವಾಗಿದ್ದರೂ ಈವರೆಗೆ 10,651 ಪ್ರಕರಣಗಳಲ್ಲಿ ಖಾತೆ ಮಾಡಿಕೊಟ್ಟಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಸದನಕ್ಕೆ ಮಾಹಿತಿ ನೀಡಿದ್ದಾರೆ.

Advertisement

ಶಾಸಕ ಟಿ.ಬಿ. ಜಯಚಂದ್ರ ಮತ್ತು ಧೀರಜ್‌ ಮುನಿರಾಜು ಕೇಳಿದ್ದ ಎರಡು ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಕೃಷಿಕರೇ ಅಲ್ಲ ಎಂಬ ಕಾರಣಕ್ಕೆ 3,270 ಅರ್ಜಿ, ಕೆರೆ, ಶ್ಮಶಾನ, ದೇವರ ಕಾಡು ಎಂಬ ಕಾರಣಕ್ಕೆ 27,452 ಅರ್ಜಿ, ನಗರದ ಬಫರ್‌ವಲಯದ ವ್ಯಾಪ್ತಿಗೆ ಬಂದ 33 ಸಾವಿರಕ್ಕೂ ಹೆಚ್ಚು ಅರ್ಜಿ, ಅರಣ್ಯ ಜಮೀನಿಗೆ ಸಂಬಂಧಿಸಿದಂತೆ 12 ಸಾವಿರ ಅರ್ಜಿ ಸೇರಿ ವ್ಯವಸಾಯ ಮಾಡದ, ಬೇರೆಡೆ ವಾಸಿಸುವವರ ಮತ್ತು ಕುಟುಂಬದ ಬಳಿ ಈಗಾಗಲೇ 5 ಎಕರೆಗಿಂತ ಹೆಚ್ಚು ಜಮೀನಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸೂಕ್ತ ಕಾರಣವಿಲ್ಲದೆ ಖಾತೆ ಮಾಡಿಕೊಡದ ಪ್ರಕರಣವಿದ್ದರೆ ಆ ಬಗ್ಗೆ ಎಸಿಗಳ ಬಳಿ ದೂರು ನೀಡಬಹುದು ಎಂದು ಅವರು ಹೇಳಿದರು. ಗೋಮಾಳದಲ್ಲಿ ಉಳುಮೆ ಮಾಡುತ್ತಿರುವವರಿಗೆ ಆ ಜಾಗ ಮಂಜೂರು ಮಾಡಲು ಸುಪ್ರೀಂ ಕೋರ್ಟ್‌ನ ತೀರ್ಪು ಅವಕಾಶ ನೀಡುತ್ತಿಲ್ಲ. ಸುಪ್ರೀಂ ಕೋರ್ಟ್‌ ಆದೇಶದಂತೆ ಗೋಮಾಳವನ್ನು ಅನ್ಯ ಉದ್ದೇಶಕ್ಕೆ ನೀಡುವಂತಿಲ್ಲ ಹೇಳಿದರು.

ತಾಲೂಕು ಕಚೇರಿಗೆ ಜಾಗವಿಲ್ಲ
ರಾಜ್ಯದಲ್ಲಿ ಹೊಸದಾಗಿ ಮಂಜೂರು ಆಗಿರುವ 24 ತಾಲೂಕಿನಲ್ಲಿ 8-10 ತಾಲೂಕಿನ ತಾಲೂಕು ಕಚೇರಿ ಸ್ಥಾಪಿಸಲು ತಾಲೂಕು ಕೇಂದ್ರದಲ್ಲಿ ಜಾಗವಿಲ್ಲದಂತಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next