Advertisement

ಮಹಾರಾಷ್ಟ್ರ ವಿರುದ್ಧ ಎಡವಿದ ಕರ್ನಾಟಕ

06:15 AM Sep 21, 2018 | Team Udayavani |

ಬೆಂಗಳೂರು: ದೇಶಿ ಕ್ರಿಕೆಟ್‌ನಲ್ಲಿ ಅಳವಡಿಸುವ ವಿಜೆಡಿ (ವಿ. ಜಯದೇವನ್‌) ನಿಯಮ ಪ್ರಕಾರ ಮಹಾರಾಷ್ಟ್ರ ವಿರುದ್ಧ ಆತಿಥೇಯ ಕರ್ನಾಟಕ ತಂಡ ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ನ ಮೊದಲ ಪಂದ್ಯದಲ್ಲಿ 57 ರನ್‌ ಸೋಲು ಕಂಡಿದೆ.

Advertisement

ಬೆಂಗಳೂರಿನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮಹಾರಾಷ್ಟ್ರ 50 ಓವರ್‌ಗಳಲ್ಲಿ 8 ವಿಕೆಟಿಗೆ 245 ರನ್‌ಗಳಿಸಿತು. ಈ ಸವಾಲಿನ ಮೊತ್ತ ಪೇರಿಸುವ ವೇಳೆ ಮಳೆ ಅಡಚಣೆ ಉಂಟು ಮಾಡಿತು. ಆಗ ಕರ್ನಾಟಕ 22.4 ಓವರ್‌ಗಳಲ್ಲಿ 6 ವಿಕೆಟಿಗೆ 107 ರನ್‌ ಮಾಡಿತ್ತು. ಈ ಅವಧಿಯಲ್ಲಿ ಗೆಲುವಿಗಾಗಿ 165 ರನ್‌ ಗಳಿಸಬೇಕಿತ್ತು.

ಕರ್ನಾಟಕ ಬ್ಯಾಟಿಂಗ್‌ ವೈಫ‌ಲ್ಯ
ಕರ್ನಾಟಕ ತಂಡಕ್ಕೆ ಆರಂಭಿಕರಾದ ಆರ್‌. ಸಮರ್ಥ್ (17), ಮಾಯಾಂಕ್‌ ಅಗರ್ವಾಲ್‌ (12) 38 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡಿದ್ದರು. ಕರುಣ್‌ ನಾಯರ್‌ ಆಟ ನಾಲ್ಕೇ ರನ್ನಿಗೆ ಮುಗಿಯಿತು.  ಕಳೆದುಕೊಂಡರು. 

ಸಿ.ಎಂ. ಗೌತಮ್‌ (29) ಮತ್ತು ಪವನ್‌ ದೇಶಪಾಂಡೆ (31) ಸ್ವಲ್ಪ ಭರವಸೆ ಮೂಡಿಸಿದರು. ಬಳಿಕ ಬಂದ ಸ್ಟುವರ್ಟ್‌ ಬಿನ್ನಿ (0), ಶ್ರೇಯಸ್‌ ಗೋಪಾಲ್‌ (ಅಜೇಯ 7), ಆರ್‌. ವಿನಯ್‌ ಕುಮಾರ್‌ (ಅಜೇಯ 1) ಅವರಿಂದ ತಂಡವನ್ನು ದಡ ತಲುಪಿಸಲಾಗಲಿಲ್ಲ. ಮಹಾರಾಷ್ಟ್ರ ಪರ ಸತ್ಯಜಿತ್‌ 9ಕ್ಕೆ 2 ವಿಕೆಟ್‌ ಕಿತ್ತು ಮಿಂಚಿದರು.

ಅಂಕಿತ್‌ ಭವೆ° ಅವರ ಅಜೇಯ 104 ರನ್‌ ಮಹಾರಾಷ್ಟ್ರ ಸರದಿಯ ಆಕರ್ಷಣೆಯಾಗಿತ್ತು. 115 ಎಸೆತಗಳ ಈ ಆಕರ್ಷಕ ಆಟದ ವೇಳೆ 10 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಯಲ್ಪಟ್ಟಿತ್ತು. ರಾಹುಲ್‌ ತ್ರಿಪಾಠಿ 68 ಎಸೆತಗಳಿಂದ 70 ರನ್‌ ಮಾಡಿದರು (7 ಬೌಂಡರಿ, 2 ಸಿಕ್ಸರ್‌).

Advertisement

ಸಂಕ್ಷಿಪ್ತ ಸ್ಕೋರ್‌: ಮಹಾರಾಷ್ಟ್ರ-50 ಓವರ್‌ಗಳಲ್ಲಿ 8 ವಿಕೆಟಿಗೆ 245 (ಅಂಕಿತ್‌ ಭವೆ° ಅಜೇಯ 104 , ರಾಹುಲ್‌ ತ್ರಿಪಾಠಿ 70, ಅಭಿಮನ್ಯು ಮಿಥುನ್‌ 30ಕ್ಕೆ 2). ಕರ್ನಾಟಕ-22.4 ಓವರ್‌ಗಳಲ್ಲಿ 6 ವಿಕೆಟಿಗೆ 107 ( ಪವನ್‌ ದೇಶಪಾಂಡೆ 31, ಸಿಎಂ. ಗೌತಮ್‌ 29, ಸತ್ಯಜಿತ್‌ 19 ಕ್ಕೆ2).

Advertisement

Udayavani is now on Telegram. Click here to join our channel and stay updated with the latest news.

Next