Advertisement

ವೇಣುಗೋಪಾಲಕೃಷ್ಣಸ್ವಾಮಿ ರಥೋತ್ಸವ

03:43 PM Jan 17, 2021 | Team Udayavani |

ಶೃಂಗೇರಿ: ಅಡ್ಡಗದ್ದೆ ಗ್ರಾಪಂನ ಆನೆಗುಂದ ಶ್ರೀ ವೇಣುಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ರಥೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ರಥೋತ್ಸವದ ಅಂಗವಾಗಿ ದೇಗುಲವನ್ನು ತಳಿರು-ತೋರಣದಿಂದ ಅಲಂಕರಿಸಲಾಗಿತ್ತು. ಧಾರ್ಮಿಕ ವಿಧಿ-ವಿಧಾನಗಳು ಬೆಳಗ್ಗೆಯಿಂದ ಆರಂಭಗೊಂಡಿದ್ದು, ಕಲಾಹೋಮ, ದುರ್ಗಾಹೋಮ, ರುದ್ರಹೋಮ, ವೇದ ಪಾರಾಯಣ ಅರ್ಚಕ ವಸಂತಭಟ್ಟರ ನೇತೃತ್ವದಲ್ಲಿ ನಡೆಯಿತು.

Advertisement

ಇದನ್ನೂ ಓದಿ:ಚಿತ್ರದುರ್ಗ: ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ

ರಥವನ್ನು ದೇಗುಲದ ಹೊರ ಪ್ರಾಂಗಣದಲ್ಲಿ ಮೂರು ಸುತ್ತು ಎಳೆಯಲಾಯಿತು. ರಾತ್ರಿ ಸ್ವಾಮಿಯ ಸನ್ನಿ ಧಿಯಲ್ಲಿ ದೀಪೋತ್ಸವ ನಡೆಯಿತು. ತಹಶೀಲ್ದಾರ್‌ ಅಂಬುಜಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next