ಮುಂಬೈ: ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರು 2015-16ರಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ನಲ್ಲಿ 330 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾರೆ, ಅದೇ ಸಮಯದಲ್ಲಿ ಅವರ ಕಿಂಗ್ ಫಿಷರ್ ಏರ್‌ಲೈನ್ಸ್ ನಗದು ಕೊರತೆಯನ್ನು ಎದುರಿಸುತ್ತಿತ್ತು ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ ಆರೋಪಪಟ್ಟಿಯಲ್ಲಿ ಹೇಳಿಕೊಂಡಿದೆ.
ಇದೇ ಸಮಯದಲ್ಲಿ ಮದ್ಯದ ದೊರೆ ವಿಜಯ್ ಮಲ್ಯ ಅವರ ಬಾಕಿ ಉಳಿದಿರುವ ಸಾಲವನ್ನು ಬ್ಯಾಂಕ್ ಗಳು ವಸೂಲಿ ಮಾಡಿಲ್ಲ ಎಂದು ಸಿಬಿಐ ಚಾರ್ಜ್‌ಶೀಟ್ ಹೇಳಿದೆ.
ಇದನ್ನೂ ಓದಿ:ಮದ್ಯದ ಅಮಲಿನಲ್ಲಿ ವಿಮಾನದಲ್ಲಿ ರಂಪಾಟ; ಇಬ್ಬರನ್ನು ಬಂಧಿಸಿದ ಮುಂಬೈ ಪೊಲೀಸರು
2008 ಮತ್ತು 2017 ರ ನಡುವೆ ಬ್ಯಾಂಕ್‌ಗಳಿಗೆ ಮರುಪಾವತಿಸಲು ಸಾಕಷ್ಟು ಹಣವನ್ನು ಮಲ್ಯ ಹೊಂದಿದ್ದು, ಅಲ್ಲಿಂದ ಅವರು ತಮ್ಮ ಕಿಂಗ್ ಫಿಶರ್ ಏರ್ ಲೈನ್ಸ್ ಲಿಮಿಟೆಡ್ ಗೆ (ಕೆಎಎಲ್) ಸಾಲ ಪಡೆದಿದ್ದಾರೆ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ಹೇಳಿದೆ.
ಆದರೂ ಅವರು ಯುರೋಪಿನಾದ್ಯಂತ ತಮ್ಮ ‘ವೈಯಕ್ತಿಕ ಆಸ್ತಿಗಳನ್ನು’ ಖರೀದಿಸಿದರು. ಸ್ವಿಟ್ಜರ್ಲೆಂಡ್ ನಲ್ಲಿರುವ ಅವರ ಮಕ್ಕಳ ಟ್ರಸ್ಟ್ ಗಳಿಗೆ ಹಣವನ್ನು ವರ್ಗಾಯಿಸಿದರು.
ಮಲ್ಯ 2016 ರಲ್ಲಿ ಭಾರತವನ್ನು ತೊರೆದರು. ಯುನೈಟೆಡ್ ಕಿಂಗ್ ಡಂನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸುವ ಪ್ರಕ್ರಿಯೆಗಳು ನಡೆಯುತ್ತಿವೆ.