Advertisement

ಪ್ರಧಾನಿಗೆ ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಶಯ ಕೋರಿದ ರಾಗಾ!

09:12 AM Mar 29, 2019 | Hari Prasad |

ನವದೆಹಲಿ: ‘ಅಪರೇಷನ್‌ ಶಕ್ತಿ’ಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್‌.ಡಿ.ಒ.) ಇದೀಗ ದೇಶವಾಸಿಗಳಿಂದ ಶ್ಲಾಘನೆಗೆ ಪಾತ್ರವಾಗುತ್ತಿದೆ. ಪ್ರಧಾನಿ ಮೋದಿ ಅವರು ಇಂದು ದೇಶವನ್ನುದ್ದೇಶಿಸಿ ಮಾಡಿದ ಕಿರು ಭಾಷಣದಲ್ಲಿ ಡಿ.ಆರ್‌.ಡಿ.ಒ. ಅಭಿವೃದ್ಧಿಪಡಿಸಿದ ಕ್ಷಿಪಣಿ ತಂತ್ರಜ್ಞಾನದಿಂದ ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ಹೊಡೆದುರುಳಿಸುವ ಸಾಮರ್ಥ್ಯವಿರುವ ನಾಲ್ಕು ದೇಶಗಳಲ್ಲಿ ಇದೀಗ ಭಾರತವೂ ಒಂದಾಗಿದೆ. ಈ ಸಾಧನೆಗಾಗಿ ಕಾಂಗ್ರೆಸ್‌ ಪಕ್ಷಾಧ್ಯಕ್ಷ ರಾಹುಲ್‌ ಗಾಂಧಿ ಅವರು ಡಿ.ಆರ್‌.ಡಿ.ಒ. ವಿಜ್ಞಾನಿಗಳನ್ನು ಟ್ವೀಟ್‌ ಮೂಲಕ ವಿಶೇಷವಾಗಿ ಅಭಿನಂದಿಸಿದ್ದಾರೆ.
Well done DRDO, extremely proud of your work.

Advertisement


ಆದರೆ ಇದೇ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರು ಇವತ್ತು ವಿಶ್ವ ರಂಗಭೂಮಿ ದಿನವಾಗಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೇ ಟ್ವೀಟ್‌ ಮೂಲಕ ಶುಭ ಹಾರೈಸಿದ್ದಾರೆ. ಪ್ರಧಾನಿ ಮೋದಿಯವರನ್ನು ಮಹಾನ್‌ ನಾಟಕಕಾರ ಎಂದೇ ರಾಹುಲ್‌ ಗಾಂಧಿ ಅವರು ಅವಕಾಶ ಸಿಕ್ಕಾಗಲೆಲ್ಲಾ ಟೀಕಿಸುತ್ತಾರೆ. ಸುಳ್ಳು ಭರವಸೆಗಳ ಮೂಲಕ ದೇಶದ ಜನರ ಮುಂದೆ ಪ್ರಧಾನಿ ಮೋದಿ ನಾಟಕ ಮಾಡುತ್ತಾರೆ ಎಂಬ ಟೀಕೆ ಕೈ ಪಕ್ಷದ ಅಧ್ಯಕ್ಷರಿಂದ ಪ್ರತೀ ಬಾರಿ ಬರುತ್ತಿರುತ್ತದೆ. ಹಾಗಾಗಿ ಪ್ರಧಾನಿಯನ್ನು ನಾಟಕಕಾರ ಎಂದು ತಾನು ಕರೆಯುವ ಕಾರಣ ಅವರಿಗೆ ರಾಗಾ ವಿಶ್ವ ರಂಗಭೂಮಿ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next