Advertisement

Vijayapura; ಹಿಟ್ನಳ್ಳಿ ಕೃಷಿ ಕಾಲೇಜಿನ ಆವರಣದಲ್ಲಿ 21 ರಿಂದ ಮೂರು ದಿನ ಕೃಷಿಮೇಳ

01:19 PM Jan 18, 2024 | keerthan |

ವಿಜಯಪುರ: ವಿಜಯಪುರ ನಗರದ ಹೊರ ವಲಯದಲ್ಲಿರುವ ಹಿಟ್ನಳ್ಳಿ ಕೃಷಿ ಕಾಲೇಜಿನ ಆವರಣದಲ್ಲಿ ಜ.21ರಿಂದ ಮೂರು ದಿನಗಳ ಕಾಲ ಕೃಷಿಮೇಳ ಆಯೋಜಿಸಲಾಗಿದೆ.

Advertisement

ಗುರುವಾರ ಹಿಟ್ನಳ್ಳಿ ಕೃಷಿ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೃಷಿಮೇಳದ ವಿವರ ನೀಡಿದ ಕೃಷಿ ಕಾಲೇಜಿನ ಡೀನ್ ಹಾಗೂ ಕೃಷಿಮೇಳದ ಅಧ್ಯಕ್ಷ ಡಾ.ಎ.ಭೀಮಪ್ಪ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಜ.21 ರಿಂದ 23 ರವರೆಗೆ ವಿಜಯಪುರದ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ  ಸುಸ್ಥಿರ ಕೃಷಿಗಾಗಿ ಬರ ನಿರ್ವಹಣೆ ಘೋಷವಾಕ್ಯದೊಂದಿಗೆ ಕೃಷಿ ಮೇಳ-24 ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಜ.21 ರಂದು ಬೆಳಿಗ್ಗೆ 11ಕ್ಕೆ ಕೃಷಿ ಸಚಿವ ಚಲುವರಾಯಸ್ವಾಮಿ ಕೃಷಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ಕೃಷಿ ವಸ್ತು ಪ್ರದರ್ಶನ  ಉದ್ಘಾಟಿಸಲಿದ್ದಾರೆ. ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಕೃಷಿ ಪ್ರಕಟಣೆ ಬಿಡುಗಡೆ ಮಾಡಲಿದ್ದಾರೆ. ನಾಗಠಾಣ ಶಾಸಕ ವಿಠ್ಠಲ ಕಟದೊಂಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ-2 ಪ್ರಕಾಶ ಹುಕ್ಕೇರಿ, ಸಂಸದ ರಮೇಶ ಜಿಗಜಿಣಗಿ, ಜಿಲ್ಲೆಯ ಶಾಸಕರಾದ ಯಶವಂತರಾಯಗೌಡ ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ಹಣಮಂತ ನಿರಾಣಿ, ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ, ಪಿ.ಎಚ್.ಪೂಜಾರ, ಸಿ.ಎಸ್.ನಾಡಗೌಡ, ರಾಜುಗೌಡ ಪಾಟೀಲ, ಆಶೋಕ ಮನಗೂಳಿ, ಹಿಟ್ಟಿನಹಳ್ಳಿ ಗ್ರಾ.ಪಂ ಅಧ್ಯಕ್ಷ ರವಿಕುಮಾರ ಕಡಿಮನಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಜ.23 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ, ನಾಗಠಾಣ ಶಾಸಕ ವಿಠ್ಠಲ ಕಟದೊಂಡ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

Advertisement

ಜ. 21 ರಂದು ಮಧ್ಯಾಹ್ನ 2 ಗಂಟೆಯಿಂದ ಹವಾಮಾನ ವೈಪರಿತ್ಯದ ಪರಿಣಾಮಗಳು, ನಿರ್ವಹಣೆ, ಬರ ನಿರ್ವಹಣೆಗಾಗಿ ಕೃಷಿ ತಂತ್ರಜ್ಞಾನಗಳು, ರೈತರಿಂದ ರೈತರಿಗೆ ಕಾರ್ಯಕ್ರಮ-ಪ್ರಶಸ್ತಿ ವಿಜೇತ ರೈತರಿಂದ ಅನುಭವ ಹಂಚಿಕೆ,  ಕಾರ್ಯಕ್ರಮಗಳು ನಡೆಯಲಿವೆ.

ಜ. 22 ರಂದು ಬೆ.11 ರಿಂದ ಮ. 1 ಗಂಟೆವರೆಗೆ ಸಾವಯವ, ನೈಸರ್ಗಿಕ ಕೃಷಿ, ರೈತರಿಂದ ರೈತರಿಗೆ ಕಾರ್ಯಕ್ರಮ- ಪ್ರಶಸ್ತಿ ವಿಜೇತ ರೈತರಿಂದ ಅನುಭವ ಹಂಚಿಕೊಳ್ಳುವ ಕಾರ್ಯಕ್ರಮ ಇರಲಿದೆ ಎಂದರು.

ಜ. 23 ರಂದು ಬೆಳಿಗ್ಗೆ 11 ರಿಂದ ಮ. 1 ಗಂಟೆವರೆಗೆ ಸುಸ್ಥಿರ ಕೃಷಿಗಾಗಿ ಉಪ ಕಸುಬುಗಳು, -ಪ್ರಶಸ್ತಿ ವಿಜೇತ ರೈತರಿಂದ ಅನುಭವ ಹಂಚಿಕೆ,  ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next