Advertisement
ಆಯುಧಪೂಜೆ ಕಾರ್ಯಕ್ರಮದಲ್ಲಿ ಸಿಎಂ: ವಿಜಯ ದಶಮಿಗೂ ಮುನ್ನ ನವಮಿಯಂದು ಆಚರಿಸುವ ಆಯುಧಪೂಜೆಯನ್ನು ಜನತೆ ಶ್ರದ್ಧಾ ಭಕ್ತಿಗಳಿಂದ ನೆರವೇರಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ತಮ್ಮ ಪುತ್ರ ಭರತ್ ಅವರ ಮ್ಯಾಗ್ನಟಿಕ್ ಎಂಜಿನಿಯರ್ಸ್ ಕಾರ್ಖಾನೆಗೆ ಭೇಟಿ ನೀಡಿ ಯಂತ್ರಗಳಿಗೆ ಪೂಜೆ ಸಲ್ಲಿಸಿದರು. ಕಾರ್ಖಾನೆಗೆ ಗುರುವಾರ ಬೆಳಗ್ಗೆ ಆಗಮಿಸಿದ ಸಿಎಂ ಬೊಮ್ಮಾಯಿ, ಅವರ ಪತ್ನಿ ಚೆನ್ನಮ್ಮ ಫ್ಯಾಕ್ಟರಿಯಲ್ಲಿನ ಯಂತ್ರಗಳಿಗೆ ಪೂಜೆ ಸಲ್ಲಿಸಿದರು.
Related Articles
Advertisement
ವಿಜಯ ದಶಮಿ: ವಿಜಯ ದಶಮಿ ಅಂಘವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬನ್ನಿ ಹೊಡೆಯುವ ಆಚರಣೆ ನಡೆಯಿತು. ಮಹಿಳೆಯರು ಬನ್ನಿ ಮರಕ್ಕೆ ಮಳ್ಳು ಕಟ್ಟಿ ಪೂಜೆ ಸಲ್ಲಿಸಿದರು. ನಗರದ ನೆಲದಾಂಜ ನೇಯಸ್ವಾಮಿ ದೇವಾಲಯದಲ್ಲಿನ ಬನ್ನಿ ಮರಕ್ಕೆ ಭಕ್ತಾ ದಿಗಳು ಪೂಜೆ ಸಲ್ಲಿಸಿದರು. ನಗರದ ವನ್ನಿಗರ ಪೇಟೆಯಲ್ಲಿರುವ ಶ್ರೀ ಸಪ್ತ ಮಾತೃಕಾ ಮಾರಿಯಮ್ಮ ದೇವಾಲಯದಲ್ಲಿ ನವರಾತ್ರಿ ಅಂಗವಾಗಿ ದುರ್ಗಾ ದೇವಿಯ ಮೂರ್ತಿ ಹಾಗೂ ದಸರಾ ಬೊಂಬೆಗಳನ್ನು ಪ್ರತಿಷ್ಟಾಪಿಸಿ, ದೇವಿಗೆ ಪ್ರತಿನಿತ್ಯ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ದುರ್ಗಾದೇವಿ ಮೂರ್ತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು. ನಗರದ ಕಾಳಮ್ಮ ದೇವಾಲಯದಲ್ಲಿ ಪ್ರತಿನಿತ್ಯ ವಿಶೇಷ ಅಲಂಕಾರ ಮಾಡಿ ವಿಜಯದಶಮಿಯಂದು ನಗರ ಉತ್ಸವ ನಡೆಸಿ ಬನ್ನಿ ಮಂಟಪದ ಪೂಜೆ ನೆರವೇರಿಸಲಾಯಿತು. ತಾಲೂಕಿನ ಲಿಂಗನಹಳ್ಳಿಯಲ್ಲಿ ಶ್ರೀ ಆಂಜನೇಯ, ಬಸವೇಶ್ವರ ಮೂರ್ತಿಗಳ ಆರಾಧನೆಯಲ್ಲಿ ಗ್ರಾಮಸ್ಥರು ಶ್ರದ್ಧಾಭಕ್ತಿಗಳಿಂದ ಭಾಗಿಯಾಗಿದ್ದರು.
ನಗರದ ಶ್ರೀ ರಾಮಲಿಂಗ ಚೌಡೇಶ್ವರಿ, ಶ್ರೀ ಶಾರದಾ ಶಂಕರ ಸದನ, ಮುತ್ಯಾಲಮ್ಮ ದೇವಿ,ಅಯ್ಯಪ್ಪಸ್ವಾಮಿ ದೇವಾಲಯ,ಶ್ರೀ ವಾಸವಿ ಕ್ಕನಿಕಾ ಪರಮೇಶ್ವರಿ, ಶ್ರೀ ಜನಾರ್ದನಸ್ವಾಮಿ, ಶ್ರೀ ವೇಣುಗೋಪಾಲಸ್ವಾಮಿ ಹಾಗೂ ಕುಚ್ಚಪ್ಪನಪೇಟೆಯ ಮಾರಮ್ಮದೇವಿ ದೇವಾಲಯಗಳಲ್ಲಿ ಶರನ್ನವರಾತ್ರೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ವಾದ್ಯಗೋಷ್ಟಿಯೊಂದಿಗೆ ಪಥ ಸಂಚಲನ ನಡೆಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಆಕರ್ಷಕ ಪಥ ಸಂಚಲನದಲ್ಲಿ ನೂರಾರು ಗಣವೇಷ ಧಾರಿಗಳು ಶಿಸ್ತಿನಿಂದ ಭಾಗವಹಿಸಿದ್ದರು.