ಪಿಯು ಕಾಲೇಜು ಆವರಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಆತ್ಮ ಸೌಂದರ್ಯಕ್ಕೆ ಒತ್ತು ನೀಡಿ, ಮಾನವೀಯ ಮೌಲ್ಯ ಬಿತ್ತುವ ಮೂಲಕ ಸಮಾಜದಲ್ಲಿನ ತಪ್ಪುಗಳನ್ನು ಹೋಗಲಾಡಿಸುವ ಕೆಲಸ ಮಾಡುವ ಹೊಣೆಗಾರಿಕೆ ಯುವ ಸಮುದಾಯ, ವಿದ್ಯಾರ್ಥಿ ಮತ್ತು ಶಿಕ್ಷಕರ ಮೇಲಿದೆ ಎಂದರು. ವಿದ್ಯಾರ್ಥಿಗಳನ್ನು ಉತ್ತಮ ಮಾರ್ಗದಲ್ಲಿ ನಡೆಸಲು ಪೂರಕವಾಗಿ ಎಕೆಆರ್ ದೇವಿ ಪಿಯು
ಕಾಲೇಜಿನ ಸಂಸ್ಥಾಪಕ ಎ.ಎಲ್. ಪ್ರಸಾದ ತಮ್ಮ ತಾಯಿ ಹೆಸರಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ ಮಾತನಾಡಿ, ನಾವು ಮಾಡುವ ಕಾಯಕದಲ್ಲಿ ನಿಷ್ಠೆ, ಪ್ರಾಮಾಣಿಕತೆ, ಶ್ರದ್ಧೆಯಿದ್ದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದರು. ಮುಖ್ಯ ಅತಿಥಿಗಳಾಗಿ ವಿಜಯಕುಮಾರ ತೇಗಲತಿಪ್ಪಿ ಆಗಮಿಸಿ ಮಾತನಾಡಿ, ಇಂದಿನ ಒತ್ತಡದ ಬದುಕಿನಲ್ಲಿ ನೈತಿಕತೆ, ಮಾನವೀಯ ಸಂಬಂಧಗಳು ಮರೆಯಾಗುತ್ತಿವೆ. ಇಂದಿನ ವಿದ್ಯಾರ್ಥಿಗಳಿಗೆ ಜ್ಞಾನದ ಜೊತೆ ನೈತಿಕ ಮೌಲ್ಯಗಳ ಬಗ್ಗೆ ತಿಳುವಳಿಕೆ ನೀಡುವ ಅಗತ್ಯವಿದೆ ಎಂದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರೊ| ಬಿ.ಡಿ. ಕಲಬುರಗಿ, ಹೈದ್ರಾಬಾದನ ಉದ್ಯಮಿ ರಾಜೇಂದ್ರ ಪ್ರಸಾದ, ಕಾಲೇಜಿನ ಪ್ರಧಾನ ವ್ಯವಸ್ಥಾಪಕ ಎಂ.ವಿ.ಎಸ್. ಸುಬ್ರಮಣ್ಯಂ, ವ್ಯವಸ್ಥಾಪಕ ಬಸವರಾಜ ಬುಂಕಲದೊಡ್ಡಿ, ಪಾಲಿಕೆ ಸದಸ್ಯ ಉಮೇಶ ಶೆಟ್ಟಿ ಹಾಗೂ ಇತರರಿದ್ದರು.
Advertisement