Advertisement
8 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ವಿಜಯಪುರ ಜಿಲ್ಲೆ 1957ರಿಂದ 1978ರವರೆಗೆ ಎರಡು ದಶಕಗಳ ಕಾಲ ನಡೆದ 4 ಚುನಾವಣೆಯಲ್ಲಿ ಬಹುತೇಕ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಕೈಗೊಂಡ ತುರ್ತು ಪರಿಸ್ಥಿತಿಯ ರಾಜಕೀಯ ನಿರ್ಧಾರದಿಂದ ದೇಶಲ್ಲಿ ಉಂಟಾದ ವಿಪ್ಲವದ ಪರಿಣಾಮ 1978ರಲ್ಲಿ ಕಾಂಗ್ರೆಸ್ ಭದ್ರಕೋಟೆ ಛಿದ್ರವಾಗಿ ಸಿಂದಗಿ ಹೊರತುಪಡಿಸಿ ಇತರೆ 7 ಕ್ಷೇತ್ರಗಳಲ್ಲಿ ಜನತಾ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಗಮನೀಯ ಅಂಶ ಎಂದರೆ ಕಾಂಗ್ರೆಸ್‌ನಲ್ಲಿದ್ದ 7 ಶಾಸಕರು ಸಾರಾಸಗಟಾಗಿ ಏಕಕಾಲಕ್ಕೆ ಜನತಾ ಪರಿವಾರದ ತೆಕ್ಕೆಗೆ ಜಾರಿದ್ದರು. ಅಷ್ಟರ ಮಟ್ಟಿಗೆ ಬಸವನಾಡಿನ ಕಾಂಗ್ರೆಸ್ ಕೋಟೆಯನ್ನು ಛಿದ್ರಗೊಂಡಿದ್ದು ಇಂದಿಗೂ ಪೂರ್ಣ ಪ್ರಮಾಣದಲ್ಲಿ ಎದ್ದು ನಿಲ್ಲಲು ಸಾಧ್ಯವಾಗಿಲ್ಲ.
ಪಕ್ಷೇತರ ಡಾ| ಬಿ.ಕೆ.ನಾಗೂರ ಮೂಲಕ 1957ರಲ್ಲಿ ಚುನಾವಣೆ ಇತಿಹಾಸದ ಪುಟ ತೆರೆದಿರುವ ವಿಜಯಪುರ ನಗರ ಕ್ಷೇತ್ರ, ಅನಂತರ 1962ರಲ್ಲಿ ಆರ್.ಎಸ್. ನಾವದಗಿ, 1967ರಲ್ಲಿ ಬಿ.ಎಂ.ಪಾಟೀಲ, 1972ರಲ್ಲಿ ಕೆ.ಟಿ.ರಾಠೊಡ ಮೂಲಕ ಕಾಂಗ್ರೆಸ್ ಭದ್ರಕೋಟೆ ಎನಿಸಿತ್ತು. 1978ರಲ್ಲಿ ಜನತಾ ಪಕ್ಷದ ಎಸ್.ಎಚ್.ಎಸ್.ಭಕ್ಷಿ ಅವರನ್ನು ಗೆಲ್ಲಿಸಿ ಕಾಂಗ್ರೆಸ್ ರಹಿತ ಆಯ್ಕೆಗೆ ಅವಕಾಶ ಕಲ್ಪಿಸಿದ ನಗರದ ಮತದಾರರು, 1983ರಲ್ಲಿ ಸಿ.ಬಿ.ಗಚ್ಚಿನಮಠ ಮೂಲಕ ಮೊದಲ ಬಾರಿ ಬಿಜೆಪಿ ಕೇಸರಿ ಧ್ವಜ ಹಾರಿಸಿತ್ತು. 1985ರಲ್ಲಿ ಯು.ಎಂ.ಪಟೇಲ್, 1989ರಲ್ಲಿ ಎಂ.ಎಲ್.ಉಸ್ತಾದ ಮೂಲಕ ಕಾಂಗ್ರೆಸ್ ಮರಳಿ ಆದಿಲ್ ಶಾಹಿ ಕೋಟೆಯನ್ನು ವಶಕ್ಕೆ ಪಡೆದರೂ 1994ರಲ್ಲಿ ಬಸನಗೌಡ ಪಾಟೀಲ ಯತ್ನಾಳ ಮೂಲಕ ಬಿಜೆಪಿ ತೆಕ್ಕೆಗೆ ಬಂದಿತ್ತು. 1999ರಲ್ಲಿ ಎಂ.ಎಲ್.ಉಸ್ತಾದ ಆಯ್ಕೆಯಾದರೂ 2004 ಹಾಗೂ 2008ರಲ್ಲಿ ಇದೇ ಕ್ಷೇತ್ರದಿಂದ ಸತತ ಎರಡು ಬಾರಿ ಆಯ್ಕೆಯಾಗಿದ್ದ ಅಪ್ಪು ಪಟ್ಟಣಶೆಟ್ಟಿ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದರು. 2013ರಲ್ಲಿ ಯತ್ನಾಳ ಜೆಡಿಎಸ್ ಸೇರಿ ಸೋತಾಗ ರಾಜಕೀಯಕ್ಕೆ ಹೊಸಬರಾದ ಕಾಂಗ್ರೆಸ್‌ನ ಡಾ|ಎಂ.ಎಸ್. ಬಾಗವಾನ ಮೊದಲ ಬಾರಿಗೆ ಶಾಸಕರಾಗಿದ್ದರು. ಇದೀಗ ಬಸನಗೌಡ ಪಾಟೀಲ ಯತ್ನಾಳ ಮೂಲಕ ಬಿಜೆಪಿ ವಶದಲ್ಲಿದೆ.
Related Articles
ಪಿ.ಬಿ.ಸಿದ್ಧಾಂತಿ, ಎಂ.ಎಸ್.ಗುರಡ್ಡಿ, ಎಂ.ಎಂ.ಸಜ್ಜನ ಅವರಂಥ ಸಜ್ಜನ ಶಾಸಕರನ್ನು ನೀಡಿದ ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದಲ್ಲಿ ಜನತಾಪಕ್ಷ ಜಿ.ಎಸ್.ದೇಶಮುಖ ಪ್ರವೇಶದ ಬಳಿಕ ಮೂರು ಬಾರಿ ಜನತಾ ಪರಿವಾರ ಗೆದ್ದಿದೆ. ಬಳಿಕ ಜನತಾ ಪರಿವಾರ- ಕಾಂಗ್ರೆಸ್ ಮಧ್ಯೆ ಹಾವು-ಏಣಿ ಆಟಕ್ಕೆ ಚಾಲನೆ ನೀಡಿದ್ದು, 1989ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಸಿ.ಎಸ್.ನಾಡಗೌಡ ಮೂಲಕ. 1989 ರಿಂದ 2013ರವರೆಗೆ ಕಾಂಗ್ರೆಸ್-ಜನತಾ ಪರಿವಾರದ ಅಭ್ಯರ್ಥಿಗಳನ್ನೇ ಗೆಲ್ಲಿಸುತ್ತಿದ್ದ ಮುದ್ದೇಬಿಹಾಳ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ್ದು, 2018ರಲ್ಲಿ ಕಾಂಗ್ರೆಸ್‌ನಿಂದ ವಲಸೆ ಬಂದ ಎ.ಎಸ್.ಪಾಟೀಲ ನಡಹಳ್ಳಿ. 14 ಚುನಾವಣೆ ಕಂಡಿ ರುವ ಈ ಕ್ಷೇತ್ರದಿಂದ ಗೆದ್ದಿರುವ ಜಿ.ಎಸ್.ದೇಶಮುಖ, ಅವರ ಪತ್ನಿ ವಿಮಲಾಬಾಯಿ ದೇಶಮುಖ, ಸಿ.ಎಸ್.ನಾಡಗೌಡ ತಮ್ಮ ಪಕ್ಷಗಳ ಸರಕಾ ರಗಳು ಅಧಿ ಕಾರಕ್ಕೆ ಬಂದಾಗಲೆಲ್ಲ ಸಚಿವ ರಾಗಿ, ಎ.ಎಸ್.ಪಾಟೀಲ ನಡಹಳ್ಳಿ ಸಹಿತ ಸಚಿವ ಸ್ಥಾನಕ್ಕೆ ಸಮನಾದ ಹುದ್ದೆ ಅಲಂಕರಿಸಿದ್ದಾರೆ ಎಂಬುದು ಗಮನೀಯ.
Advertisement
ಇಂಡಿಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಇಂಡಿ ವಿಧಾನಸಭೆ ಕ್ಷೇತ್ರದ ಒಂದೀಡಿ ಮಗ್ಗುಲಲ್ಲಿ ಭೀಮೆ ಹರಿಯುತ್ತಾಳೆ. ರಕ್ತಸಿಕ್ತ ಅಧ್ಯಾಯಕ್ಕೆ ಹೆಸರಾದ ಈ ಕ್ಷೇತ್ರ ಲಿಂಬೆಯ ತವರು ಎನಿಸಿಕೊಂಡಿದೆ. ಈವರೆಗೆ 13 ಚುನಾವಣೆ ಕಂಡಿದ್ದು, ಐದು ಬಾರಿ ಪಕ್ಷೇತರರನ್ನು ವಿಧಾನಸಭೆಗೆ ಕಳುಹಿಸಿದ್ದಾರೆ. ಮೊದಲ ಎರಡು ಅವ ಧಿಯಲ್ಲಿ ಜೆ.ಡಿ.ಪಾಟೀಲ, ಎಂ.ಕೆ.ಸುರಪುರ ಅವರನ್ನು ಪಕ್ಷೇತರರಾಗಿ ಆಯ್ಕೆ ಮಾಡಿದ್ದ ಇಂಡಿ ಮತದಾರರು, ಎಂ.ಕೆ.ಸುರಪುರ ಅವರನ್ನೇ 1972ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲ್ಲಿಸಿದ್ದರು. 1978 ಹಾಗೂ 1989ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಆರ್.ಆರ್.ಕಲ್ಲೂರ, 1983ರಲ್ಲಿ ಜನತಾ ಪಕ್ಷದಿಂದ ವಿಜಯ ಸಾ ಧಿಸಿದ್ದರು. 1985ರಲ್ಲಿ ಜನತಾ ಪಕ್ಷದಿಂದ ಎನ್.ಎಸ್.ಖೇಡ ಗೆದ್ದಿದ್ದರು. 1994, 1999 ಹಾಗೂ 2004ರಲ್ಲಿ ರವಿಕಾಂತ ಪಾಟೀಲ ಎಂಬ ವರ್ಣರಂಜಿತ ವ್ಯಕ್ತಿತ್ವದ ರಾಜಕೀಯ ವ್ಯಕ್ತಿ ಸತತ ಮೂರು ಬಾರಿ ಪಕ್ಷೇತರರಾಗಿ ವಿಧಾನಸಭೆ ಪ್ರವೇಶಿಸಿದ್ದರು. ವೈಯಕ್ತಿಕ ಕಾರಣಕ್ಕೆ ಒಂದು ಬಾರಿ ಜೈಲಿನಿಂದಲೇ ನಾಮಪತ್ರ ಸಲ್ಲಿಸಿ ವಿಜಯ ಸಾ ಧಿಸಿದ್ದರು. 2008ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ಡಾ| ಸಾರ್ವಭೌಮ ಬಗಲಿ ಅವರು ಯಡಿಯೂರಪ್ಪ ಸರಕಾರದ ವಿರುದ್ಧ ಬಂಡಾಯ ಸಾರಿ ಶಾಸಕತ್ವದಿಂದ ಅನರ್ಹರಾಗಿದ್ದರು. ಸುಪ್ರೀಂಕೋರ್ಟ್ ಮೂಲಕ ಶಾಸಕತ್ವ ಉಳಿಸಿಕೊಂಡಿದ್ದರು. ಗಮನೀಯ ಅಂಶ ಎಂದರೆ ಈ ಕ್ಷೇತ್ರದಿಂದ ಗೆದ್ದವರು ಅವರದೇ ಪಕ್ಷ ಸರಕಾರ ಇದ್ದಾಗಲೂ ಸಚಿವರಾಗಿಲ್ಲ. ಆರ್.ಆರ್.ಕಲ್ಲೂರ, ರವಿಕಾಂತ ಪಾಟೀಲ ಇವರು ತಲಾ ಮೂರು ಬಾರಿ, ಇದೀಗ ಸತತ ಎರಡು ಬಾರಿ ಕಾಂಗ್ರೆಸ್‌ನ ಯಶವಂತರಾಯಗೌಡ ಪಾಟೀಲ ಗೆದ್ದಿದ್ದಾರೆ. ಬಬಲೇಶ್ವರ
ಟಿ.ಜೆ.ಅಂಬಲಿ, ಬಿ.ಎಂ.ಪಾಟೀಲ, ಎಸ್.ಬಿ.ವಸ್ತ್ರದ, ಜಿ.ಎಸ್.ಪಾಟೀಲ ಅವರ ಮೂಲಕ ಮೊದಲ ಅವ ಧಿಯಲ್ಲೇ ಕಾಂಗ್ರೆಸ್ ಸತತ 4 ಬಾರಿ ವಿಜಯ ಸಾ ಧಿಸುವಂತೆ ಮಾಡಿದ್ದು ತಿಕೋಟಾ ಕ್ಷೇತ್ರ. ಕ್ಷೇತ್ರ ಮರುವಿಂಗಡಣೆಯಲ್ಲಿ ಬಬಲೇಶ್ವರ ಹೆಸರಿನಿಂದ ಕರೆಯಲ್ಪಡುತ್ತಿದೆ. ವಿಶ್ವದರ್ಜೆಯ ರಫ್ತು ಗುಣಮಟ್ಟದ ದ್ರಾಕ್ಷಿ ಬೆಳೆಯುವ ಈ ಕ್ಷೇತ್ರ 14 ಚುನಾವಣೆ ಕಂಡಿದೆ. 1978ರಲ್ಲಿ ಜನತಾ ಪಕ್ಷ ಖಾತೆ ತೆರೆದಿದ್ದು ಬಳಿಕ ನಡೆದ ಮೂರು ಚುನಾವಣೆಯಲ್ಲಿ ಸತತವಾಗಿ ಗೆದ್ದವರು ಕಾಂಗ್ರೆಸ್ ಪಕ್ಷದ ಬಿ.ಎಂ.ಪಾಟೀಲ್. ಕಾಂಗ್ರೆಸ್ ಸರಕಾರಗಳಲ್ಲಿ ಸಚಿವರಾಗಿದ್ದ ಬಿ.ಎಂ.ಪಾಟೀಲ ಇವರನ್ನು 1989ರಲ್ಲಿ ಜನತಾದಳದಿಂದ ಸ್ಪಧಿ ìಸಿ ಸೋಲಿಸಿದವರು ಶಿವಾನಂದ ಪಾಟೀಲ. ಬಳಿಕ 1994ರಲ್ಲಿ ಬಿಜೆಪಿ ಸೇರಿ ಗೆದ್ದ ಶಿವಾನಂದ ಪಾಟೀಲ ಮೊದಲ ಬಾರಿಗೆ ಕಮಲ ಅರಳಿಸಿದ್ದರು. 2004ರಲ್ಲಿ ಶಿವಾನಂದ ಪಾಟೀಲ ಕಾಂಗ್ರೆಸ್ ಸೇರಿ ಕ್ಷೇತ್ರ ತೊರೆದಾಗ ಕಾಂಗ್ರೆಸ್‌ನಿಂದ ಸ್ಪಧಿ ìಸಿದವರು ಬಿ.ಎಂ.ಪಾಟೀಲ ಪುತ್ರ ಎಂ.ಬಿ.ಪಾಟೀಲ. 2004ರಿಂದ 2018ರವರೆಗೆ ಸತತ ನಾಲ್ಕು ಬಾರಿ ಕ್ಷೇತ್ರವನ್ನು ಪ್ರತಿನಿ ಧಿಸಿ ತಂದೆ ಬಳಿಕ ಸಚಿವರಾಗಿದ್ದ ಎಂ.ಬಿ.ಪಾಟೀಲ ಅವರು ಸಿದ್ದರಾಮಯ್ಯ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ ಇಡೀ ಕ್ಷೇತ್ರದಲ್ಲಿ ನೀರಾವರಿ ಕ್ರಾಂತಿ ಮಾಡಿದ್ದಾರೆ. ದೇವರಹಿಪ್ಪರಗಿ
1972ರಿಂದ ಚುನಾವಣ ಇತಿಹಾಸ ಸಾರುವ ಹೂವಿನಹಿಪ್ಪರಗಿ ಕ್ಷೇತ್ರ, 2008ರಲ್ಲಿ ಕ್ಷೇತ್ರ ಮರು ವಿಂಗಡಣೆ ಬಳಿಕ ಕ್ಷೇತ್ರದ ಸ್ವರೂಪವೂ ಬದಲಾಗಿ, ದೇವರಹಿಪ್ಪರಗಿ ಹೆಸರಿನಲ್ಲಿ ಮರು ನಾಮಕರಣವಾಗಿದೆ. ಕೆ.ಡಿ.ಪಾಟೀಲ ಮೂಲಕ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಈ ಕ್ಷೇತ್ರವನ್ನು 1978ರಲ್ಲಿ ಜನತಾ ಪಕ್ಷದಿಂದ ಗೆದ್ದವರು ಬಿ.ಎಸ್.ಪಾಟೀಲ ಸಾಸನೂರು. ಬದಲಾದ ರಾಜಕೀಯ ಕಾರಣದಿಂದ ಬಿ.ಎಸ್. ಪಾಟೀಲ ಸಾಸನೂರು ಮತ್ತೆ ಕಾಂಗ್ರೆಸ್ ಸೇರಿ 1983ರಲ್ಲಿ ಗೆಲುವು ಸಾಧಿ ಸಿದ್ದರು. ಶಿವಪುತ್ರಪ್ಪ ದೇಸಾಯಿ ಮೂಲಕ 1986ರಲ್ಲಿ ಜನತಾಪಕ್ಷ, 19904ರಲ್ಲಿ ಜನತಾದಳ ಗೆದ್ದಿದ್ದರೆ, 2004ರಲ್ಲಿ ಇವರಿಂದಲೇ ಬಿಜೆಪಿ ಕಮಲ ಅರಳಿತ್ತು. ಅನಂತರ ನಡೆದ ಚುನಾವಣೆಯಲ್ಲಿ ಸತತ ಎರಡು ಬಾರಿ ಎ.ಎಸ್.ಪಾಟೀಲ ನಡಹಳ್ಳಿ ಮೂಲಕ ಕಾಂಗ್ರೆಸ್ ವಶವಾಗಿದ್ದ ಕ್ಷೇತ್ರದಲ್ಲೀಗ ಸಾಸನೂರು ಪುತ್ರ ಸೋಮನಗೌಡ ಪಾಟೀಲ ಬಿಜೆಪಿ ಶಾಸಕರಾಗಿದ್ದಾರೆ. 11 ಬಾರಿ ಚುನಾವಣೆ ಕಂಡಿದೆ. ಈ ಕ್ಷೇತ್ರದಿಂದ ಗೆದ್ದಿದ್ದ ಬಿ.ಎಸ್.ಪಾಟೀಲ ಸಾಸನೂರು ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಸಿಂದಗಿ
1957ರಿಂದ ಚುನಾವಣೆ ಇತಿಹಾಸ ಹೊಂದಿರುವ ಸಿಂದಗಿ ಕ್ಷೇತ್ರ 14 ಸಾರ್ವತ್ರಿಕ ಹಾಗೂ ಒಂದು ಉಪ ಚುನಾವಣೆ ಕಂಡಿದೆ. ಮೊದಲ 6 ಅವ ಧಿಯಲ್ಲಿ ಕಾಂಗ್ರೆಸ್ ಇಲ್ಲಿ ಅ ಧಿಪತ್ಯ ಸಾಧಿ ಸಿದೆ. ಎರಡು ಬಾರಿ ಎಸ್.ವೈ..ಪಾಟೀಲ, ಎರಡು ಬಾರಿ ಸಿ.ಎಂ.ದೇಸಾಯಿ, ಒಂದು ಬಾರಿ ಎಂ.ಎಚ್. ಬೆಕನಾಳಕರ ಹಾಗೂ ಒಂದು ಬಾರಿ ಎಲ್.ಆರ್.ಪಾಟೀಲ ಅವರನ್ನು ಕಾಂಗ್ರೆಸ್ ಪಕ್ಷದಿಂದ ಗೆಲ್ಲಿಸಿದೆ. 1985ರಲ್ಲಿ ನಡೆದ ಚುನಾವಣೆಯಲ್ಲಿ ಎಂ.ಡಿ.ಬಿರಾದಾರ ಮೂಲಕ ಕಾಂಗ್ರೆಸ್ ಭದ್ರಕೋಟೆ ಛಿದ್ರಗೊಂಡಿತ್ತು. 1989ರಲ್ಲಿ ಆರ್.ಬಿ.ಚೌಧರಿ ಮೂಲಕ ಕಾಂಗ್ರೆಸ್ ವಶಕ್ಕೆ ಬಂದಿದ್ದರೂ ಬಳಿಕ ನಡೆದ 1994ರ ಚುನಾವಣೆಯಲ್ಲಿ ಜನತಾದಳದಿಂದ ಗೆದ್ದಿದ್ದ ಎಂ.ಸಿ.ಮನಗೂಳಿ ಸಚಿವರಾಗಿದ್ದರು. 2013ರಲ್ಲಿ ಕೂದಲೆಳೆ ಅಂತರದಲ್ಲಿ ಸೋತಿದ್ದ ಎಂ.ಸಿ.ಮನಗೂಳಿ, 2018ರಲ್ಲಿ ಜೆಡಿಎಸ್ ಪಕ್ಷದಿಂದ ಮತ್ತೆ ಗೆದ್ದು ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ತೋಟಗಾರಿಕೆ ಸಚಿವರಾಗಿದ್ದರು. ಶಾಸಕರಾಗಿದ್ದಾಗಲೇ ಎಂ.ಸಿ.ಮನಗೂಳಿ ನಿಧನರಾಗಿದ್ದರಿಂದ ಕ್ಷೇತ್ರದಲ್ಲಿ ನಡೆದ ಮೊದಲ ಉಪಚುನಾವಣೆಯಲ್ಲಿ ಬಿಜೆಪಿಯ ರಮೇಶ ಭೂಸನೂರು ಜಯ ಸಾ ಧಿಸಿ ಶಾಸಕರಾಗಿದ್ದಾರೆ. ರಮೇಶ ಭೂಸನೂರು 2008 ಹಾಗೂ 2013ರಲ್ಲಿ ಬಿಜೆಪಿ ಶಾಸಕರಾಗಿ ಗೆದ್ದು, 2018ರಲ್ಲಿ ಹ್ಯಾಟ್ರಿಕ್ ವಿಜಯದ ಕನಸು ಭಗ್ನಗೊಳಿಸಿದ್ದು ಎಂ.ಸಿ.ಮನಗೂಳಿ. 2004ರಲ್ಲಿ ಮೊದಲ ಬಾರಿಗೆ ಇಲ್ಲಿ ಬಿಜೆಪಿಯ ಕಮಲ ಅರಳಿಸಿದ್ದು ಅಶೋಕ ಶಾಬಾದಿ. ಬಸವನ ಬಾಗೇವಾಡಿ
ಸುಶೀಲಾಬಾಯಿ ಶಹಾ ಅವರ ಮೂಲಕ ಚುನಾವಣೆ ಎದುರಿಸಿದ ಮೊದಲ ಎರಡು ಅವಧಿಯಲ್ಲಿ ಮಹಿಳೆಯಿಂದಲೇ ಕಾಂಗ್ರೆಸ್ ಖಾತೆ ತೆರೆದಿದ್ದ ಬಸವನ ಬಾಗೇವಾಡಿ ಕ್ಷೇತ್ರ, 14 ಚುನಾವಣೆ ಕಂಡಿದೆ. ಈ ಹಿಂದಿನ ಎರಡು ಅವಧಿಯಲ್ಲೂ ಕಾಂಗ್ರೆಸ್ ತೆಕ್ಕೆಯಲ್ಲೇ ಇದೆ. ಅನಂತರ ಬಿ.ಎಸ್.ಪಾಟೀಲ ಮನಗೂಳಿ ಅವರ ಮೂಲಕ ಎರಡು ಬಾರಿ ಕಾಂಗ್ರೆಸ್ ಹಿಡಿತ ದಲ್ಲಿದ್ದ ಈ ಕ್ಷೇತ್ರ ಇವರಿಂದಲೇ 1978ರಲ್ಲಿ ಜನತಾ ಪಕ್ಷದ ಪಾಲಾಗಿತ್ತು. 1983ರಲ್ಲಿ ಮತ್ತೆ ಕ್ಷೇತ್ರವನ್ನು ಕಾಂಗ್ರೆಸ್ ತೆಕ್ಕೆ ಕೊಂಡೊಯ್ದವರೂ ಮನ ಗೂಳಿಗೌಡರೇ. 1985ರಲ್ಲಿ ಜನತಾ ಪಕ್ಷದ ಕೆ.ಎ.ಪಾಟೀಲ ಗೆದ್ದರೂ ಬಳಿಕ ನಡೆದ 1989 ಹಾಗೂ 1994ರ ಚುನಾ ವಣೆಯಲ್ಲಿ ಕಾಂಗ್ರೆಸ್‌ನ ಬಿ.ಎಸ್.ಪಾಟೀಲ ಮನಗೂಳಿ. 1994ರಲ್ಲಿ ಬಂಗಾರಪ್ಪ ನೇತೃತ್ವದ ಕೆಸಿಪಿಯಿಂದ ಸ್ಪ ರ್ಧಿಸಿ ಸೋತಿದ್ದ ಎಸ್.ಕೆ.ಬೆಳ್ಳುಬ್ಬಿ, 1999ರಲ್ಲಿ ಇಲ್ಲಿಂದಲೇ ಬಿಜೆಪಿ ಕಮಲ ಅರಳಿಸಿ ಶಾಸಕರಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯನ್ನೂ ತವರು ಕ್ಷೇತ್ರ ತಿಕೋಟಾ ತೊರೆದು ಬಸವಜನ್ಮಭೂಮಿ ಕ್ಷೇತ್ರಕ್ಕೆ ಬಂದ ಶಿವಾನಂದ ಪಾಟೀಲ್ 2004ರಲ್ಲಿ ಕಾಂಗ್ರೆಸ್‌ಗೆ ಗೆಲುವು ತಂದಿದ್ದರು. 2008ರಲ್ಲಿ ಎಸ್.ಕೆ.ಬೆಳ್ಳುಬ್ಬಿ ಗೆದ್ದು ಯಡಿಯೂರಪ್ಪ ಸರಕಾರದಲ್ಲಿ ತೋಟಗಾರಿಕೆ ಮಂತ್ರಿಯಾಗಿ ದ್ದರೂ, ರಾಜಕೀಯ ಕಾರಣಕ್ಕೆ ಸಚಿವ ಸ್ಥಾನ ಕಳೆದುಕೊಂಡ ಬೆಳ್ಳುಬ್ಬಿ ಬಿಜೆಪಿ ಸರಕಾರದ ಪತನದ ಹಂತಕ್ಕೆ ಬಂಡಾಯ ಸಾರಿದ್ದರು. ಆ ಬಳಿಕ ನಡೆದ 2013 ಹಾಗೂ 2018ರ ಎರಡು ಚುನಾವಣೆಯಲ್ಲಿ ಶಿವಾನಂದ ಪಾಟೀಲ ಮೂಲಕ ಕಾಂಗ್ರೆಸ್ ಇಲ್ಲಿ ಹಿಡಿತ ಸಾಧಿ ಸಿದೆ. ಸ್ವಯಂ ಬಿ.ಎಸ್.ಪಾಟೀಲ ಮನಗೂಳಿ ಇಲ್ಲಿ ಐದು ಬಾರಿ ಶಾಸಕರಾಗಿ, ಸಚಿವರಾಗಿ ಜನಾನುರಾಗಿಯಾಗಿದ್ದರೂ ಅವರ ಅನಂತರ ರಾಜಕೀಯ ಪ್ರವೇಶಿಸಿದ ಪುತ್ರ ಸೋಮನಗೌಡ ಪಾಟೀಲ ಮನಗೂಳಿ ಜೆಡಿಎಸ್ ಪಕ್ಷದಿಂದ ಸತತ ಮೂರು ಸೋಲು ಅನುಭವಿಸಿ ಇದೀಗ ಬಿಜೆಪಿ ಸೇರಿ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ನಾಗಠಾಣ
ಜನತಾ ಪರಿವಾರದ ಪ್ರಭಾವಿ ನಾಯಕರೆಂದು ಗುರುತಿಸಿಕೊಂಡಿದ್ದ ಹಾಗೂ ಹಾಲಿ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಅವರ ರಾಜಕೀಯ ಪ್ರವೇಶಕ್ಕೆ ವೇದಿಕೆ ಕಲ್ಪಿಸಿರುವುದು ಪರಿಶಿಷ್ಟ ಜಾತಿಗೆ ಮೀಸಲಿದ್ದ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ. 1962ರಿಂದ ಚುನಾವಣೆ ಇತಿಹಾಸ ತೆರೆದುಕೊಳ್ಳುವ ಬಳ್ಳೊಳ್ಳಿ ಮೀಸಲು ಕ್ಷೇತ್ರ, ಕ್ಷೇತ್ರ ಮರುವಿಂಗಡಣೆ ಸಂದರ್ಭದಲ್ಲಿ ನಾಗಠಾಣ ಎಂದು ಹೆಸರಾದರೂ ಮೀಸಲು ಮಾತ್ರ ಬದಲಾಗಿಲ್ಲ. ಈವರೆಗೆ 13 ಚುನಾವಣೆ ಕಂಡಿದೆ. 1962, 1972ರಲ್ಲಿ ಜಿ.ಎಸ್.ಕಬಾಡೆ ಅವರಿಂದ ಕಾಂಗ್ರೆಸ್ ವಶದಲ್ಲಿದ್ದ ಬಳ್ಳೊಳ್ಳಿ ಕ್ಷೇತ್ರ 1967ರಲ್ಲಿ ಆರ್‌ಪಿಐ ಹಾಗೂ 1978 ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಎಸ್.ಎಸ್.ಅರಕೇರಿ ಅವರು ಗೆದ್ದಿದ್ದರು. 1983, 1985, 1994ರಲ್ಲಿ ಮೂರು ಬಾರಿ ಗೆದ್ದಿದ್ದ ರಮೇಶ ಜಿಗಜಿಣಗಿ, ಜನತಾ ಪರಿವಾರದ ಸರಕಾರಗಳ ಸಂದರ್ಭದಲ್ಲಿ ಕಂದಾಯ, ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1989ರಲ್ಲಿ ಹ್ಯಾಟ್ರಿಕ್ ವಿಜಯದ ಕನಸು ಕಂಡಿದ್ದ ಜಿಗಜಿಣಗಿ ಅವರಿಗೆ ಸೋಲುಣಿಸಿದ್ದು ಕಾಂಗ್ರೆಸ್‌ನ ಮನೋಹರ ಐನಾಪುರ. ಬಳಿಕ ರಾಜ್ಯ ರಾಜಕೀಯದಿಂದ ದೂರವಾಗಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಗೆದ್ದು ಸತತ ಮೂರು ಬಾರಿ ಸಂಸತ್ ಪ್ರವೇಶಿಸಿದ್ದ ರಮೇಶ ಜಿಗಜಿಣಗಿ, ವಿಜಯಪುರ ಲೋಕಸಭೆ ಪರಿಶಿಷ್ಟ ಜಾತಿಗೆ ಮೀಸಲಾದ ಬಳಿಕ ಇಲ್ಲಿಂ ದಲೂ ಸ್ಪ ರ್ಧಿಸಿ ಸತತ ಮೂರು ಬಾರಿ ಗೆದ್ದಿದ್ದಾರೆ. ಸತತ ಆರು ಬಾರಿ ಲೋಕಸಭೆ ಪ್ರವೇಶಿಸಿರುವ ಹಿರಿಯ ಸಂಸದೀಯ ಪಟು ಎನಿಸಿರುವ ಜಿಗಜಿಣಗಿ, ಪ್ರಧಾನಿ ಮೋದಿ ಅವರ ಮೊದಲ ಅವ ಧಿಯ ಸರಕಾರದಲ್ಲಿ ಕೇಂದ್ರದಲ್ಲಿ ಸಚಿವರೂ ಆಗಿದ್ದರು. ಎಚ್.ಆರ್.ಆಲಗೂರು ಮೂಲಕ ಎರಡು ಬಾರಿ ಕಾಂಗ್ರೆಸ್, ವಿಟuಲ ಕಟಕಧೋಂಡ ಮೂಲಕ ಎರಡು ಬಾರಿ ಬಿಜೆಪಿ ಹಾಗೂ ದೇವಾನಂದ ಚವ್ಹಾಣ ಮೂಲಕ ಇದೀಗ ಜೆಡಿಎಸ್ ಪಕ್ಷಕ್ಕೂ ಇಲ್ಲಿನ ಮತದಾರ ಮಣೆ ಹಾಕಿದ್ದಾರೆ. -ಜಿ.ಎಸ್. ಕಮತರ