Advertisement
ಬಾಬುಸಾಪಾಳ್ಯದಲ್ಲಿ ಕಟ್ಟಡ ಕುಸಿದು ದೊಡ್ಡ ದುರಂತವೇ ಸಂಭವಿಸಿ 8 ಜನ ಕಾರ್ಮಿಕರು ಸಾವನ್ನಪ್ಪಿದ್ದ ಘಟನೆಯ ಬೆನ್ನಲ್ಲೇ ನಂಜಪ್ಪ ಗಾರ್ಡನ್ ನಲ್ಲಿ 6 ಅಂತಸ್ತಿನ ನಿರ್ಮಾಣ ಹಂತದ ಮತ್ತೂಂದು ಕಟ್ಟಡ ವಾಲಿದ್ದು, ಜನರಲ್ಲಿ ಆತಂಕ ಮೂಡಿದೆ. ಹೊರಮಾವು ಪ್ರದೇಶದ ನಂಜಪ್ಪ ಗಾರ್ಡನ್ ನಲ್ಲಿರುವ ಪುಟ್ಟಪ್ಪ ಮಾಲಿಕತ್ವದ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡ ಬಲಭಾಗಕ್ಕೆ ವಾಲಿದೆ.
Related Articles
Advertisement
ನಂಜಪ್ಪ ಗಾರ್ಡ್‌ನ ಬಳಿಯ ಬಾಬುಸಾಪಾಳ್ಯದಲ್ಲಿರುವ 5 ಮಹಡಿಗಳ ಅನಧಿಕೃತ ಕಟ್ಟಡ ತೆರವಿನ ಬಗೆ ಸ್ವಯಂ ಪ್ರೇರಿತವಾಗಿ ಕಟ್ಟಡ ಮಾಲಿಕರು ಒಪ್ಪಿಗೆ ಪತ್ರ ನೀಡಿದ್ದು, ಈ ಕಟ್ಟಡದ ಆಜು-ಬಾಜಿನಲ್ಲಿರುವ ಮನೆಗಳಲ್ಲಿ ವಾಸಿಸುತ್ತಿರುವ ಖಾಲಿಮಾಡಿಸಲಾಗಿದೆ ಎಂದು ಚೇಳೆಕೆರೆ ವಾರ್ಡ್‌ನ ಬಿಬಿಬಿಎಂಪಿ ಸಹಾಯಕ ಅಭಿಯಂತರರು ತಿಳಿಸಿದ್ದಾರೆ. ಜತೆಗೆ ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಮಾಲಿಕರು ಅನಧಿಕೃತ ಕಟ್ಟಡ ತೆರವುಗೊಳಿಸುತ್ತಿರುವುದರಿಂದ ಇಲಾಖೆ ಸೂಕ್ತ ಭದ್ರತೆ ಮತ್ತು ರಕ್ಷಣೆ ನೀಡಲು ಪೊಲೀಸ್ ಇಲಾಖೆಗೆ ಕೋರಲಾಗಿದೆ ಎಂದು ಹೇಳಿದ್ದಾರೆ.
ಅನಧಿಕೃತ ಕಟಡ ತೆರವಿಗೆ ಡಿಸಿಎಂ ಡಿಕೆಶಿ ಸೂಚನೆ
ನಂಜಪ್ಪ ಗಾರ್ಡನ್ ಪ್ರದೇಶದಲ್ಲಿ 12x 30 ಅಡಿ ನಿವೇಶನದಲ್ಲಿ ನೆಲಮಹಡಿ ಜೊತೆಗೆ 5 ಮಹಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದನ್ನು ತೆರವುಗೊಳಿಸಲು ಸೂಚಿಸಿದ್ದೇನೆ. ಪ್ರತಿ ವಲಯದಲ್ಲಿ ಅಕ್ರಮ ಮತ್ತು, ಕಳಪೆ ಗುಣಮಟ್ಟದ ಕಾಮಗಾರಿ ಹಾಗೂ ಜೀವಕ್ಕೆ ಅಪಾಯ ತರಬಹುದಾದ ಕಟ್ಟಡಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಹಾಗೂ ಪರವಾನಗಿ ಪಡೆಯದೆ ನಿಯಮ ಉಲ್ಲಂ ಸಿ ನಿರ್ಮಿಸಿರುವ ಕಟ್ಟಡಗಳನ್ನು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಯಾವುದೇ ಮುಲಾಜಿಲ್ಲದೇ ತ್ವರಿತಗತಿಯಲ್ಲಿ ತೆರವು ಕಾರ್ಯಾಚರಣೆ ನಡೆಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯವಹಿಸಬಾರದು ಎಂದು ತಾಕೀತು ಮಾಡಿದರು.