Advertisement

ವಯಾಕಾಮ್ 18 ಪಾಲಾದ ಮಹಿಳಾ ಐಪಿಎಲ್ ಮಾಧ್ಯಮ ಹಕ್ಕು: ಪ್ರತಿ ಪಂದ್ಯಕ್ಕೆ 7.09 ಕೋಟಿ ಬೆಲೆ

02:36 PM Jan 16, 2023 | Team Udayavani |

ಮುಂಬೈ: ಮಹಿಳಾ ಐಪಿಎಲ್ ಮಾಧ್ಯಮ ಹಕ್ಕುಗಳನ್ನು ಐದು ವರ್ಷಗಳ ಅವಧಿಗೆ ವಯಾಕಾಮ್ 18 ಗೆದ್ದುಕೊಂಡಿದೆ. ಮುಂಬೈನಲ್ಲಿ ಹರಾಜು ಪ್ರಕ್ರಿಯೆ ನಡೆದಿದೆ. ಕಂಪನಿಯು   2023 ರಿಂದ 2027ರವರೆಗಿನ ಐದು ವರ್ಷಗಳ ಅವಧಿಗೆ 951 ಕೋಟಿ ರೂ. (USD 116.7 ಮಿಲಿಯನ್ ಅಂದಾಜು) ಪಾವತಿಸುತ್ತದೆ.

Advertisement

ಟೆಂಡರ್ ಅನ್ನು ಖರೀದಿಸಿದ ಎಂಟು ಪಾರ್ಟಿಗಳಲ್ಲಿ ಎರಡು ಮಾತ್ರ ಹರಾಜಿಗೆ ಬಂದಿವೆ ಎಂದು ತಿಳಿದು ಬಂದಿದೆ. ವಯಾಕಾಮ್ 18 ಮತ್ತು ಡಿಸ್ನಿ ಸ್ಟಾರ್ ಹರಾಜಿನಲ್ಲಿ ಪಾಲ್ಗೊಂಡಿದೆ.  ಟಿವಿ, ಡಿಜಿಟಲ್ ಮತ್ತು ಸಂಯೋಜಿತ (ಟಿವಿ ಮತ್ತು ಡಿಜಿಟಲ್) ಮೂರು ವಿಭಾಗಗಳಲ್ಲಿ ಬಿಡ್ ಒಳಗೊಂಡಿದೆ.

ಹರಾಜು ಮೊತ್ತವು ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ ಆಗಿರಲಿದೆ. ಪುರುಷರ ಐಪಿಎಲ್ ಬಳಿಕ ಅತ್ಯಂತ ದುಬಾರಿ ಟಿ20 ಲೀಗ್ ಇದಾಗಿರಲಿದೆ.

“ಇದು ಭಾರತದಲ್ಲಿ ಮಹಿಳಾ ಕ್ರಿಕೆಟ್‌ನ ಸಬಲೀಕರಣಕ್ಕಾಗಿ ಒಂದು ದೊಡ್ಡ ಮತ್ತು ನಿರ್ಣಾಯಕ ಹೆಜ್ಜೆಯಾಗಿದೆ, ಇದು ಎಲ್ಲಾ ವಯಸ್ಸಿನ ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತದೆ. ಇದು ಹೊಸ ಉದಯ!” ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದರು.

ಇದನ್ನೂ ಓದಿ:ಜೋಶಿಮಠ ಭೂಗರ್ಭ ಕುಸಿತ…ಕಲಿಯುಗದ ಅಂತ್ಯದ ಮುನ್ಸೂಚನೆ?ಬದ್ರಿ ಪುರಾಣ ಭವಿಷ್ಯ ನಿಜವಾಗಲಿದೆಯಾ…

Advertisement

ಪ್ರತಿ ಪಂದ್ಯದ ಮೌಲ್ಯವನ್ನು ಮೊದಲ ಮೂರು ವರ್ಷಗಳಲ್ಲಿ ತಲಾ 22 ಪಂದ್ಯಗಳಿಗೆ ಲೆಕ್ಕಹಾಕಲಾಗಿದೆ, ನಂತರ 2026 ರ ಬಳಿಕ 34 ಪಂದ್ಯಗಳಿಗೆ ಹೆಚ್ಚಳವಾಗಬಹುದು.

ಮಹಿಳಾ ಐಪಿಎಲ್ ಕೂಟದಲ್ಲಿ ಐದು ತಂಡಗಳು ಇರಲಿದೆ. ಮಹಿಳಾ ಐಪಿಎಲ್ ನ ಯಶಸ್ಸನ್ನು ಆಧರಿಸಿ ಬಿಸಿಸಿಐ ಆರನೇ ಫ್ರಾಂಚೈಸ್ ಅನ್ನು ಸೇರಿಸಲು ನೋಡಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next