ಗೋದಾವರಿ,ಸಿಂದು,ನರ್ಮದಾ,ಬ್ರಹ್ಮಪುತ್ರ,ಗಂಗಾ,ಕಾವೇರಿ, ಗಂಗೋತ್ರಿ ಭಾರತದ ಪುಣ್ಯನದಿಗಳ ಹೆಸರಿನಲ್ಲಿ ನಿರ್ಮಿಸಿದ ನೂತನ ಅಕಾಡಮಿಕ್ ಕ್ಯಾಂಪಸ್ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಎಲ್ಲರ ಗಮನ ಸೆಳೆದರು.
Advertisement
ವಿವಿಐಪಿಯಾಗಿದ್ದರೂ ಸೂಟು ಬೂಟು ಧರಿಸದೆ ಸರಳವಾಗಿ ಬಿಳಿ ಮುಂಡು ಬಿಳಿ ಶರ್ಟ್ ಧರಿಸಿ ಶ್ವೇತಾಂಬರರಾಗಿ ನಿರ್ದಿಷ್ಟಸಮಯಕ್ಕಿಂತ ಅರ್ಧ ಗಂಟೆಗೆ ಮುನ್ನವೇ ಮಂಗಳೂರಿನಿಂದ ಭಾರತೀಯ ವಾಯು ಸೇನೆಯ ಎರಡು ಬೆಂಗಾವಲು ಹೆಲಿ
ಪಾಪ್ಟರ್ ಮೂಲಕ ತೇಜಸ್ವಿನಿ ಹಿಲ್ಸ್‌ನಲ್ಲಿ ಪ್ರತ್ಯೇಕವಾಗಿ ನಿರ್ಮಿಸಿದ ಹೆಲಿಪ್ಪಾಡ್ ಮೂಲಕ ಆಗಮಿಸಿದ ಉಪರಾಷ್ಟ್ರಪತಿಯವರನ್ನು ಕೇರಳದ ಬಂದರು ಸಚಿವ ಕಡನಪಳ್ಳಿ ರಾಮಚಂದ್ರನ್,ಲೋಕಸಭಾ ಸದಸ್ಯಪಿ.ಕರುಣಾಕರನ್,ವಿವಿ ಉಪಕುಲಪತಿ ಡಾ| ಜಿ.ಗೋಪಕುಮಾರ್ ಹೂಗುತ್ಛ ನೀಡಿ ಸ್ವಾಗತಿಸಿದರು.
Related Articles
Advertisement
ಕಾರ್ಯಕ್ರಮಕ್ಕೆ ಆಗಮಿಸಿದವರಲ್ಲಿ ಪ್ರವೇಶ ಪಾಸ್ ಇದ್ದರೂ ಪ್ರತೇÂಕ ಗುರುತುಚೀಟಿ ವಿಚಾರಿಸಿ ಪೊಲೀಸರು ಗೊಂದಲಸೃಷ್ಟಿಸಿದರು. ಉಪರಾಷ್ಟ್ರಪತಿ ಸಭಾ ಮಂಟಪದೊಳಗೆ ಪ್ರವೇಶಿಸಿದ ಬಳಿಕ ಸಾರ್ವಜನಿಕರಿಗೆ ಪ್ರವೇಶ ನಿರ್ಭಂಧಿಸಲಾಯಿತು. ಸಮಾರಂಭದ ಮಂಟಪದೊಳಗೆ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಪೇದೆಗೆ ತಲೆಸುತ್ತು ಉಂಟಾಗಿ ಕುಸಿದು ಸಭೆಯಲ್ಲಿ ಅಲ್ಪ ಆತಂಕ ಸೃಷ್ಟಿಯಾಯಿತು.ಬಳಿಕ ಇವರನ್ನು ಸಹದ್ಯೋಗಿಗಳು ಆರೈಕೆ ಮಾಡಿ ಹೊರಗೆ ಕರೆದೊಯ್ದರು.ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ಸಿಹಿ ಮತ್ತು ಖಾರ ತಿಂಡಿಯನ್ನೊಳಗೊಂಡ ಪೊಟ್ಟಣವನ್ನು ವಿತರಿಸಲಾಯಿತು.ಕಣ್ಣೂರು ವಲಯ ಐಜಿ,ಕಾಸರಗೋಡು ಜಿಲ್ಲಾಎಸ್.ಪಿ,ಜಿಲ್ಲಾಧಿಕಾರಿ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಭದ್ರತೆಯ ಮತ್ತು ಸುವ್ಯವಸ್ಥೆಯ ನಿಗಾ ವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಹವಾಮಾನದ ಪ್ರತಿಕೂಲ ವಾತಾವರಣ ಸೃಷ್ಟಿಯಾದಲ್ಲಿ ಮಂಗಳೂರಿನಿಂದ ಹೆದ್ದಾರಿ ಮೂಲಕ ಉಪ ರಾಷ್ಟ್ರಪತಿಯವರಿಗೆ ಕಾರಿನಲ್ಲಿ ಸಂಚರಿಸಲು ಸಿದ್ಧತೆ ನಡೆಸಲಾಗಿತ್ತು.ಕರ್ನಾಟಕ ಗಡಿ ಪ್ರದೇಶ ತಲಪ್ಪಾಡಿಯಿಂದ ಪೆರಿಯದ ತನಕ ರಸ್ತೆಯ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಹೆಚ್ಚಿನೆಲ್ಲಾ ಕಾರ್ಯಕ್ರಮಗಳು ವಿಳಂಬವಾಗಿ ಆರಂಭವಾಗಿ ತಡವಾಗಿ ಕೊನೆಗೊಂಡರೆ ಈ ಕಾರ್ಯಕ್ರಮವು ನಿಗ ದಿ ಯಂತೆ ಆರಂಭಗೊಂಡು ಮೆಚ್ಚುಗೆಗೆ ಪಾತ್ರವಾಯಿತು.ಕಾರ್ಯಕ್ರಮ ಮುಗಿದು ಮರಳುವಾಗ ನಾಯ್ಡು ಸಾಮಾನ್ಯರಂತೆ ವಿದ್ಯಾರ್ಥಿಗಳಲ್ಲಿ ಮತ್ತು ರಕ್ಷಕರಲ್ಲಿ ಹಸ್ತಲಾಘವದೊಂದಿಗೆ ಯೋಗಕೇÒಮ ವಿಚಾರಿಸಿ ಸರಳತೆಗೆ ಸಾಕ್ಷಿಯಾದರು.