ಮುಂಬಯಿ: ಪುಣೆ-ಸತಾರಾ ಹೆದ್ದಾರಿಯಲ್ಲಿ ಹವಾನಿಯಂತ್ರಿತ ಬಸ್ ಬೆಂಕಿಗಾಹುತಿಯಾದ ಘಟನೆ ಮಂಗಳವಾರ ಸಂಭವಿಸಿದೆ.
ಅದೃಷ್ಟವಶಾತ್ 30 ಪ್ರಯಾಣಿಕರು ಅನಾಹುತದಿಂದ ಪಾರಾಗಿದ್ದಾರೆ. ರಾಜ್ಯ ಸಾರಿಗೆಯ ಶಿವಶಾಹಿ ಬಸ್ ಸ್ವರ್ಗಾಟ್ ಸಾಂಗ್ಲಿ ಮಾರ್ಗದ ಸತಾರಾ ನಗರದ ವಧೆಫಾಟಾ ಬಳಿ ಈ ಘಟನೆ ನಡೆದಿದೆ.
ಎಸಿ ಬಸ್‌ನಲ್ಲಿ ಇಬ್ಬರು ಸಿಬ್ಬಂದಿ ಹೊರತುಪಡಿಸಿ 30 ಪ್ರಯಾಣಿಕರಿದ್ದರು ಎಂದು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಎಂಎಸ್‌ಆರ್‌ಟಿಸಿ) ವಕ್ತಾರರು ತಿಳಿಸಿದ್ದಾರೆ. ಬಸ್ಸಿನ ಎಡಭಾಗದ ಹಿಂಭಾಗ ಟಾಯರ್ ಒಡೆದು ಬೆಂಕಿ ಹೊತ್ತಿಕೊಂಡಿದೆ ಎಂದು ಅವರು ಹೇಳಿದರು.
ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ. ಬೆಂಕಿ ಅವಘಡದಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಬೆಂಕಿಗಾಹುತಿಯಿಂದ ಬಸ್‌ಗೆ ಸುಮಾರು 25 ಲಕ್ಷ ರೂ.ಹಾನಿಯಾಗಿದೆ.ಎಂಎಸ್‌ಆರ್‌ಟಿಸಿ 15,000 ಕ್ಕೂ ಹೆಚ್ಚು ಎಸಿ ಮತ್ತು ನಾನ್ ಎಸಿ ಬಸ್ಸುಗಳನ್ನು ಹೊಂದಿರುವ ದೇಶದ ಅತಿದೊಡ್ಡ ಸಾರ್ವಜನಿಕ ಸಾರಿಗೆ ನಿಗಮಗಳಲ್ಲಿ ಒಂದಾಗಿದೆ.