Advertisement

ಎನ್‌ಜಿಟಿ ಕಾರ್ಯಕ್ರಮ ಯಶಸ್ಸಿಗೆ ಡಿಸಿ ಪಾಟೀಲ ಸೂಚನೆ

05:30 PM Mar 18, 2020 | Naveen |

ವಿಜಯಪುರ: ಪರಿಸರ ಜಾಗೃತಿ, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯತ್ತ ಶಾಲಾ ವಿದ್ಯಾರ್ಥಿಗಳನ್ನು ಕಾರ್ಯಕರ್ತರನ್ನಾಗಿಸುವ ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕೆ ಕ್ರಿಯಾಯೋಜನೆ ರೂಪಿಸುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಹಯೋಗದಲ್ಲಿ ಆರಂಭಗೊಂಡ ಈ ಕಾರ್ಯಕ್ರಮದ ಅನುಷ್ಠಾನ ಕುರಿತು ಜಿಲ್ಲಾ ಸಂಚಾಲನ ಸಮಿತಿ ರಚನೆ ಸಭೆಯಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಮತ್ತು ಪರಿಸರ ಜಾಗೃತಿ ಹಾಗೂ ಸುಧಾರಣೆಯ ಮಹತ್ವದ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಸಂಬಂಧಿಸಿದ ಅಧಿಕಾರಿಗಳು ಹೊಣೆಯಿಂದ ಕೆಲಸ ಮಾಡಬೇಕು ಎಂದರು.

ರಾಷ್ಟ್ರೀಯ ಹಸಿರು ಸೇನೆ ರಚನೆ ಉದ್ದೇಶ ಹೊಂದಿರುವ ಕಾರಣ ಜಿಲ್ಲೆಯಲ್ಲಿ 500 ಶಾಲೆಗಳಲ್ಲಿ ಪರಿಸರ ಕೂಟಗಳನ್ನು ಸ್ಥಾಪಿಸಬೇಕು. ಜಿಲ್ಲೆಯ ಮಕ್ಕಳ ಮೂಲಕ ಕ್ರಿಯಾ ಆಧಾರಿತ ಕಾರ್ಯಕ್ರಮ ಕೈಗೊಳ್ಳುವಂತೆ ಪ್ರತಿ ಶಾಲೆಗೆ ವಾರ್ಷಿಕವಾಗಿ ನೀಡುತ್ತಿರುವ 5 ಸಾವಿರ ರೂ. ಅನುದಾನದಲ್ಲಿ ರೈತರ ಮಕ್ಕಳು ಕಡ್ಡಾಯವಾಗಿ ಸಸಿ ಬೆಳೆಸುವುದು ಮತ್ತು ಇತರರು ಸ್ವಯಂ ಪ್ರೇರಣೆಯಿಂದ ಸಸಿಗಳನ್ನು ಬೆಳೆಸಲು ಪ್ರೋತ್ಸಾಹಿಸಬೇಕು ಎಂದರು.

ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪಪೂ ಮತ್ತು ವೃತ್ತಿ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಅಧಿಕಾರಿಗಳು ಉಪ ಸಮಿತಿ ರಚಿಸಬೇಲು. ಪರಿಸರ ಸಂರಕ್ಷಣೆ, ಅಭಿವೃದ್ಧಿ, ಸ್ವತ್ಛತಾ ಆಂದೋಲನ, ಜಲಸಂರಕ್ಷಣೆ ಇನ್ನಿತರ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಬೇಕು. ಆಯಾ ಶಾಲೆಗಳ ವ್ಯಾಪ್ತಿಯಲ್ಲಿ ಇಕೋ-ಕ್ಲಬ್‌ಗಳನ್ನು ರಚಿಸಿ ಶಾಲೆ ಆವರಣಗಳಲ್ಲಿ ಸಸಿ ನೆಡಲು ದತ್ತು ನೀಡುವ ಜೊತೆಗೆ ಮೂರು ವರ್ಷಗಳ ಕಾಲ ಅಂತಹ ಸಸಿಗಳನ್ನು ನಿರ್ವಹಣೆ ಮಾಡುವವರಿಗೆ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸುವಂತೆ ಸೂಚಿಸಿದರು.

ಸದರಿ ಕಾರ್ಯಕ್ರಮದ ಜೊತೆಗೆ ಜಿಲ್ಲೆಯಲ್ಲಿ ಈಗಾಗಲೆ ಜಾರಿಯಲ್ಲಿರುವ ಕೋಟಿ ವೃಕ್ಷ ಅಭಿಯಾನದೊಂದಿಗೆ ಮಕ್ಕಳನ್ನು ಸಮನ್ವಯತೆ ಸಾಧಿಸಬೇಕು. ಕೃಷ್ಣಾಭಾಗ್ಯ ಜಲ ನಿಗಮದಿಂದ 65
ಸಾವಿರ ಸಸಿ ನೆಟ್ಟಿರುವ ಪರಿಣಾಮ ಪರಿಸರದಲ್ಲಿಯೂ ಸಕಾರಾತ್ಮಕ ಬದಲಾವಣೆಯಾಗಿದೆ. ಕಾರಣ ಈಗ ರೂಪಿಸಲಾಗುವ ಹಸಿರುಪಡೆ ಮೂಲಕ ಪರಿಸರ ಸಂರಕ್ಷಣೆ, ನೈರ್ಮಲ್ಯ, ಎರೆಹುಳು ಗೊಬ್ಬರ ತಯಾರಿಕೆ, ನದಿ-ಕೆರೆಗಳ ಸ್ವತ್ಛತೆ, ನೀರು, ಇಂಧನ ಸಂರಕ್ಷಣೆ ಮತ್ತು ಸಸಿ ನೆಡುವ ಇತ್ಯಾದಿ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

Advertisement

ಈಗಾಗಲೆ ಈ ಯೋಜನೆಯಡಿ 250 ಶಾಲೆಗಳನ್ನು ಆಯ್ಕೆ ಮಾಡಿದ್ದು, ಇನ್ನುಳಿದ 250 ಶಾಲೆಗಳ ಶೀಘ್ರ ಆಯ್ಕೆಗೆ ಕ್ರಮ ಕೈಗೊಳ್ಳಬೇಕು. ಈ ಯೋಜನೆ ಸಮರ್ಪಕ ಅನುಷ್ಠಾನದಿಂದ ಸಸಿಗಳ ಅಭಿವೃದ್ಧಿಯಲ್ಲಿ ಗಣನೀಯ ಸಾಧನೆ ಮಾಡಲು ಸಾಧ್ಯವಿದ್ದು ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಅರಣ್ಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಜಿಲ್ಲೆಯ 1650 ಶಾಲೆಗಳ ಪ್ರತಿ ಮಗುವಿನಿಂದ 2 ಸಸಿಗಳನ್ನು ಬೆಳೆಸುವ ಗುರಿ ನೀಡಬೇಕು ಮತ್ತು ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ ಸಸಿಗಳನ್ನು ಬೆಳೆಸುವಂತೆ ಸೂಚಿಸಿದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಆರಣ್ಯ, ಪರಿಸರ ವಿಜ್ಞಾನ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next