Advertisement
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸನಾತನ ಹಿಂದೂ ಧರ್ಮದ ಪಾವಿತ್ರ‍್ಯತೆ ಹಾಳು ಮಾಡುವ ಕೆಲಸವಾಗುತ್ತಿದೆ. ಕಾಂಗ್ರೆಸ್, ವೈಎಸ್‌ಆರ್ ಕಾಂಗ್ರೆಸ್ ಸೇರಿದಂತೆ ಅನೇಕರು ಈ ಕೆಲಸ ಮಾಡುತ್ತಿದ್ದಾರೆ. ಮಾಜಿ ಸಿಎಂ ಜಗನ್ ಕ್ರಿಶ್ಚಿಯನ್. ಅವರ ಚಿಕ್ಕಪ್ಪ ತಿರುಪತಿ ದೇವಸ್ಥಾನದ ಮಂಡಳಿಯಲ್ಲಿ ಅಧ್ಯಕ್ಷರಾಗಿದ್ದ. ಅವನೂ ಕ್ರಿಶ್ಚಿಯನ್. ಹಿಂದೂ ಹೆಸರಲ್ಲಿ ಇವರೆಲ್ಲ ಇದನ್ನು ಮಾಡಿದ್ದಾರೆ. ಹೀಗಾಗಿ ಹಿಂದೂ ದೇವಸ್ಥಾನಗಳ ಆಡಳಿತ ಮಂಡಳಿಗಳಿಗೆ ಹಿಂದೂಗಳೇ ಅಧ್ಯಕ್ಷರಿರಬೇಕು. ಹಿಂದೂಯೇತರರನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.
Related Articles
Advertisement
ಮುಸ್ಲಿಂ ಮತ್ತು ಅಹಿಂದ ನಾಯಕರು ತಮ್ಮ ಹೇಳಿಕೆಯನ್ನು ಖಂಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಅಂಬೇಡ್ಕರ್ ಅವರ ಬಗ್ಗೆ ಸರಿಯಾಗಿ ಓದಿದ್ದರೆ, ಸ್ವಾಭಿಮಾನ ಅಂಬೇಡ್ಕರ್ ಬಗ್ಗೆ ಗೌರವವಿದ್ದರೆ, ಇವರು ಟಿಪ್ಪು ಮತ್ತು ಆತನ ಜೀವನದ ಬೆನ್ನು ಹತ್ತಲ್ಲ. ಈ-ಹಿಂದ, ಅ-ಹಿಂದ ನಾಯಕರ ಕೆಲಸ ಏನಿದೆ?. ಟಿಪ್ಪು ಸುಲ್ತಾನ್, ಔರಂಗಜೇಬ್ ಬಗ್ಗೆ ನಾನು ಎಷ್ಟೇ ಬೈಯ್ದರೂ, ಅದಕ್ಕೆ ನಾನು ಕ್ಷಮೆ ಬೇಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಆದರೆ, ಪಾಪ ಪೊಲೀಸರ ಮೇಲೆ ಒತ್ತಡ ಹಾಕಿದ ಕಾರಣಕ್ಕೆ ಅವರು ನನ್ನ ಮೇಲೆ ಸುಮೋಟೋ ಕೇಸ್ ಹಾಕಿದ್ದಾರೆ. ಅದು ಪೊಲೀಸರ ತಪ್ಪಲ್ಲ. ತಪ್ಪೇನಿದ್ದರೂ ಅಲ್ಲಿಯ ಸಚಿವರದ್ದು. ಇಲ್ಲೊಬ್ಬ ಸಚಿವ ಕಳೆದ ಲೋಕಸಭಾ ಚುನಾವಣೆಯಲ್ಲಿ ತನ್ನ ಮಗಳನ್ನು ಅಲ್ಲಿ ನಿಲ್ಲಿಸಿದ್ದ. ಅಲ್ಲಿ ಅವಮಾನಕಾರಿಯಾಗಿ ಸೋಲುಂಡ ಕಾರಣ ಒತ್ತಡದಿಂದ ನನ್ನ ಮೇಲೆ ಪೊಲೀಸರ ಮೂಲಕ ಕೇಸ್ ಹಾಕಿಸಿದ್ದಾರೆ ಎಂದು ದೂರಿದರು.