Advertisement

Editorial: ಸುವರ್ಣ ಕರ್ನಾಟಕ: ವಿಕಾಸಕ್ಕೆ ಕಾರ್ಯಸೂಚಿ ಅಗತ್ಯ

09:35 AM Nov 01, 2024 | Team Udayavani |

ಕರ್ನಾಟಕ ರಾಜ್ಯೋತ್ಸವ ಆಚರಣೆಯ ಸಂಭ್ರಮದಲ್ಲಿದೆ. ಇದೇ ವೇಳೆ ರಾಜ್ಯಕ್ಕೆ “ಕರ್ನಾಟಕ’ ಎಂದು ಮರುನಾಮಕರಣಗೊಂಡು 50 ವರ್ಷಗಳಾದ ಹಿನ್ನೆಲೆ ಯಲ್ಲಿ ಸುವರ್ಣ ಮಹೋತ್ಸವದ ಸಂಭ್ರಮವನ್ನೂ ನಾಡು ಆಚರಿಸುತ್ತಿದೆ. ಕಳೆದ ಒಂದು ವರ್ಷದಿಂದ ರಾಜ್ಯ ಸರಕಾರ ವಿವಿಧ ಕಾರ್ಯಕ್ರಮಗಳ ಮೂಲಕ ರಾಜ್ಯಾದ್ಯಂತ ಸುವರ್ಣ ಕರ್ನಾಟಕ ಸಂಭ್ರಮವನ್ನು ಆಚರಿಸುವ ಮೂಲಕ ಇಡೀ ನಾಡನ್ನು ಒಂದು ಮಾಡುವ ಪ್ರಯತ್ನ ನಡೆಸಿದೆ.

Advertisement

50 ವರ್ಷಗಳಾಗಿರುವುದು ಒಂದು ಕಾಲಘಟ್ಟ ಮಾತ್ರವಲ್ಲ. ಕರ್ನಾಟಕ ತನ್ನ ಸಾಧನೆಯನ್ನು ಒಮ್ಮೆ ತಿರುಗಿ ನೋಡುವ ಹಾಗೂ ಮುಂದಿನ ದಿನಗಳಿಗೆ ವಿಕಾಸದ ನಕ್ಷೆಯನ್ನು ರೂಪಿಸುವ ಸಮಯವೂ ಹೌದು. ಸಂಭ್ರಮಾಚರಣೆಯ ಜತೆಗೆ ಕನಿಷ್ಠ ಮುಂದಿನ 25 ವರ್ಷಗಳ ಮಟ್ಟಿಗೆ ಕರ್ನಾಟಕದ ಪ್ರಗತಿಯ ದಿಕ್ಕು ಮತ್ತು ದಾರಿಯನ್ನು ಸೂಚಿಸುವ ಕಾರ್ಯಸೂಚಿಯನ್ನು ರೂಪಿಸಬೇಕಿದೆ.

ಈ ಐದು ದಶಕಗಳಲ್ಲಿ ನಾಡು ಹಲವು ಸವಾಲುಗಳನ್ನು ದಾಟಿ ಮುಂದೆ ಬಂದಿದೆ. ಹತ್ತಾರು ಮಹತ್ಸಾಧನೆಗಳಿಗೆ ಸಾಕ್ಷಿಯಾಗಿದೆ. ವಿಜ್ಞಾನ- ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಏರೋಸ್ಪೇಸ್‌ ಮತ್ತು ರಕ್ಷಣ ಉತ್ಪಾದನೆ, ಸೋಲಾರ್‌ ಶಕ್ತಿ ಉತ್ಪಾದನೆಯಂಥ ಕ್ಷೇತ್ರಗಳಲ್ಲಿ ಮುಂದಿರುವುದು, ನವೋದ್ಯಮಗಳನ್ನು ಆರಂಭಿಸಿ ಯಶ ಕಂಡಿರುವುದು ನಿಜಕ್ಕೂ ಹೆಗ್ಗಳಿಕೆಯೇ. ಹಾಗಂತ ಸಂಭ್ರ ಮಿಸುವ, ಮೈಮರೆಯುವ ಸಂದರ್ಭ ಇದಲ್ಲ. ಕಾರಣ, ಸವಾಲುಗಳು ಸಾಕ ಷ್ಟಿವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಆರೋಗ್ಯ, ನೈರ್ಮಲ್ಯದ ಕೊರತೆ ನಮ್ಮಲ್ಲಿ ತುಂಬಾ ಇದೆ. ಕುಡಿಯುವ ನೀರಿನ ಸಮಸ್ಯೆ ಪ್ರತಿವರ್ಷವೂ ಕಾಡುತ್ತದೆ.

ನೈಸರ್ಗಿಕ ಸಂಪತ್ತು ನಮ್ಮ ಕಣ್ಣೆದುರೇ ಕರಗುತ್ತಿದೆ. ಸಾಕ್ಷರತೆಯ ಪ್ರಮಾಣ ಕುಗ್ಗಿದೆ. ಬಡವರ ಸಂಖ್ಯೆಯ ಜೊತೆಗೇ ಜನಸಂಖ್ಯೆಯೂ ಹೆಚ್ಚಿದೆ. ನಿರುದ್ಯೋಗ ದೊಡ್ಡ ತಲೆನೋವಾಗಿದೆ. ದುಡಿಮೆಗೆ ತಕ್ಕಂತೆ ಸಂಬಳ ಸಿಗುತ್ತಿಲ್ಲ ಅನ್ನಿಸಿ ಯುವಜನತೆ ಹತಾಶೆಯತ್ತ ಮುಖ ಮಾಡಿದೆ. ನಾಡಿನ ಅಭಿವೃದ್ಧಿಗೆ ಕಾರಣ ವಾಗಬೇಕಿದ್ದ ಪ್ರವಾಸೋದ್ಯಮ ಕುಂಟುತ್ತಾ ಸಾಗಿದೆ. ವಲಸಿಗರ ಹಾವಳಿ ಹೆಚ್ಚ ತೊಡಗಿದೆ. ಭಾಷಾಭಿಮಾನ ತಗ್ಗಿದೆ. ಕನ್ನಡಿಗರು ಕರ್ನಾಟಕದಲ್ಲಿಯೇ ಅನಾಥ ಪ್ರಜ್ಞೆಯಿಂದ ಬದುಕುತ್ತಿದ್ದಾರೆ.

ಇಂಥ ಸಂಕಷ್ಟದ ಸಂದರ್ಭದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ತುರ್ತು ಅಗತ್ಯ. ಆಗ ಆಗಬೇಕಿರುವುದಿಷ್ಟೇ: ಪರಿಸರ ನೈರ್ಮಲ್ಯ, ನೈಸರ್ಗಿಕ ಸಂಪತ್ತಿನ ರಕ್ಷಣೆಗೆ ಜನ ಮತ್ತು ಸರಕಾರ ಜೊತೆಯಾಗಿ ಕೆಲಸ ಮಾಡಬೇಕು. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸೂಕ್ತ ಯೋಜನೆ ಹಾಕಿಕೊಳ್ಳಬೇಕು. ಅದನ್ನು ಮಾರ್ಕೆಟಿಂಗ್‌ ಮಾಡಿ, ಎಲ್ಲರಿಗೂ ತಲುಪಿಸುವ ಕೆಲಸವಾಗಬೇಕು. ಭಾಷೆ, ಗಡಿ ಹಾಗೂ ಜಲವಿವಾದದಂಥ ವಿಷಯಗಳನ್ನು ಸಂಧಾನ ಮತ್ತು ಮಾತು ಕತೆಯ ಮೂಲಕ ಬಗೆಹರಿಸಿಕೊಳ್ಳುವ ಮೂಲಕ ನಾಡಿನ ಹಿತ ಕಾಯಲು ಮುಂದಾ ಗಬೇಕು. ಕರ್ನಾಟಕದಲ್ಲಿ ಕನ್ನಡಕ್ಕೇ ಅಗ್ರ ತಾಂಬೂಲ. ನಮ್ಮ ನಾಡಿನಲ್ಲಿ ಯಾವ ರಾಜ್ಯದ ಜನ ಬೇಕಾದರೂ ಇರಲಿ; ಆದರೆ ಎಲ್ಲರೂ ಕನ್ನಡ ಕಲಿಯಲಿ, ಮಾತಾಡಲಿ ಎಂಬುದು ಹಕ್ಕೊತ್ತಾಯವಾಗಬೇಕು.

Advertisement

ಒಂದಂತೂ ಸತ್ಯ. ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸಂಘರ್ಷ ಕ್ಕಿಳಿದರೆ ಸಂಕಟ ಜತೆಯಾಗುತ್ತದೆ. ಸಂಧಾನದ ಹಾದಿ ಹಿಡಿದಾಗ ಸಮಾಧಾನ ಕೈಜಗ್ಗುತ್ತದೆ. ಈ ಸೂಕ್ಷ್ಮವನ್ನು ಅರಿತು ಹೆಜ್ಜೆ ಮುಂದಿಡಬೇಕು. ಜೊತೆಗೆ, ಪ್ರತಿ ಯೊಂದೂ ಸರಕಾರದಿಂದಲೇ ಆಗಲಿ ಎಂಬ ಮನೋಭಾವವನ್ನು ಮರೆತು, ನಾಡಿಗೆ “ಹೊರೆಯಂತೆ ಉಳಿದುಕೊಂಡಿರುವ’ ಸಮಸ್ಯೆಗಳ ಪರಿಹಾರಕ್ಕೆ ಜನರೂ ಕೈಜೋಡಿಸಬೇಕು. ಆಗ ಮಾತ್ರ ಕರ್ನಾಟಕದ ಯಶೋಯಾತ್ರೆಗೆ ಒಂದು ಅರ್ಥ ಮತ್ತು ವೇಗ ಬರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next