Advertisement

ಚುನಾವಣೆಯಲ್ಲಿ ಜಯ ಸಿ.ಸುವರ್ಣ ಬಳಗಕ್ಕೆ ಭರ್ಜರಿ ಜಯ

03:19 PM Oct 05, 2018 | |

ಮುಂಬಯಿ: ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ ಇದರ 2018-2023ರ ಸಾಲಿನ ನಿರ್ದೇಶಕ ಮಂಡಳಿಗೆ ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಯ ರೂವಾರಿ, ಹಾಲಿ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರ ಬಳಗದ  ಎಲ್ಲ ಸ್ಪರ್ಧಿಗಳು ಭಾರೀ ಮತಗಳಿಂದ ಭರ್ಜರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ.

Advertisement

ಅ. 4ರಂದು ಗೋರೆಗಾಂವ್‌ ಪೂರ್ವದ ಬ್ರಿಜ್‌ವಾಸಿ ಪ್ಯಾಲೇಸ್‌ ಸಭಾಗೃಹದಲ್ಲಿ ನಡೆಸಲ್ಪಟ್ಟ ಮತ ಎಣಿಕೆ ಯಲ್ಲಿ ದೇಶದ ಮೂರು ರಾಜ್ಯ ಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಕಳೆದ ಮಂಗ ಳವಾರ ನಡೆದ ಚುನಾವಣೆಯ  ಮತ ಪೆಟ್ಟಿಗೆಗಳನ್ನು ಭದ್ರತಾಧಿಕಾರಿಗಳು, ಚುನಾವಣಾಧಿಕಾರಿಗಳು ಮತ್ತು ಆಕಾಂಕ್ಷಿಗ‌ಳೆಲ್ಲರ ಸಮ್ಮುಖದಲ್ಲೇ ತೆರೆದು ಮುಖ್ಯ  ಚುನಾವಣಾಧಿಕಾರಿ ಆಗಿದ್ದ ಕೋ. ಆಪರೇಟಿವ್‌ ಸೊಸೈಟಿಯ ಹೆಚ್ಚುವರಿ ರಿಜಿಸ್ಟ್ರಾರ್‌ ಎ.ಕೆ. ಚವ್ಹಾಣ್‌ ತನ್ನ ನೇತೃತ್ವದಲ್ಲಿ ಬೆಳಗ್ಗಿನಿಂದ ಮತ ಎಣಿಕೆ ನಡೆಯಿತು.

ಸಂಜೆ ಭಾರತ್‌ ಬ್ಯಾಂಕಿನ ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ. ಆರ್‌. ಮೂಲ್ಕಿ ಉಪಸ್ಥಿತಿಯಲ್ಲಿ ಎ. ಕೆ. ಚವಾಣ್‌ ಮತದಾನ ಫಲಿತಾಂಶ ಘೋಷಿಸಿದರು. 
ಹದಿನೇಳು ಸ್ಥಾನಗಳಿಗೆ ಹತ್ತೂಂಬತ್ತು ಆಕಾಂಕ್ಷಿಗಳು ಕಣದಲ್ಲಿದ್ದು ಹೆಚ್ಚುವರಿ ಎರಡು ಸ್ಪರ್ಧಿಗಳ ನಿಮಿತ್ತ ನಡೆದ ಚುನಾವಣೆಯಲ್ಲಿ ಜಯ ಸುವರ್ಣರ ತಂಡದ ಪ್ರತಿಸ್ಪರ್ಧಿ ಬ್ಯಾಂಕ್‌ನ ಮಾಜಿ ನಿರ್ದೇಶಕ ರೋಹಿತ್‌ ಎಂ. ಸುವರ್ಣ 2,871 ಮತಗಳೊಂದಿಗೆ ಸ್ಥಾನ ಕಳೆದು ಕೊಂಡರೆ, ಇದೇ ಬ್ಯಾಂಕ್‌ನಲ್ಲೇ ಉದ್ಯೋಗಿಯಾಗಿದ್ದು ನಿವೃತ್ತಿಯಾಗಿ ನಿರ್ದೇಶಕ ಮಂಡಳಿಗೆ ಸವಾಲೆಸೆದು  ಸ್ಪರ್ಧಿಸಿದ ಸತೀಶ್‌ ಎನ್‌. ಬಂಗೇರ 2,672 ಮತಗಳನ್ನು ಗಳಿಸುವುದ ರೊಂದಿಗೆ ಸೋಲುಂಡರು.

ಮಹಾರಾಷ್ಟ್ರ, ಕರ್ನಾಟಕ, ಗುಜ ರಾತ್‌ ಈ ಮೂರು ರಾಜ್ಯಗಳಲ್ಲಿನ ಬ್ಯಾಂಕ್‌ ಕಾರ್ಯಾಚರಣಾ ಪ್ರದೇಶಗ ಳಲ್ಲಿ ಒಟ್ಟು 13,958 ಮತಗಳು ಚಲಾವಣೆಗೊಂಡಿವೆ ಎಂದು ಚುನಾ ವಣಾಧಿಕಾರಿ ಚವ್ಹಾಣ್‌ ಮಾಹಿತಿ ನೀಡಿದರು. 
ಸಂದೀಪ್‌ ದೇಶ್‌ಮುಖ್‌, ಬಿ. ಡಿ. ಗೋಸ್ವಾಮಿ, ಡಾ| ರಾಜರಾಮ್‌ ಧೊಣRರ್‌ ಮತ್ತು ವಿದ್ಯಾನಂದ ಎಸ್‌. ಕರ್ಕೇರ ಹೆಚ್ಚುವರಿ ಚುನಾವಣಾ ಧಿಕಾರಿಗಳಾಗಿ ಸಹಕರಿಸಿದರು. 

ಒಟ್ಟು ಇಪ್ಪತ್ತೆರಡು ಸ್ಥಾನಗಳಿರುವ ಬ್ಯಾಂಕಿನ ನಿರ್ದೇಶಕ ಮಂಡಳಿಗೆ ಇಬ್ಬರು ಮಹಿಳಾ ಸದಸ್ಯೆಯರು, ಇಬ್ಬರು ಕೋ. ಆಪ್ಟೆಡ್‌ ಮತ್ತು ಒಂದು ಹಿಂದುಳಿದ ಜಾತಿ ಮತ್ತು ಪರಿಶಿಷ್ಟ ವರ್ಗದ ಸ್ಥಾನಗಳನ್ನು ಹೊರತುಪಡಿಸಿ ಉಳಿದ ಸ್ಥಾನಗಳಿಗೆ ಮತದಾನ ನಡೆಸಲಾಗಿತ್ತು. 

Advertisement

ಅ. 5ರಂದು ಬ್ಯಾಂಕಿನ 2018- 2023ರ ಸಾಲಿನ ಒಟ್ಟು ಮಂಡಳಿ ಯನ್ನು ಚುನಾವಣಾಧಿಕಾರಿ ಅಧಿಕೃತ ವಾಗಿ ಘೋಷಿಸಲಿದ್ದಾರೆ ಎಂದು  ಎಂದು ಬ್ಯಾಂಕ್‌ನ ಉನ್ನತ ಮೂಲಗಳು ತಿಳಿಸಿವೆ. 

ವಿಜೇತರಲ್ಲಿ ಎಲ್‌. ವಿ. ಅಮೀನ್‌ 12,685 ಮತಗಳನ್ನು ಪಡೆದರೆ,  ನ್ಯಾಯವಾದಿ  ಎಸ್‌. ಬಿ. ಅಮೀನ್‌ 12,213, ಜೆ. ಎ. ಕೋಟ್ಯಾನ್‌ 12,560, ಪ್ರೇಮನಾಥ್‌ ಪಿ. ಕೋಟ್ಯಾನ್‌ 12,467, ಪುರುಷೋತ್ತಮ ಎಸ್‌. ಕೋಟ್ಯಾನ್‌  12,673, ವಾಸುದೇವ ಆರ್‌.ಕೋಟ್ಯಾನ್‌ 12,684, ದಾಮೋದರ ಸಿ. ಕುಂದರ್‌ 12,543, ಎನ್‌. ಟಿ. ಪೂಜಾರಿ 12,803, ಗಂಗಾಧರ್‌ ಜೆ. ಪೂಜಾರಿ 12,741,  ಕೆ. ಬಿ. ಪೂಜಾರಿ 12,645, ಮೋಹನ್‌ದಾಸ್‌ ಎ. ಪೂಜಾರಿ 12,652, ಯು. ಎಸ್‌. ಪೂಜಾರಿ 12,540, ಭಾಸ್ಕರ್‌ ಎಂ. ಸಾಲ್ಯಾನ್‌ 12,620,  ಜಯ ಸಿ. ಸುವರ್ಣ 12,729, ಜ್ಯೋತಿ ಕೆ. ಸುವರ್ಣ 12,503, ಕೆ. ಎನ್‌ ಸುವರ್ಣ 12,039, ಸೂರ್ಯಕಾಂತ್‌ ಜೆ. ಸುವರ್ಣ 11,863 ಮತಗಳನ್ನು ಪಡೆದರು.

ಸಂಭ್ರಮಾಚರಣೆ 
ಬಿಲ್ಲವ ಸಮಾಜದ ಧುರೀಣ, ಬ್ಯಾಂಕಿನ ಅಭಿವೃದ್ಧಿಯ ಹರಿಕಾರ ಜಯ ಸಿ. ಸುವರ್ಣ ಅವರ ಬಳಗ ಭಾರೀ ಅಂತರದಿಂದ ಜಯಗಳಿಸಿರುವುದರಿಂದ ಜಯ ಸುವರ್ಣರ ಅಭಿಮಾನಿಗಳು, ಹಿತೈಷಿಗಳು ಸಂಭ್ರಮಪಟ್ಟರು. ಅಸೋಸಿಯೇಶನ್‌ನ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ ಎಲ್ಲಾ ಮತದಾರರನ್ನು, ಚುನಾವಣಾಧಿಕಾರಿ, ಸಿಬಂದಿಗಳನ್ನು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ಹರೀಶ್‌ ಜಿ. ಅಮೀನ್‌, ದಯಾನಂದ್‌ ಆರ್‌. ಪೂಜಾರಿ, ಶ್ರೀನಿವಾಸ ಆರ್‌. ಕರ್ಕೇರ, ಗೌ| ಪ್ರ| ಕಾರ್ಯದರ್ಶಿ ಧನಂಜಯ ಎಸ್‌. ಕೋಟ್ಯಾನ್‌, ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್‌ ಎನ್‌. ಕೋಟ್ಯಾನ್‌, ಇತರ ಪದಾಧಿಕಾರಿಗಳು, ಸದಸ್ಯರು, ಬ್ಯಾಂಕ್‌ನ ಮಾಜಿ ನಿರ್ದೇಶಕರಾದ ನ್ಯಾಯವಾದಿ  ರೋಹಿಣಿ ಜೆ. ಸಾಲ್ಯಾನ್‌, ಎನ್‌. ಎಂ. ಸನಿಲ್‌, ಜಗನ್ನಾಥ್‌ ವಿ. ಕೋಟ್ಯಾನ್‌, ನ್ಯಾಯವಾದಿ  ರಾಜಾ ವಿ. ಸಾಲ್ಯಾನ್‌, ಅನ½ಲ್ಗನ್‌ ಸಿ. ಹರಿಜನ್‌, ಹೊಟೇಲ್‌ ಉದ್ಯಮಿಗಳಾದ ರವಿ ಎಸ್‌. ಶೆಟ್ಟಿ ಸಾಯಿ ಪ್ಯಾಲೇಸ್‌, ಶಾರದಾ ಎಸ್‌. ಕರ್ಕೇರ, ಹರೀಶ್‌ ಪೂಜಾರಿ, ರಾಮ ಜಿ. ಸುವರ್ಣ ಗೋರೆಗಾಂವ್‌, ಲಕ್ಷ¾ಣ್‌ ಸಿ. ಪೂಜಾರಿ (ಎನ್‌ಸಿಪಿ), ಧರ್ಮಪಾಲ್‌ ಜಿ. ಅಂಚನ್‌, ನಾರಾಯಣ ಪೂಜಾರಿ ಕಲ್ವಾ, ಶೋಭಾ ಹರೀಶ್‌ ಪೂಜಾರಿ ವಡಲಾ, ರತ್ನಾಕರ್‌ ಶೆಟ್ಟಿ ಮುಂಡ್ಕೂರು, ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಸೇರಿದಂತೆ ಬ್ಯಾಂಕ್‌ನ ಉನ್ನತಾಧಿ ಹಾಜರಿದ್ದು ಅಭಿನಂದಿಸಿದರು.

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next