Advertisement

Vijayapura: ಸದಾಶಿವ ಆಯೋಗದ ವರದಿ ಜಾರಿಗೆ ಮಾದಿಗ ದಂಡೋರಾ ಆಗ್ರಹ

02:19 PM Feb 14, 2024 | Team Udayavani |

ವಿಜಯಪುರ: ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ವಿಜಯಪುರ ಜಿಲ್ಲಾ ಕೇಂದ್ರದಲ್ಲಿ ಫೆ.16 ರಂದು ಹಲಗೆ ಚಳವಳಿ ನಡೆಯಲಿದೆ. ನಮ್ಮ ಸಂಘಟನೆಯಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲು ಯೋಜಿಸಿದ್ದಾಗಿ ಮಾದಿಗ ದಂಡೋರಾ ಮೀಸಲು ಹೋರಾಟ ಸಮಿತಿ ತಿಳಿಸಿದೆ.

Advertisement

ಫೆ.14ರ ಬುಧವಾರ ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಪ್ರಭಾಕರ ಹದನೂರು, ಜಿಲ್ಲಾಧ್ಯಕ್ಷ ಮುತ್ತಣ್ಣ ಸಾಸನೂರ, ಮಾದಿಗ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪರಿಸಲು ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರಕ್ಕೆ ಸದಾಶಿವ ಆಯೋಗದ ವರದಿ ಜಾರಿಗೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.

ವಿಜಯಪುರ ನಗದಲ್ಲಿ ಫೆ.16 ರಂದು ಬೃಹತ್ ಪ್ರತಿಭಟನಾ ರ್ಯಾಲಿ ಮೂಲಕ ಹಲಗೆ ಚಳವಳಿಗೆ ಚಾಲನೆ ನೀಡಲಾಗುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ಮಹಾತ್ಮಾ ಗಾಂಧೀಜಿ ವೃತ್ತದಿದ ಜಿಲ್ಲಾಧಿಕಾರ ಕಚೇರಿ ತೆರಳಿ ಮನವಿ ಸಲ್ಲಿಸಲಾಗುತ್ತದೆ ಎಂದು ವಿವರಿಸಿದರು.

ಹಲವು ದಶಕಗಳ ಹೋರಾಟ, ಹಲವು ಸರ್ಕಾರಗಳು, ಮುಖ್ಯಮಂತ್ರಿಗಳಿಗೆ ನೀಡಿದ ಮನವಿ, ಬಳಿಕ 2005 ರಲ್ಲಿ ಮೀಸಲಾತಿ ತಾರತಮ್ಯ ನಿವಾರಣೆಗೆ ನ್ಯಾ.ಸದಾಶಿವ ಆಯೋಗವನ್ನು ರಚಿಸಿತ್ತು. ನ್ಯಾ.ಸದಾಶಿವ ಆಯೋಗ ಸತತ 7 ವರ್ಷಗಳ ಕಾಲ ರಾಜ್ಯದ ಹಳ್ಳಿಗಳಲ್ಲೆಲ್ಲ ಸಂಚರಿಸಿ ಪರಿಶಿಷ್ಟ ಜಾತಿಯಲ್ಲಿರುವ ಗೊಂದಲ ನಿವಾರಿಸಿ, 101 ಜಾತಿ-ಉಪ ಜಾತಿಗಳಲ್ಲಿ ಮಾದಿ ಸಮುದಾಯ ಜನಸಂಖ್ಯೆಯಲ್ಲಿ ಹೆಚ್ಚಿರುವುದನ್ನು ಮನಗಂಡಿದೆ ಎಂದರು.

ನ್ಯಾ.ಸದಾಶಿವ ಆಯೋಗ ಜನಸಂಖ್ಯೆಗೆ ಅನುಗುಣವಾಗಿ ಕ್ರಮವಾಗಿ ಶೇ. 33.4 ರಷ್ಟು ಜನಸಂಖ್ಯೆ ಇರುವ ಮಾದಿಗ ಸಂಬಂಧಿತ ಜಾತಿಗಳಿಗೆ ಶೇ.6 ರಷ್ಟು ಮೀಸಲಾತಿಯನ್ನು, ಶೇ. 30 ರಷ್ಟಿರುವ ಹೊಲೆಯ ಸಹ ಸಂಬಂಧಿತ ಜಾತಿಗಳಿಗೆ ಶೇ.5 ರಷ್ಟು ಮೀಸಲಾತಿ ನೀಡಬೇಕು. ಶೇ.10.94 ರಷ್ಟಿರುವ ಅಲೇಮಾರಿ ಅಸ್ಪಶ್ಯ ಇತರೆ ಜಾತಿಗಳಿಗೆ ಶೇ.1 ರಷ್ಟು ಮೀಸಲಾತಿ, ಶೇ.23.63 ರಷ್ಟಿರುವ ಸ್ಪøಶ್ಯ ಜಾತಿಗಳಿಗೆ ಶೇ. 3 ರಷ್ಟು ಮೀಸಲಾತಿ ನಿಗದಿ ಮಾಡಲು 2012 ರಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದೆ ಎಂದು ವಿವರಿಸಿದರು.

Advertisement

ಕೂಡಲೇ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಸಚಿವ ಸಂಪುಟದ ಸಭೆಯಲ್ಲಿ ನ್ಯಾ.ಸದಾಶಿವ ಆಯೋಗ ವರದಿ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿಬೇಕು. ಇದಕ್ಕಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರz ಮೇಲೆ ಒತ್ತಡ ಹೇರಲು ಫೆ.16 ರಂದು ಹಲಗೆ ಚಳವಳಿ ಮೂಲಕ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಸಂಘಟನೆಯ ಪ್ರಮುಖರಾದ ಡಿ.ಬಿ.ಮದೂರ, ಚಂದ್ರಕಾಂತ ಸಗರಕರ, ಪುಂಡಲೀಕ ಮಾದರ, ಸಾಯಿಬಣ್ಣ ರಾಮರಥ, ಅಶೋಕ ರೂಗಿ, ತಿಪ್ಪಣ್ಣ ಮಾದರ, ಸೋಮು ಬಿರಲದಿನ್ನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next