Advertisement

ವಿಜಯಪುರದಲ್ಲಿ ಮುಂದುವರೆದ ಸರಣಿ ಭೂಕಂಪ : ಅಧ್ಯಯನಕ್ಕೆ ಬಂದ ತಜ್ಞರಿಗೂ ಕಂಪನದ ಅನುಭವ

04:06 PM Aug 26, 2022 | Team Udayavani |

ವಿಜಯಪುರ: ವಿಜಯಪುರ ಜಿಲ್ಲೆಯಾದ್ಯಂತ ಸರಣಿ ಭೂಕಂಪನ ಮುಂದುವರೆದಿದೆ. ಇದರ‌ ಮಧ್ಯೆ ಭೂಕಂಪನ ಆಧ್ಯಯನಕ್ಕಾಗಿ ಬೆಂಗಳೂರಿನಿಂದ ಭೂಗರ್ಭ ತಜ್ಞರ ತಂಡ ಜಿಲ್ಲೆಯಲ್ಲಿ ಭೂಕಂಪಕ್ಕೆ ಕಾರಣ ಹುಡುಕುವಲ್ಲಿ ನಿರತವಾಗಿದೆ.

Advertisement

ಜಿಲ್ಲಾಡಳಿತದ ಕೋರಿಕೆ ಮೇರೆಗೆ ರಾಜ್ಯ ಸರ್ಕಾರ ಬೆಂಗಳೂರಿನ ಭೂಗರ್ಭ ವೈಜ್ಞಾನಿಕ ಆಧಿಕಾರಿ ಜಗದೀಶ್ ಹಾಗೂ ಸಹಾಯಕ ವೈಜ್ಞಾನಿಕ ಆಧಿಕಾರಿ ರಮೇಶ ತಿಪ್ಪಾಲ ಅವರನ್ನು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಭೂಮಿ ಕಂಪಿಸುತ್ತಿದ್ದು, ವಾಸ್ತವಿಕ ಕಾರಣ, ಅದರ ಬಾದಕ ಸ್ಥಿತಿ ಅರಿಯಲು ಮುಂದಾಗಿದೆ.

ಅಚ್ಚರಿಯ ಸಂಗತಿ ಎಂದರೆ ಭೂಗರ್ಭ ಶಾಸ್ತ್ರ ತಜ್ಞರು ಭೂಕಂಪಕ್ಕೆ ಕಾರಣ ಹುಡುಕಲು ಜಿಲ್ಲೆಗೆ ಅಧ್ಯಯನ ನಡೆಸಲು ಜಿಲ್ಲೆ ಭೇಟಿ ನೀಡಿದ ದಿನವೇ ಹಲವು ಬಾರಿ ಭೂಕಂಪನವಾಗಿದೆ

ಗುರುವಾರ ಸಂಜೆ 4-30 ಕ್ಕೆ ಮತ್ತೆ ಭೂಕಂಪನ ಆಗಿದ್ದು, 3.4 ತೀವ್ರತೆ ದಾಖಲಿಸಿದ್ದರೆ, ರಾತ್ರಿ 9-51 ಕ್ಕೆ ಸಂಭವಿಸಿದ ಭೂಕಂಪನದ ತೀವ್ರತೆ 3.6 ರಷ್ಟಿತ್ತು. ಈ ಮಧ್ಯೆ ಶುಕ್ರವಾರ ಬೆಳಗಿನಜಾವ 2-21 ಕ್ಕೆ ಮತ್ತೆ ಕಂಪಿಸಿದ ಭೂಮಿ 2.4 ರಷ್ಟು ಭೂಕಂಪನ ದಾಖಲಿಸಿದ್ದರೆ, ಬೆಳಿಗ್ಗೆ 6-58 ಕ್ಕೆ‌ಸಂಭವಿಸದ ಭೂಕಂಪ 3.9 ರಷ್ಡಿತ್ತು ಎಂಬುದು ದೃಢಪಟ್ಟಿದೆ.

ಮತ್ತೊಂದೆಡೆ ರಾಜಧಾನಿ ಬೆಂಗಳೂರಿನಿಂದ ಆಗಮಿಸಿರುವ ಭೂಗರ್ಭ ತಜ್ಞ ಆಧಿಕಾರಿಗಳು ಭೂಕಂಪ ಬಾಧಿತ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದೆ. ಅಲ್ಲದೇ ಜಿಲ್ಲಾಡಳಿತದ ಸಹಾಯದೊಂದಿಗೆ ಸ್ಥಳೀಯವಾಗಿ ಸಭೆ ನಡೆಸಿದ ಭೂಗರ್ಭ ಶಾಸ್ತ್ರಜ್ಞರು ತಮ್ಮ ಅಧ್ಯಯನ ಹಾಗೂ ಅನುಭವದ ಆಧಾರದಲ್ಲಿ ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಭೂಕಂಪ ಅಪಾಯ ಸೃಷ್ಡಿಸುವಷ್ಟು ಗಂಭೀರ ಸ್ವರೂಪದ್ದಲ್ಲ ಎಂದು ಸ್ಥಳೀಯರಿಗೆ ಮನವರಿಕೆ ಮಾಡಲು ಮುಂದಾಗಿದ್ದಾರೆ.

Advertisement

ಇದನ್ನೂ ಓದಿ : ಯೂಟ್ಯೂಬ್‌ ಚಾನೆಲ್‌ ವಿರುದ್ಧ ಕ್ರಮಕ್ಕೆ ಕಂದಾಯ ನೌಕರರ ಆಗ್ರಹ

ಇದಲ್ಲದೇ ಉಕ್ಕಲಿ ಗ್ರಾಮದಲ್ಲಿ ಭೂಕಂಪನ ಸ್ಥಿತಿಗತಿ ಅರಿಯಲು ಸಿಸ್ಮೋ ಮೀಟರ್ ಅಳವಡಿಸಿದ ತಜ್ಞ ಆಧಿಕಾರಿಗಳು, ವಿಜಯಪುರ ಜಿಲ್ಲೆಯಲ್ಲಿ ಲಘು ಭೂಕಂಪನ ಆಗುತ್ತಿದೆ. ಹಾಗಾಗಿ ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ಸಲಹೆ ನೀಡಿದರು.

ಭೂಗರ್ಭ ತಜ್ಞರು ಅಧ್ಯಯನ ನಡೆಸಿದ್ದು, ಜಿಲ್ಲೆಯ ಭೂಗರ್ಭದಲ್ಲಿ ತೇವಾಂಶ ಹೆಚ್ಚಾದಾಗ, ಭೂ ಚಲನೆ ವೇಳೆ ನಡೆಯು ಪ್ರಕ್ರಿಯೆಯ ಭಾಗವಾಗಿ ಇಂಥ ಬೆಳವಣಿಗೆ ಪ್ರಕೃತಿಯಲ್ಲಿ ನಡೆಯುತ್ತವೆ. ಹೀಗಾಗಿ ಯಾರೂ ಆತಂಕ ಪಡಬೇಡಿ. ಬದಲಾಗಿ ಪರಿಸ್ಥಿತಿ ಎದುರಿಸಲು ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ವಿ.ಬಿ. ದಾನಮ್ಮನವರ ಜನರಲ್ಲಿ ಮನವಿ ಮಾಡಿದರು.

ಇದೇ ವೇಳೆ ಭೂಕಂಪನದ ಬಗ್ಗೆ ಕೈಗೊಳ್ಳಬೇಕಿರುವ ಮುಂಜಾಗೃತಾ ಕ್ರಮಗಳ ಕುರುತೂ ಜಾಗೃತಿ ಮೂಡಿಸಲಾಯಿತು.

ಜಿ.ಪಂ. ಸಿಇಒ ರಾಹುಲ್ ಶಿಂಧೆ,
ಎಸ್ಪಿ ಆನಂದಕುಮಾರ ಇತರೆ ಇಲಾಖೆಗಳ ಆಧಿಕಾರಿಗಳು, ಭೂಗರ್ಭ ಶಾಸ್ತ್ರಜ್ಞರಿಗೆ ಭೂಕಂಪನ ಬಗ್ಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next