Advertisement
ನಗರದ ಡಾ.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, “ಲಿಂಗಾಯತ ಧರ್ಮದ ಐತಿಹಾಸಿಕ ಹಿನ್ನೆಲೆಯನ್ನು ದಾಖಲೆ ಸಹಿತ ಸತ್ಯ ಹೇಳುವ ನಮ್ಮ ವಿರುದ್ಧ ನನ್ನ ಕ್ಷೇತ್ರದಲ್ಲಿ ಅಪಪ್ರಚಾರ ನಡೆಸಿದ್ದು, ಇಂಥ ಯಾವುದೇ ಅಪಪ್ರಚಾರದ ಹುನ್ನಾರ ನಡೆಸಿದರೂ 50 ಸಾವಿರ ಮತಗಳಿಂದ ನಾನು ಗೆಲ್ಲುವುದು ಖಚಿತ ಎಂದು ನನ್ನ ಕ್ಷೇತ್ರದ ಜನತೆ ನಿರ್ಧರಿಸಿದ್ದಾರೆ’ ಎಂದರು.
Related Articles
Advertisement
ವಿಶೇಷವೆಂದರೆ 1881ರ ಜನಗಣತಿಯಲ್ಲಿಯೂ ವೀರಶೈವ ಎಂಬ ಪದಪ್ರಯೋಗವೇ ಇಲ್ಲ. ಈ ಜನಗಣತಿಯಲ್ಲಿ ಪಂಚಾಚಾರ್ಯರು ಹಾಗೂ ಅಯ್ಯನವರು ಮೊದಲಾದವರನ್ನು ಶೂದ್ರ ಪಂಗಡಕ್ಕೆ ಸೇರಿಸಲಾಗಿತ್ತು. 1891ರಲ್ಲಿ ಮೊದಲ ಬಾರಿಗೆ ಗಾಂಜಾಂ ಮಠದ ನಂಜುಂಡ ಸ್ವಾಮಿಗಳು 1881ರ ಜನಗಣತಿ ವಿಚಾರವಾಗಿ ಮಹಾರಾಜ ಚಾಮರಾಜೇಂದ್ರ ಒಡೆಯರ ಅವರನ್ನು ಭೇಟಿಯಾಗಿ ಸಲ್ಲಿಸಿದ ಮನವಿಯಲ್ಲಿ ವೀರಶೆ„ವ ಬ್ರಾಹ್ಮಣ ಎಂಬ ಪದ ಪ್ರಯೋಗವಾಗಿದೆ.
ವೀರಶೈವ ಮತವನ್ನು ಶೂದ್ರ ತರಗತಿಯಲ್ಲಿ ಸೇರಿಸಿರುವುದಕ್ಕೆ ಅಪಮಾನವಾಗಿದ್ದು ಈ ದುಃಖದಿಂದ ತಮ್ಮನ್ನು ಪಾರು ಮಾಡಬೇಕೆಂದು ಕೋರಲಾಗಿತ್ತು. ಆ ಪತ್ರವೂ ನಮಗೆ ಲಭಿಸಿದೆ ಎಂದರು.
ಈ ಐತಿಹಾಸಿಕ ಪ್ರಮಾದ ಸರಿಪಡಿಸುವುದಕ್ಕಾಗಿ ನಮ್ಮ ಹಿರಿಯರು ಸಾಕಷ್ಟು ಹೋರಾಟ ಮಾಡಿದ್ದರು. 1942ರಲ್ಲಿ ಸೊಲ್ಲಾಪುರದ ಕೆ.ಎಸ್. ಸರ್ದಾರ್ ಅಧ್ಯಕ್ಷತೆಯಲ್ಲಿ ನಡೆದ ಆಲ್ ಇಂಡಿಯಾ ಲಿಂಗಾಯತ ಅಡ್ವೆ$çಸರಿ ಕಮಿಟಿ ಫಾರ್ ರಿಕ್ರೂಟಿಂಗ್ ಸಭೆಯ ನಡಾವಳಿಯಲ್ಲಿಯೂ ಲಿಂಗಾಯತರಿಗೆ ಪ್ರತ್ಯೇಕ ಸ್ಥಾನಮಾನ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗಿತ್ತು ಎಂದರು.
ಗದಗನ ಡಾ. ಸಿದ್ಧಲಿಂಗ ಶ್ರೀಗಳು, ಇಳಕಲ್‌ನ ಡಾ. ಮಹಾಂತ ಶ್ರೀಗಳು, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು, ನಾಗನೂರು ಶ್ರೀಗಳು, ಭಾಲ್ಕಿ ಪಟ್ಟದದೇವರು, ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾಂದ ಶ್ರೀಗಳು, ರಾಷ್ಟ್ರೀಯ ಬಸವಸೇನೆಯ ರಾಷ್ಟ್ರೀಯ ಅಧ್ಯಕ್ಷ, ಗಣಿ ಸಚಿವ ವಿನಯ ಕುಲಕರ್ಣಿ, ಸಚಿವರಾದ ಆರ್.ಬಿ. ತಿಮ್ಮಾಪುರ, ಶರಣಪ್ರಕಾಶ ಪಾಟೀಲ, ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ನಿವೃತ್ತ ಐಎಎಸ್ ಅಧಿ ಕಾರಿ ಡಾ. ಎಸ್.ಎಂ.ಜಾಮದಾರ, ಮಾಜಿ ಶಾಸಕ ಡಾ. ಎಂ.ಪಿ.ನಾಡಗೌಡ, ಸಂಸದ ಪ್ರಕಾಶ ಹುಕ್ಕೇರಿ, ಶಾಸಕರಾದ ಬಿ.ಆರ್. ಪಾಟೀಲ ಆಳಂದ, ಗಣೇಶ ಹುಕ್ಕೇರಿ, ಪ್ರಕಾಶ ತಪಶಟ್ಟಿ ಇತರರು ಇದ್ದರು.