Advertisement

Wrestling;ವಿನೇಶ್‌ಫೋಗಾಟ್‌ ಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್‌

12:27 AM Apr 21, 2024 | Team Udayavani |

ಬಿಶ್ಕೆಕ್‌ (ಕಿರ್ಗಿಸ್ಥಾನ್‌): ಏಷ್ಯನ್‌ ಒಲಿಂಪಿಕ್ಸ್‌ ಅರ್ಹತಾ ಕುಸ್ತಿ ಕೂಟದಲ್ಲಿ ವಿನೇಶ್‌ ಫೋಗಾಟ್‌ ಒಲಿಂಪಿಕ್ಸ್‌ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯರ 50 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಅವರು ಕಜಕಿಸ್ಥಾನದ ಲಾರಾ ಗ್ಯಾನಿಕಿಜಿ ವಿರುದ್ಧ 10-0 ಜಯ ಗಳಿಸಿದರು. ಇದರೊಂದಿಗೆ ವಿನೇಶ್‌ ಸತತ ಮೂರನೇ ಬಾರಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿನೇಶ್‌ ಪ್ಯಾರಿಸ್‌ ಟಿಕೆಟ್‌ ಪಡೆದ ಭಾರತದ 2ನೇ ಮಹಿಳಾ ಕುಸ್ತಿಪಟು. ಅಂತಿಮ್‌ ಪಂಗಲ್‌ ಮೊದಲಿಗರು.

Advertisement

ಅಂಶು ಮಲಿಕ್ (57 ಕೆಜಿ) ಮತ್ತು 23 ವರ್ಷದೊಳಗಿನವರ ವಿಶ್ವ ಚಾಂಪಿಯನ್ ರಿತಿಕಾ (76 ಕೆಜಿ) ಸಹ ಪ್ರಬಲ ಪ್ರದರ್ಶನದೊಂದಿಗೆ ಫೈನಲ್‌ಗೆ ತಲುಪುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ತಮ್ಮ ಟಿಕೆಟ್‌ಗಳನ್ನು ಖಚಿತಪಡಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next