Advertisement
“ಅದಾನಿ ಮೆಗಾ ಹಗರಣ’ವನ್ನು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒಳಪಡಿಸಬೇಕು ಎಂಬ ನಮ್ಮ ಒತ್ತಾಯಕ್ಕೆ ಈಗ ಬಲ ಬಂದಿದ್ದು, ಈಗ ನಡೆಯುತ್ತಿರುವ ತನಿಖೆಯನ್ನು ಪೂರ್ಣಗೊಳಿಸಲು ಸೆಬಿಗೆ ಹೊಸ ಮತ್ತು ವಿಶ್ವಾಸಾರ್ಹ ಮುಖ್ಯಸ್ಥರನ್ನು ನೇಮಕ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
Related Articles
ಲಂಚ ಹಾಗೂ ಷೇರು ವಂಚನೆ ವೇಳೆ ಆರೋಪಿಗಳು ಪರಸ್ಪರ ಕೋಡ್‌ನೇಮ್(ರಹಸ್ಯ ಹೆಸರು)ಗಳ ಮೂಲಕ ಮಾತನಾಡುತ್ತಿದ್ದರು. ಸಂಭಾಷಣೆಗೆ “ವಿ, ಸ್ನೇಕ್, ನ್ಯೂಮೆರೋ ಯುನೋ ಮೈನಸ್ ಒನ್’ ಮತ್ತಿತರ ರಹಸ್ಯ ಹೆಸರನ್ನು ಬಳಸುತ್ತಿದ್ದರು. ಅದಾನಿ ಅವರನ್ನು “ಮಿಸ್ಟರ್ ಎ’, “ನ್ಯುಮೆರೋ ಯುನೋ’ ಮತ್ತು “ದಿ ಬಿಗ್ ಮ್ಯಾನ್’ ಎಂದು ಕರೆಯಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
Advertisement
ಲಂಚ ಪಡೆದಿದ್ದು ವಿಪಕ್ಷ ಸರಕಾರಗಳು: ಬಿಜೆಪಿಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, “ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿರುವುದೆಲ್ಲ ವಿಪಕ್ಷಗಳ ಆಡಳಿತವಿದ್ದ ರಾಜ್ಯಗಳು’ ಎಂದು ತಿರುಗೇಟು ನೀಡಿದೆ. “ಇವೆಲ್ಲವೂ ಆರೋಪಗಳಷ್ಟೆ. ಅವು ಸಾಬೀತಾಗುವವರೆಗೂ ಆರೋಪಿ ಅಪರಾಧಿಯಾಗಲು ಸಾಧ್ಯವಿಲ್ಲ. ಅಲ್ಲದೆ, ಈ ಪ್ರಕರಣದಲ್ಲಿ ಲಂಚ ಪಾವತಿಯಾಗಿರುವುದು ವಿಪಕ್ಷಗಳ ಸರಕಾರವಿದ್ದ ಒಡಿಶಾ, ತಮಿಳುನಾಡು, ಛತ್ತೀಸ್‌ಗಢ, ಆಂಧ್ರ ಪ್ರದೇಶಗಳ ವಿದ್ಯುತ್ ವಿತರಣ ಕಂಪೆನಿಗಳಿಗೆ (2021ರ ಜುಲೈನಿಂದ 2022ರ ಫೆಬ್ರವರಿವರೆಗೆ). ಇದರ ಬಗ್ಗೆ ಕಾಂಗ್ರೆಸ್ ಏಕೆ ಮಾತನಾಡುತ್ತಿಲ್ಲ ಎಂದು ಬಿಜೆಪಿ ಐಟಿ ಘಟಕ ಮುಖ್ಯಸ್ಥ ಅಮಿತ್ ಮಾಳವೀಯ ಪ್ರಶ್ನಿಸಿದ್ದಾರೆ. ಕಾಂಗ್ರೆಸ್, ರಾಹುಲ್ 2002ರಿಂದಲೂ ಮೋದಿಯವರ ವರ್ಚಸ್ಸಿಗೆ ಕಳಂಕ ತರಲು ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಅವರ ವಿಶ್ವಾಸಾರ್ಹತೆಗೆ ಯಾವುದೇ ಧಕ್ಕೆ ಆಗಿಲ್ಲ ಎಂದು ಬಿಜೆಪಿ ವಕ್ತಾರ ಸಂಬಿತ್ ಹೇಳಿದ್ದಾರೆ. ಅದಾನಿ ಗ್ರೂಪ್‌ಗೆ ಶಾಕ್: 2.19 ಲಕ್ಷ ಕೋಟಿ ರೂ. ನಷ್ಟ!
ಅಮೆರಿಕದ ಕೋರ್ಟ್‌ನಿಂದ ದೋಷಾರೋಪ ನಿಗದಿಯಾಗುತ್ತಲೇ ಇತ್ತ ಅದಾನಿ ಕಂಪೆನಿಯ ಷೇರುಗಳು ಭಾರೀ ನಷ್ಟ ಅನುಭವಿಸಿವೆ. ಮುಂಬಯಿ ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಅದಾನಿ ಗ್ರೂಪ್‌ನ 10 ಕಂಪೆನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ ಗುರುವಾರ ಏಕಾಏಕಿ 2.19 ಲಕ್ಷ ಕೋಟಿ ರೂ. ಕುಸಿತ ಕಂಡಿದೆ. 2023ರ ಜನವರಿಯಲ್ಲಿ ಹಿಂಡನ್‌ಬರ್ಗ್ ರಿಸರ್ಚ್ ವರದಿ ಹೊರಬಂದಾಗ ಅದಾನಿ ಗ್ರೂಪ್ ಎಷ್ಟು ನಷ್ಟ ಅನುಭವಿಸಿತ್ತೋ, ಅದರ ದುಪ್ಪಟ್ಟು ನಷ್ಟ ಗುರುವಾರ ಅನುಭವಿಸಿದೆ. ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಶೇ.22.61, ಅದಾನಿ ಎನರ್ಜಿ ಶೇ.20, ಅದಾನಿ ಗ್ರೀನ್ ಎನರ್ಜಿ ಶೇ.18.80, ಅದಾನಿ ಪೋರ್ಟ್ಸ್ ಶೇ.13.50ರಷ್ಟು ಪತನಗೊಂಡಿವೆ. ಅದಾನಿ ಕಂಪೆನಿಗೂ ತಮಿಳುನಾಡಿಗೂ ಸಂಬಂಧವಿಲ್ಲ: ಸಚಿವ
ಆರೋಪ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ವಿದ್ಯುತ್ ಸಚಿವ ವಿ.ಸೆಂಥಿಲ್ ಬಾಲಾಜಿ, ನಮ್ಮ ಸರಕಾರದ ವಿದ್ಯುತ್ ನಿಗಮಕ್ಕೂ ಅದಾನಿಯ ಕಂಪನಿಗೂ ಯಾವುದೇ ವಾಣಿಜ್ಯಿಕ ಸಂಬಂಧವಿಲ್ಲ. ರಾಜ್ಯವು ಕೇವಲ ಕೇಂದ್ರ ಸರಕಾರದ ಸಂಸ್ಥೆಯಿಂದ ಮಾತ್ರವೇ ವಿದ್ಯುತ್ ಖರೀದಿಸುತ್ತದೆ ಎಂದಿದ್ದಾರೆ. ”ಈ ಪ್ರಕರಣವು ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಕಳಂಕ ತಂದಿದೆ. ವಿದೇಶಗಳಲ್ಲಿ ಕಂಪೆನಿ ಮಾಡಿರುವ ಹೂಡಿಕೆ ಸೇರಿದಂತೆ ಅದಾನಿ ಗ್ರೂಪ್‌ನ ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲ ಅಂಶಗಳ ಬಗ್ಗೆಯೂ ಜಂಟಿ ಸಂಸದೀಯ ಸಮಿತಿಯಿಂದ ಸಮಗ್ರ ತನಿಖೆ ಆಗಬೇಕು. ಈ ತನಿಖೆ ಅದಾನಿಯಿಂದಲೇ ಆರಂಭವಾಗಬೇಕು.”
-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ ಅದಾನಿ ಗ್ರೂಪ್‌ಗೆ ಕೀನ್ಯಾ ಸರಕಾರ ನೀಡಿದ್ದ 2 ಯೋಜನೆಗಳು ರದ್ದು!
ನೈರೋಬಿ: ಅದಾನಿ ಕಂಪೆನಿಗೆ ಮತ್ತೂಂದು ಆಘಾತವೆಂಬಂತೆ, ಕಂಪೆನಿ ವಿರುದ್ಧ ಲಂಚ, ವಂಚನೆ ಆರೋಪ ಕೇಳಿಬಂದ ಬೆನ್ನಲ್ಲೇ ಕೀನ್ಯಾ ಸರಕಾರ ಅದಾನಿ ಗ್ರೂಪ್‌ಗೆ ನೀಡಿದ್ದ 2 ಪ್ರಮುಖ ಯೋಜನೆಗಳನ್ನು ರದ್ದು ಮಾಡಿದೆ. ಕೀನ್ಯಾದ ಪ್ರಧಾನ ಏರ್‌ಪೋರ್ಟ್ ವಿಸ್ತರಣೆಗೆ ಸಂಬಂಧಿಸಿದ ಪ್ರಾಜೆಕ್ಟ್ ಹಾಗೂ ವಿದ್ಯುತ್ ಪ್ರಸರಣ ಲೈನ್‌ಗಳ ನಿರ್ಮಾಣಕ್ಕೆ ಸಂಬಂಧಿಸಿದ 700 ದಶಲಕ್ಷ ಡಾಲರ್ ಮೊತ್ತದ ಯೋಜನೆಗಳನ್ನು ಈ ಹಿಂದೆ ಅದಾನಿ ಗ್ರೂಪ್‌ಗೆ ವಹಿಸಲಾಗಿತ್ತು. ಈ ಕುರಿತು ಅದಾನಿ ಕಂಪೆನಿಯೊಂದಿಗೆ ಕೀನ್ಯಾದ ಇಂಧನ ಸಚಿವಾಲಯ ಒಪ್ಪಂದವನ್ನೂ ಮಾಡಿಕೊಂಡಿತ್ತು. ಆದರೆ ಈಗ ಕಂಪನಿ ವಿರುದ್ಧ ಆರೋಪ ಕೇಳಿಬಂದಿರುವ ಕಾರಣ ಈ ಯೋಜನೆಗಳನ್ನು ರದ್ದು ಮಾಡಿರುವುದಾಗಿ ಕೀನ್ಯಾ ಅಧ್ಯಕ್ಷ ರೂಟೋ ಘೋಷಿಸಿದ್ದಾರೆ.