Advertisement

ದೇವನಹಳ್ಳಿ ತಾಲೂಕಿನಲ್ಲಿ “ವಿದ್ಯಾಗಮ’ಯಶಸ್ಸಿನತ್ತ

12:52 PM Sep 26, 2020 | Suhan S |

ವಿಜಯಪುರ: ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಜಾರಿಗೆತಂದಿರುವ “ವಿದ್ಯಾಗಮ’ ಯಶಸ್ಸಿನತ್ತ ಸಾಗುತ್ತಿದ್ದು ಮಕ್ಕಳೂ ಖುಷಿಯಿಂದಲೇ ಪಾಠಗಳನ್ನುಕೇಳುತ್ತಿದ್ದಾರೆ.

Advertisement

ಪ್ರಾಥಮಿಕ ಶಿಕ್ಷಣ ಮಕ್ಕಳ ಬದುಕಿನ ಅತ್ಯುತ್ತಮ ಅಡಿಪಾಯವಾ ಗಿದ್ದು, ಸರ್ಕಾರಿ ಶಾಲೆಗಳ 1 ರಿಂದ 10ನೇ ತರ ಗತಿ ವಿದ್ಯಾರ್ಥಿಗಳು ಯೋಜನೆ ಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ ಪರಿಣಾಮವಾಗಿ ಶೈಕ್ಷಣಿಕ ವ್ಯವಸ್ಥೆಗೆ ಕೊಡಲಿ ಪೆಟ್ಟು ಬೀಳುವುದನ್ನು ಅರಿತ ಸರ್ಕಾರ ಮಕ್ಕಳ ಶ್ರೇ ಯೋಭಿವೃದ್ಧಿಗೆ ಆ.10 ರಿಂದ ಆರಂಭಗೊಂಡಿರುವ “ವಿದ್ಯಾ ಗಮ’ ಯೋಜನೆ ಮಕ್ಕಳ ಭವಿಷ್ಯದ ಪರ ನಿಲ್ಲಲಿದೆ ಎನ್ನುವುದು ಸಂತೋಷಕರ ವಿಷಯ.

ಎಳೆಯ ವಯಸ್ಸಿನ ಮಕ್ಕಳಿಗೆ ಸಂವಹನದ ಮೂಲಕ ನೇರ ಶಿಕ್ಷಣದ ಅಗತ್ಯವಿದೆಯೇ ಹೊರತು ತಂತ್ರಜ್ಞಾನ ಬಳಸಿ ಕಲಿಸುವ ಪಾಠವಲ್ಲ. ಹಲವು ಖಾಸಗಿ ಶಾಲೆಗಳು ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ ಕಲ್ಪಿಸಿದ್ದು, ಇದನ್ನು ಸಾಕಷ್ಟು ಬಡ ವಿದ್ಯಾರ್ಥಿಗಳು ಅಳವಡಿಸಿಕೊಂಡು ಕಲಿಯಲು ಸಾಧ್ಯವಾಗುತ್ತಿಲ್ಲ.

ಯಶಸ್ವಿ: ಶಾಲೆ ಬದಲಾಗಿ ಹಳ್ಳಿಗಳಲ್ಲಿನ ದೇವಾಲಯ ಆವರಣ, ಸಮುದಾಯ ಭವನ, ಅರಳಿಕಟ್ಟೆ, ದೊಡ್ಡ ಮನೆಗಳ ಪಡಸಾಲೆಗಳಲ್ಲಿ ಸಾಮಾಜಿಕ ಅಂತರದೊಂದಿಗೆ ಮಾಸ್ಕ್, ಸ್ಯಾನಿಟೈಸರ್‌ ಸೌಲಭ್ಯದೊಂದಿಗೆ ಬೋಧನಾ ತರಗತಿ ಯಶಸ್ವಿಯಾಗಿ ನಡೆಯುತ್ತಿವೆ. ವಿಂಗಡಣೆ:ವಿದ್ಯಾಗಮ ಯೋಜನೆಗೆ ವಿಜಯಪುರವನ್ನು 4 ಭೌಗೋಳಿಕ ಭಾಗಗಳಾಗಿ ವಿಂಗಡಿಸಿ ನಾಲ್ಕು ಬಡಾವಣೆಮಕ್ಕಳುಒಂದೆಡೆಸೇರುವಂತೆ ಯೋಜನೆರೂಪಿಸಲಾಗಿದೆ.ಜಿಲ್ಲೆಯಿಂದ ಜಿಲ್ಲೆಗೆ ವಲಸೆ ಬಂದ ಸರ್ಕಾರಿ ಶಾಲಾ ಮಕ್ಕಳೂ ವಿದ್ಯಾಗಮ ಯೋಜನೆಯಡಿ ಕಲಿಕೆಯಡಿ ತೊಡಗಲು ಅವಕಾಶವಿದೆ. ಹಾಗೆಯೇ ಇದೇ ಸಂದರ್ಭದಲ್ಲಿ ವಿಜಯಕುಮಾರಿ, ಜಲಜಾಕ್ಷಿ, ಗಿರಿಜಾಂಬ, ಸರಸ್ವತಿ, ಶಾಂತ ನೇತ್ರಾವತಿ, ಗೀತ, ಸೀಮಾ, ಭಾಗ್ಯಮ್ಮ ಶಿಕ್ಷಕರು “ವಿದ್ಯಾಗಮ’ ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತ ಪಡಿಸಿ, ಮಕ್ಕಳೂ ಆಸಕ್ತಿಯಿಂದ ಕಲಿಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ವಿದ್ಯಾಗಮದ ಮೂಲಕ ವಿದ್ಯಾರ್ಥಿಗಳಕಲಿಕೆ ಸುಧಾರಣೆ ಆಗಿದೆ. ಶಾಲೆಗಳು ಪುನಾರಂಭವಾಗುವವರೆಗೆ ಮಕ್ಕಳುಶಿಕ್ಷಣದಿಂದ ವಂಚಿತರಾಗುವುದಿಲ್ಲ ಎಂಬ ಭರವಸೆ ಇದೆ. ಅಶ್ವತ್ಥನಾರಾಯಣ್‌, ಬಿಇಒ

Advertisement

ಸೇತುಬಂಧ ಸಾಫ‌ಲ್ಯ ಕಾರ್ಯಕ್ರಮದಡಿ ಮಕ್ಕಳಿಗೆ ಅವರ ಹಿಂದಿನ ತರಗತಿಗಳ ಪಾಠದ ಪುನರಾವರ್ತನೆ ಮಾಡಿ ಕಿರು ಪರೀಕ್ಷೆ ನಡೆಸುತ್ತಿದ್ದೇವೆ. ಮಕ್ಕಳು 6 ವಿಷಯಗಳನ್ನೂಕಲಿಯುತ್ತಿದ್ದುಕೃತಿ ಸಂಪುಟವೆಂಬ ಒಂದುಕಡತ ಮಾಡಿ ಕಲಿಕೆ ದಾಖಲು ಮಾಡಲಾ ಗುತ್ತಿದೆ. ನಮ್ಮ ತಂಡದಲ್ಲಿ ಸುಮಾರು 200 ಮಕ್ಕಳಿದ್ದಾರೆ. ಜಲಜಾಕ್ಷಿ, ಶಿಕ್ಷಕಿ

 

ಅಕ್ಷಯ್‌ ವಿ.ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next