Advertisement

ವಿದರ್ಭಕ್ಕೆ ಮೊದಲ ಇರಾನಿ ಟ್ರೋಫಿ

06:00 AM Mar 20, 2018 | Team Udayavani |

ನಾಗ್ಪುರ: ನಿರೀಕ್ಷೆಯಂತೆ ರಣಜಿ ಪ್ರಶಸ್ತಿ ವಿಜೇತ ವಿದರ್ಭ ಇರಾನಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಶೇಷ ಭಾರತ ವಿರುದ್ಧ ಗಳಿಸಿದ ಮೊದಲ ಇನ್ನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ವಿದರ್ಭ ಚಾಂಪಿಯನ್‌ ಆಗಿ ಹೊರಹೊಮ್ಮಿತು.

Advertisement

ವಿದರ್ಭದ 800 ರನ್ನುಗಳ ಬೃಹತ್‌ ಮೊತ್ತಕ್ಕೆ ಉತ್ತರವಾಗಿ ಕರುಣ್‌ ನಾಯರ್‌ ನಾಯಕತ್ವದ ಶೇಷ ಭಾರತ 390 ರನ್‌ ಗಳಿಸಿ ಆಲೌಟಾಯಿತು. 410 ರನ್ನುಗಳ ಭಾರೀ ಲೀಡ್‌ ಗಳಿಸಿದ ಬಳಿಕ ದ್ವಿತೀಯ ಸರದಿ ಆರಂಭಿಸಿದ ವಿದರ್ಭ, ಪಂದ್ಯ ಕೊನೆಗೊಳ್ಳುವಾಗ ವಿಕೆಟ್‌ ನಷ್ಟವಿಲ್ಲದೆ 79 ರನ್‌ ಮಾಡಿತ್ತು.

98 ರನ್ನಿಗೆ 6 ವಿಕೆಟ್‌ ಕಳೆದುಕೊಂಡು ತೀವ್ರ ಕುಸಿತಕ್ಕೆ ಸಿಲುಕಿದ್ದ ಶೇಷಭಾರತವನ್ನು ಹನುಮ ವಿಹಾರಿ (183) ಮತ್ತು ಜಯಂತ್‌ ಯಾದವ್‌ (96) ಕೂಡಿ ಕೊಂಡು ಆಧರಿಸಿದ್ದರು. ಇವರಿಬ್ಬರ 7ನೇ ವಿಕೆಟ್‌ ಜತೆಯಾಟದಲ್ಲಿ 216 ರನ್‌ ಒಟ್ಟುಗೂಡಿತು. ಹನುಮ ವಿಹಾರಿ 477 ನಿಮಿಷಗಳ ಕಾಲ ಕ್ರೀಸ್‌ ಆಕ್ರಮಿಸಿಕೊಂಡು 327 ಎಸೆತಗಳಿಗೆ ಜವಾಬಿತ್ತರು. ವಿಹಾರಿ ಒಟ್ಟು 23 ಬೌಂಡರಿ ಹಾಗೂ 3 ಸಿಕ್ಸರ್‌ ಬಾರಿಸಿ ವಿಹರಿಸಿದರು.

ವಿದರ್ಭ ಪರ ರಜನೀಶ್‌ ಗುರ್ಬಾನಿ 4, ಆದಿತ್ಯ ಸರ್ವಟೆ 3, ಉಮೇಶ್‌ ಯಾದವ್‌ 3 ವಿಕೆಟ್‌ ಉರುಳಿಸಿದರು. 286 ರನ್‌ ಬಾರಿಸಿದ ವಾಸಿಂ ಜಾಫ‌ರ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Advertisement

Udayavani is now on Telegram. Click here to join our channel and stay updated with the latest news.

Next