Advertisement
ಯಲಹಂಕ ಓಲ್ಡ್‌ಟೌನ್‌ನ ನಿವಾಸಿ 15 ವರ್ಷದ ಬಾಲಕಿ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯಾಗಿದ್ದಾಳೆ. ಬಾಲಕಿಯ ಮನೆ ಸಮೀಪದಲ್ಲೇ ನೆಲೆಸಿದ್ದ ಆಕೆಯ ಸ್ನೇಹಿತೆಯ ಸಹೋದರ ಮುಜಾಹಿದ್ ಸೇರಿ 8 ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
Related Articles
Advertisement
ಇದಾದ ಕೆಲದ ದಿನಗಳ ಬಳಿಕ ಆರೋಪಿ ಮುಜಾ ಹಿದ್‌ನ ಸ್ನೇಹಿತರು ಮಾತನಾಡುವ ನೆಪದಲ್ಲಿ ಬಾಲಕಿಯನ್ನು ತಾವಿದ್ದಲ್ಲಿಗೆ ಕರೆಸಿಕೊಂಡಿದ್ದರು. ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ ಖಾಸಗಿ ವಿಡಿಯೋವನ್ನು ಆಕೆಗೆ ತೋರಿಸಿ, ತಮ್ಮ ಜತೆಗೆ ಲೈಂಗಿಕ ಸಂಪರ್ಕ ಹೊಂದುವಂತೆ ಒತ್ತಾಯಿಸಿದ್ದರು. ಇಲ್ಲದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದರು. ನಂತರ ಆರೋಪಿಗಳು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ.
ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಬಾಲಕಿ ಬಳಿ ಹಣಕ್ಕೆ ಬೇಡಿಕೆಯಿಟ್ಟು, ಆ ವಿಡಿಯೋವನ್ನು ತಮ್ಮ ಪರಿಚಿತರಿಗೆ ಕಳುಹಿಸಿದ್ದರು. ಹೀಗಾಗಿ ವಿಡಿಯೋ ಲೀಕ್ ಆಗಿತ್ತು. ಇತ್ತೀಚೆಗೆ ಪರಿಚಿತರ ಮೂಲಕ ಈ ವಿಚಾರ ಬಾಲಕಿಯ ತಾಯಿಯ ಗಮನಕ್ಕೆ ಬಂದಿತ್ತು. ಈ ಬಗ್ಗೆ ಮಗಳ ಬಳಿ ಪ್ರಶ್ನಿಸಿದಾಗ ಆಕೆ ನಡೆದ ಸಂಗತಿ ವಿವರಿಸಿದ್ದಳು.
ಏ.6ರಂದು ಬಾಲಕಿಯ ತಾಯಿ ಯಲಹಂಕ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ಲೈಂಗಿಕ ದೌರ್ಜನ್ಯ ದೃಢ ಆರೋಪಿಯು ಬಾಲಕಿ ಜತೆಗೆ ಲೈಂಗಿಕ ಸಂಪರ್ಕ ಬೆಳೆಸಿರುವುದು ದೃಢಪಟ್ಟಿದೆ. ಇದನ್ನು ಆರೋಪಿಯ ಸ್ನೇಹಿತರು ಕದ್ದು ವಿಡಿಯೋ ಮಾಡಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.