Advertisement

ಗುಂಡಿನ ದಾಳಿ ನಡೆಸಿದ ಹೈಸ್ಕೂಲ್ ವಿದ್ಯಾರ್ಥಿ; ಮೂವರು ವಿದ್ಯಾರ್ಥಿಗಳು ಸಾವು, 8 ಮಂದಿಗೆ ಗಾಯ

11:21 AM Dec 01, 2021 | Team Udayavani |

ವಾಷಿಂಗ್ಟನ್: ಹೈಸ್ಕೂಲ್ ವಿದ್ಯಾರ್ಥಿ (15ವರ್ಷ)ಯೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿರುವ ಘಟನೆ ಅಮೆರಿಕದ ಮಿಚಿಗನ್ ಹೈಸ್ಕೂಲ್ ನಲ್ಲಿ ಮಂಗಳವಾರ(ನವೆಂಬರ್ 30) ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ದಾಳಿಯಲ್ಲಿ ಟೀಚರ್ ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ. ಆಕ್ಸ್ ಫರ್ಡ್ ಹೈಸ್ಕೂಲ್ ನಲ್ಲಿ ಮಧ್ಯಾಹ್ನದ ತರಗತಿ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಓಕ್ಲಾಂಡ್ ಕೌಂಟಿ ಷರೀಪ್ಸ್ ಕಚೇರಿ ವಿವರ ನೀಡಿದೆ.

16 ವರ್ಷದ ವಿದ್ಯಾರ್ಥಿ, 14 ವರ್ಷದ ವಿದ್ಯಾರ್ಥಿನಿ ಹಾಗೂ 17 ವರ್ಷದ ವಿದ್ಯಾರ್ಥಿ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿರುವುದಾಗಿ ವರದಿ ಹೇಳಿದೆ. ಗಾಯಗೊಂಡವರಲ್ಲಿ ಆರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಇಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.

ಶೂಟೌಟ್ ನಡೆಸಿದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಆತನ ಬಳಿ ಇದ್ದ ಸೆಮಿ ಆಟೋಮಿಕ್ ಹ್ಯಾಂಡ್ ಗನ್ ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಯಾವ ಉದ್ದೇಶದಿಂದ ಆತ ದಾಳಿ ನಡೆಸಿದ್ದಾನೆ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next