Advertisement
ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ವಿದರ್ಭ 312 ರನ್ ಗಳಿಸಿತ್ತು. ಇದನ್ನು ಬೆನ್ನಟ್ಟಿದ ಸೌರಾಷ್ಟ್ರ ಸ್ನೆಲ್ ಪಟೇಲ್ ಶತಕದ ಹೊರತಾಗಿಯೂ307 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತ್ತು. 5 ರನ್ ಗಳ ಮುನ್ನಡೆ ಪಡೆದ ವಿದರ್ಭ ದ್ವಿತೀಯ ಇನ್ನಿಂಗ್ಸ್ ನಲ್ಲಿ ಗಳಿಸಿತ್ತು ಭರ್ತಿ 200 ರನ್.
ಟೆಸ್ಟ್ ಸ್ಪೆಷಲಿಸ್ಟ್ ಪೂಜಾರ ಗಳಿಸಿದ್ದು 1 ಮತ್ತು ಶೂನ್ಯ. ಇದು ಸೌರಾಷ್ಟ್ರಕ್ಕೆ ದುಬಾರಿಯಾಯಿತು. ಪಂದ್ಯದಲ್ಲಿ ಒಟ್ಟು 11 ವಿಕೆಟ್ ಪಡೆದ ಆದಿತ್ಯ ಸರ್ವಾಟೆ ಪಂದ್ಯ ಶ್ರೇಷ್ಟ ಪ್ರಶಸ್ತಿ ಪಡೆದರು.