Advertisement

ಬಲ್ಗೇರಿಯ ಕುಸ್ತಿ ಬೆಳ್ಳಿಗೆ ತೃಪ್ತಿಪಟ್ಟ ವಿನೇಶ್‌

12:30 AM Mar 05, 2019 | |

ಹೊಸದಿಲ್ಲಿ: ಏಶ್ಯನ್‌ ಗೇಮ್ಸ್‌ ಚಿನ್ನದ ಪದಕ ವಿಜೇತೆ ವಿನೇಶ್‌ ಪೋಗಟ್‌ “ಡ್ಯಾನ್‌ ಕೊಲೋವ್‌-ನಿಕೋಲಾ ಪೆಟ್ರೋವ್‌’ ಕುಸ್ತಿ ಸ್ಪರ್ಧೆಯ ಫೈನಲ್‌ ಪಂದ್ಯದಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ.

Advertisement

ಬಲ್ಗೇರಿಯಾದ ರುಸೆಯಲ್ಲಿ ನಡೆದ ಈ ಕೂಟದ ವನಿತೆಯರ 53 ಕೆಜಿ ವಿಭಾಗದ ಪಂದ್ಯದಲ್ಲಿ ವಿನೇಶ್‌ ಚೀನದ ಖೀನ್ಯು ಪಾಂಗ್‌ ವಿರುದ್ಧ 2-9 ಅಂತರದಿಂದ ಸೋತರು. ಇದು ಅವರ ಮೊದಲ ಯುನೈಟೆಡ್‌ ವಿಶ್ವ ಕುಸ್ತಿ ರ್‍ಯಾಂಕಿಂಗ್‌ ಸಿರೀಸ್‌ ಆಗಿದೆ.

“ನನ್ನ ಶೈಲಿಯಲ್ಲಿ ಇನ್ನಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ. ಪ್ರತಿಸ್ಪರ್ಧಿಗಳು ಬಲಿಷ್ಠವಾಗಿದ್ದಾರೆ. ನನ್ನ ಎದುರಾಳಿಗಳನ್ನು ಅರಿತುಕೊಳ್ಳಲು ಈ ಕೂಟದಲ್ಲಿ ನಾನು ಭಾಗವಹಿಸಿದೆ’ ಎಂದು ವಿನೇಶ್‌ ಹೇಳಿದ್ದಾರೆ.ಭಾರತ ಈ ಕೂಟದಲ್ಲಿ 2 ಚಿನ್ನ, 4 ಬೆಳ್ಳಿ ಪದಕಗಳನ್ನು ಗೆದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next