Advertisement

Bengaluru: ಮತ್ತೂಬ್ಬ ಎಂಜಿನಿಯರ್‌ ತಲೆದಂಡ

11:48 AM Oct 25, 2024 | Team Udayavani |

ಬೆಂಗಳೂರು: ಬಾಬುಸಾಬ್‌ ಪಾಳ್ಯದ ಕಟ್ಟಡ ಅನಾಹುತ ಪ್ರದೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಭೇಟಿ ನೀಡಿದ್ದ ಬೆನ್ನಲ್ಲೇ ಇದೀಗ ಪಾಲಿಕೆಯ ಸಹಾಯಕ ಅಭಿಯಂತರ (ಯೋಜನೆ-ಕೇಂದ್ರ) ತಲೆದಂಡವಾಗಿದೆ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ನಿರೀಕ್ಷಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸೇವೆ ಯಿಂದ ಅಮಾನತುಪಡಿಸಲಾಗಿದೆ.

Advertisement

ಮಹದೇವಪುರ ವಲಯದ ಹೊರಮಾವು ಉಪ ವಿಭಾಗದ ಬಾಬುಸಾಬ್‌ ಪಾಳ್ಯದ ಕಟ್ಟಡ ಮಾಲೀಕರು ಅನಧಿಕೃತ ಅಥವಾ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣ ಮಾಡಿರುವುದರಿಂದ ಕರ್ತವ್ಯ ಲೋಪದಡಿ ಸಹಾಯಕ ಅಭಿಯಂತರರಾದ ರಮೇಶ್‌ ಅವರನ್ನು ಅಮಾನತ್ತು ಮಾಡಲಾಗಿದೆ. ಅಮಾನತ್ತಿನ ಅವಧಿಯಲ್ಲಿ ಕೇಂದ್ರ ಸ್ಥಾನ ಬಿಡತಕ್ಕದಲ್ಲ ಎಂದು ಬಿಬಿಎಂಪಿ ಉಪ ಆಯುಕ್ತರು (ಆಡಳಿತ) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅನಧಿಕೃತವಾಗಿ ನಿಯಮ ಉಲ್ಲಂ ಸಿ ಕಟ್ಟಡ ನಿರ್ಮಾಣವಾಗುತ್ತಿದ್ದರೂ ಅದನ್ನು ತಡೆಯುವಲ್ಲಿ ವಿಫ‌ಲರಾಗಿ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪದಡಿ ಹೊರಮಾವು ಉಪವಿಭಾಗದ ಬಿಬಿಎಂಪಿ ಸಹಾಯಕ ಎಂಜಿನಿಯರ್‌ ವಿನಯ್‌ ಕೆ. ಅವರನ್ನು ಬುಧವಾರ ಅಮಾನತುಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next