Advertisement

ಮೇ 23ರ ಬಳಿಕ ಕಾರ್ಯಸಾಧ್ಯ ಪರ್ಯಾಯ ಸರಕಾರ ರಚನೆ: ಶರದ್‌ ಪವಾರ್‌ ವಿಶ್ವಾಸ

09:19 AM May 06, 2019 | Sathish malya |

ಮುಂಬಯಿ : ಮೇ 23ರಂದು ಲೋಕಸಭಾ ಚುನಾವಣೆಗಳು ಪ್ರಕಟವಾದ ಬಳಿಕ ಕೇಂದ್ರದಲ್ಲಿ ಕಾರ್ಯಸಾಧ್ಯ ಪರ್ಯಾಯ ಸರಕಾರವನ್ನು ರಚಿಸಲಾಗುವುದು ಎಂಬ ವಿಶ್ವಾಸವನ್ನು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಇಂದು ಶನಿವಾರ ವ್ಯಕ್ತಪಡಿಸಿದ್ದಾರೆ.

Advertisement

ಚುನಾವಣಾ ಫ‌ಲಿತಾಂಶಗಳು ಪ್ರಕಟಗೊಂಡ ಮರು ದಿನವೇ ಈ ಕಾರ್ಯಸಾಧ್ಯ ಪರ್ಯಾಯ ಸರಕಾರ ಅಸ್ತಿತ್ವಕ್ಕೆ ಬರುವುದೇ, ಅಥವಾ ಹದಿನೈದು ದಿನಗಳ ಬಳಿಕ ಅಸ್ತಿತ್ವಕ್ಕೆ ಬರುವುದೇ ಎಂಬುದನ್ನು ನಾನು ಹೇಳಲಾರೆ. ಮುಂದಿನ ಸರಕಾರವನ್ನು ರಚಿಸಲು ರಾಜಕೀಯ ಪಕ್ಷಗಳನ್ನು ಆಹ್ವಾನಿಸುವ ಪೂರ್ವಸಿದ್ಧ ಹಕ್ಕು ರಾಷ್ಟ್ರಪತಿಯವರಲ್ಲಿರುತ್ತದೆ. ಅವರು ಯಾರನ್ನೇ ಕರೆದರೂ ಸಂಸತ್ತಿನಲ್ಲಿ ಅವರು ಬಹುಮತವನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ಪವಾರ್‌ ಸುದ್ದಿ ಗೋಷ್ಠಿಯಲ್ಲಿ ಹೇಳಿದರು.

2004ರ ಲೋಕಸಭಾ ಚುನಾವಣೆಗಳ ಫ‌ಲಿತಾಂಶ ಪ್ರಕಟಗೊಂಡ ಬಳಿಕ ಯುಪಿಎ ರಚಿಸಲಾಗಿ ಅದು ಹತ್ತು ವರ್ಷ ಕಾಲ ಅಧಿಕಾರದಲ್ಲಿತ್ತೆಂಬುದನ್ನು ಪವಾರ್‌ ನೆನಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next