Advertisement
ಪಾಕಿಸ್ತಾನದ ಫಾಲಿಯಾದಲ್ಲಿ ಪಂಜಾಬ್ ಗ್ರೂಪ್ ಆಫ್ ಕಾಲೇಜ್ (ಪಿಜಿಸಿ) ಯುವ ಸಂಗೀತ ಉತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
Related Articles
Advertisement
ಇದರಿಂದ ಕೋಪಗೊಂಡ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಗೀತಕಾರನ ವಿರುದ್ಧ ಕಿಡಿಕಾರಿದ್ದಾರೆ ಅಲ್ಲದೆ ಕೆಲವರು ಈತನನ್ನು ಅಮೆರಿಕದ ರಾಪರ್ ಕಾರ್ಡಿ ಬಿ ಗೆ ಹೋಲಿಸಿ ಕಾಮೆಂಟ್ ಮಾಡಿದ್ದಾರೆ. ಯಾಕೆಂದರೆ ಆತನೂ ಒಂದು ಕಾರ್ಯಕ್ರಮದಲ್ಲಿ ಇದೇ ರೀತಿ ಮೈಕ್ ಎಸೆದಿದ್ದ ಹಾಗಾಗಿ ಆತನಿಗೆ ಹೋಲಿಸಿ ಕಿಡಿಕಾರಿದ್ದಾರೆ.
ಸಂಗೀತ ಕಾರ್ಯಕ್ರಮದ ವೇಳೆ ಮೈಕ್ ಎಸೆದ ಕುರಿತು ಕೊನೆಗೂ ಮೌನ ಮುರಿದ ಪಾಕ್ ಸಂಗೀತಕಾರ ಬಿಲಾಲ್ ‘ ವೇದಿಕೆ ಎಂಬುದು ಯಾವತ್ತಿಗೂ ನನ್ನ ಪ್ರಪಂಚವಾಗಿದೆ; ಪ್ರದರ್ಶನ ನೀಡುವಾಗ ನನ್ನ ಮನಸ್ಸು ಸಂಪೂರ್ಣ ಪ್ರದರ್ಶನದ ಮೇಲಿರುತ್ತದೆ, ಪ್ರೇಕ್ಷಕರಿಗೆ ಯಾವುದೇ ರೀತಿಯಲ್ಲೂ ತೊಂದರೆ, ಕಿರಿಕಿರಿ ಆಗಬಾರದೆಂಬುದೇ ನನ್ನ ಗುರಿ, ಸಾಧ್ಯವಾದಷ್ಟು ಪ್ರೇಕ್ಷಕರಿಗೆ ಮನರಂಜನೆ ನೀಡುಬೇಕೆನ್ನುವುದು ನನ್ನ ಉದ್ದೇಶ ಇದಕ್ಕಾಗಿ ನನ್ನ ಅನಾರೋಗ್ಯ, ಒತ್ತಡ, ಚಿಂತೆಗಳನ್ನು ಮರೆತು ಬಿಡುತ್ತೇನೆ, ನನ್ನ ಅಭಿಮಾನಿಗಳಿಗಾಗಿ ನಾನು ಪ್ರದರ್ಶನ ಮಾಡುವಾಗ ಎಲ್ಲವನ್ನೂ ಬಿಟ್ಟುಬಿಡುತ್ತೇನೆ. ಮತ್ತು ಏನೇ ಆಗಲಿ, ನನಗೆ ಮತ್ತು ನನ್ನ ವೇದಿಕೆಗೆ ನನ್ನಿಂದ ಸಲ್ಲಬೇಕಾದ ಗೌರವಕ್ಕೆ ಏನೂ ಅಡ್ಡಿಯಾಗಬಾರದು ಎಂಬುದು ನನ್ನ ಧ್ಯೇಯ ಎಂದು ಹೇಳಿಕೊಂಡಿದ್ದಾರೆ.
‘ನಾನು ನನ್ನ ಅಭಿಮಾನಿಗಳನ್ನು ಹೆಚ್ಚು ಪ್ರೀತಿಸುತ್ತೇನೆ ಮತ್ತು ಕೆಲವೊಮ್ಮೆ ಆ ಪ್ರೀತಿ ಎರಡೂ ಕಡೆಯವರಿಗೂ ಅಗಾಧವಾಗಿ ಕಾಣುತ್ತದೆ. ಜನಸಂದಣಿಯಲ್ಲಿ ಯಾರೋ ಒಬ್ಬರು ಅನುಚಿತವಾಗಿ ವರ್ತಿಸುವುದು ಇದು ಮೊದಲ ಬಾರಿಗೆ ಅಲ್ಲ, ಆದರೆ ನಾನು ತಪ್ಪು ಪ್ರತಿಕ್ರಿಯೆ ನೀಡಿದ್ದು ಅದು ಮೊದಲ ಬಾರಿಗೆ! ನಾನು ಎಂದಿಗೂ ವೇದಿಕೆಯನ್ನು ಬಿಡಬಾರದಿತ್ತು,” ಎಂದು ಬರೆದುಕೊಂಡಿದ್ದಾರೆ.