ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತ್ಯವಾದ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಆಡಲಿದೆ. ಐದು ಪಂದ್ಯಗಳ ಸರಣಿಗೆ ಶನಿವಾರ ಬಿಸಿಸಿಐ ದಿನಾಂಕ ಮತ್ತು ಸ್ಥಳ ನಿಗದಿ ಮಾಡಿದೆ.
ಜೂನ್ 9ರಿಂದ 19ರವರೆಗೆ ಐದು ಪಂದ್ಯಗಳ ಟಿ20 ಸರಣಿಯಾಡಲು ದಕ್ಷಿಣ ಆಫ್ರಿಕಾ ತಂಡವು ಭಾರತ ಪ್ರವಾಸ ಕೈಗೊಳ್ಳಲಿದೆ.
ಜೂ.9ರಂದು ದೆಹಲಿ, ಜೂ.12ರಂದು ಕಟಕ್, ಜೂ,14ರಂದು ವಿಶಾಖಪಟ್ಟಣ, ಜೂ.17ರಂದು ರಾಜಕೋಟ್ ಮತ್ತು ಜೂ.19ರಂದು ಬೆಂಗಳೂರಿನಲ್ಲಿ ಟಿ20 ಪಂದ್ಯಗಳು ನಡೆಯಲಿದೆ.
ಇದನ್ನೂ ಓದಿ:ಐಪಿಎಲ್ ಫೈನಲ್-2020: ಮೊದಲ ಸಲ ಕಪ್ ಉಳಿಸಿಕೊಂಡ ಮುಂಬೈಇಂಡಿಯನ್ಸ್
Related Articles
ಈ ಸರಣಿಯ ಬಳಿಕ ಟೀಂ ಇಂಡಿಯಾ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಐರ್ಲೆಂಡ್ ನ ಡಬ್ಲಿನ್ ನಲ್ಲಿ ಎರಡು ಟಿ20 ಪಂದ್ಯಗಳನ್ನು ಆಡಲಿದ್ದು, ನಂತರ ಇಂಗ್ಲೆಂಡ್ ನಲ್ಲಿ ಒಂದು ಟೆಸ್ಟ್ ಪಂದ್ಯವಾಡಲಿದೆ. ನಂತರ ಇಂಗ್ಲೆಂಡ್ ನಲ್ಲಿ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಟೀಂ ಇಂಡಿಯಾ ಆಡಲಿದೆ.