ಬೆಂಗಳೂರು: ರಾಜ್ಯಸಭೆ ಈಚೆಗೆ ನಡೆದ ಘಟನೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಉಪ ರಾಷ್ಟಪತಿ ವೆಂಕಯ್ಯ ನಾಯ್ಡು, ಘಟನೆಗೆ ಸಂಬಂಧಿಸಿದಂತೆ ಅಗತ್ಯಬಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ವಿಧಾನಸೌಧದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸಲು ಅವಕಾಶ ಇದೆ. ಆದರೆ, ಅದು ದೈಹಿಕ ಶಕ್ತಿ ಬಳಸಿಕೊಂಡು ಮಾಡುವಂತಹದ್ದಲ್ಲ. ಜನಪ್ರತಿನಿಧಿಗಳು ಇತರರಿಗೆ ಮಾದರಿ ಆಗಿರಬೇಕು. ನಮ್ಮ ನಡವಳಿಕೆಗಳು ಆ ರೀತಿ ಇರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಶಾಸನಸಭೆಗಳಲ್ಲಿ ನಡೆಯುತ್ತಿರುವ ಘಟನೆಗಳು ಬೇಸರ ತರುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ :650ಸಿಸಿ ಬೈಕ್; 2022 ಕವಾಸಾಕಿ ನಿಂಜಾ ಬಿಡುಗಡೆ
ರಾಜ್ಯಸಭೆಯಲ್ಲಿ ನಡೆದ ಘಟನೆ ಬಗ್ಗೆ ಅಗತ್ಯಬಿದ್ದರೆ ನಾನು ಕ್ರಮ ಕೈಗೊಳ್ಳುತ್ತೇನೆ ಎಂದೂ ಹೇಳಿದರು.