ಇಲ್ಲಿ ಯಾರನ್ನು ಗಲ್ಲಿಗೇರಿಸುತ್ತಿದ್ದಾರೆ ಅಂತ ನೋಡಿದರೆ ಯಾರನ್ನೂ ಗಲ್ಲಿಗೇರಿಸುತ್ತಿಲ್ಲ? ಇಲ್ಲಿ ಹಲಗೆ ಬಾರಿಸುತ್ತಿದ್ದಾರಾ ಅಂತ ಗಮನಿಸಿದರೆ ಯಾವ ಶಬ್ದವು ಕೇಳುತ್ತಿಲ್ಲ, ಕುರಿಗಾಹಿಯೊಬ್ಬ ಕಾಯುತ್ತಿದ್ದಾನೆ. ಆದರೆ ಕುರಿಗಳು ಮುಂದೆ ಹೋಗುತ್ತಿಲ್ಲ, ಹೊಲವನ್ನು ಉಳುತ್ತಿದ್ದಾನೆ, ಆದರೆ ಎತ್ತುಗಳು ಮುಂದೆ ಹೋಗುತ್ತಿಲ್ಲ, ಯಾರೋ ಸ್ವಾತಂತ್ರ್ಯಕ್ಕಾಗಿ ಚಳವಳಿ ನಡೆಸಿದವರ ಪೋಷಾಕು ಧರಿಸಿ ನಿಂತಿದ್ದಾರೆ. ಆದರೆ, ಅವರಾರೂ ಮುಂದೆ ಸಾಗುತ್ತಿಲ್ಲ…
Advertisement
ಏನಿದು ಅಂತೀರಾ! ಹೌದು …. ಇದೊಂದು ಸುಂದರವಾದ ಮಾಯಾಬಜಾರ್‌ನ ಚಿತ್ರಣ.
ಇಲ್ಲಿ ಎಲ್ಲವೂ ಮನಮೋಹಕ. ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಜಗ್ಗಲಿ ಕುಣಿತ, ಕೋಲಾಟ, ಡೊಳ್ಳು ಕುಣಿತ, ಭತ್ತದ ನಾಟಿ, ಬೇಸಾಯ ಮಾಡುವುದು, ಹಿರಿಯರು ದನ ಮೇಯಿಸುವುದು, ಮಂಗಳ ವಾದ್ಯ, ಭಜನೆಯಂಥ ದೇಶಿಯ ಕಲೆಗಳ ದೃಶ್ಯವನ್ನು ಶಿಲ್ಪಕಲೆಗಳಲ್ಲಿ ಆರಳಿಸಲಾಗಿದೆ. ಹಾಗೆಯೇ, ಇವರ ಜೀವನದ ಅವಿಭಾಜ್ಯ ಅಂಗವಾದ ಕೃಷಿ ಮತ್ತು ದನ, ಎಮ್ಮೆ, ಹೈನುಗಾರಿಕೆ ಮುಂತಾದುವುಗಳ ಚಿತ್ರಣಗಳನ್ನು ಶಿಲ್ಪಗಳ ರೂಪದಲ್ಲಿ ಆರಳಿಸಲಾಗಿದೆ.
Related Articles
Advertisement
ಶಿಲ್ಪಗಳ ಜೊತೆಗೆ ಉದ್ಯಾನದ ನಡುವೆ ಸಂಗೀತ ಕಾರಂಜಿಗಳಿವೆ. ಮಕ್ಕಳಿಗೆ ಆಟವಾಡಲು ಬೇಕಾದ ಪರಿಕರಗಳಿವೆ. ಉದ್ಯಾನವನವನ್ನು ಸುತ್ತಾಡಿ ಸುಸ್ತಾದರೆ ದಣಿವಾರಿಸಿಕೊಳ್ಳಲು ಆಸನಗಳಿವೆ. ಉದ್ಯಾನವನದ ಎದುರಿಗೆ ಟೀ, ಕಾಫಿಗಾಗಿ ಇರುವ ಪುಟ್ಟ ಹೋಟೆಲ್‌ಗಳಿವೆ. ಯಾವುದೇ ಈ ಉದ್ಯಾನವನವನ್ನು ನೋಡಲು ಶುಲ್ಕವಿಲ್ಲ. ಆದರೆ ವಾರದಲ್ಲಿ ಶನಿವಾರ, ಭಾನುವಾರ, ಮತ್ತು ಸೋಮವಾರ ಮಾತ್ರ ಬೆಳಗ್ಗೆ 10ರಿಂದ ಸಂಜೆ 5 ವರೆಗೆ ಮಾತ್ರ ಪ್ರವೇಶ ಇರುತ್ತದೆ.
ಟಿ.ಶಿವಕುಮಾರ್