Advertisement

ಏನ್‌ ಕಾಲ ಬಂತಪ್ಪಾ!ಟೊಮೆಟೋ ಕಾಯಲೂ ಶಸ್ತ್ರ ಸಜ್ಜಿತ ಭದ್ರತಾ ಪಡೆ

12:49 PM Jul 23, 2017 | Team Udayavani |

ಇಂಧೋರ್‌: ಅಡುಗೆಯಲ್ಲಿ ಅಗತ್ಯವೆನಿಸಿದ ಟೊಮೆಟೋ ಬೆಲೆ ಗಗನಕ್ಕೇರಿದ್ದು ಸದ್ಯ ದೇಶಾದ್ಯಂತ 100 ರೂಪಾಯಿ ಮುಟ್ಟಿದೆ. ಇದರ ಪರಿಣಾಮ ಎಂಬಂತೆ ಎಲ್ಲೆಡೆ ಟೊಮೆಟೊಗಳ ಕಳ್ಳತನ ನಡೆಯುತ್ತಿದೆ. ವ್ಯಾಪಾರಿಗಳು ಕಳ್ಳರಿಂದ ತಮ್ಮ ಮಾಲು ಉಳಿಸಿಕೊಳ್ಳಲು ಭದ್ರತಾ ಸಿಬಂದಿಗಳನ್ನು ನೇಮಿಸಿಕೊಳ್ಳಬೇಕಾದ ಸ್ಥಿತಿ ಬಂದೊದಗಿದೆ. 

Advertisement

ಮುಂಬಯಿನಲ್ಲಿ 300 ಕೆ.ಜಿಯಷ್ಟು ಟೊಮೆಟೋ ಕಳ್ಳತನವಾದ ಪ್ರಕರಣ ವರದಿಯಾಗಿತ್ತು,ಆ ಬಳಿಕ  ಹಲವೆಡೆ ಟೊಮೆಟೊಗಳನ್ನು ಕಳವು ಮಾಡಲಾಗಿತ್ತು. ಚಿಕ್ಕಬಳ್ಳಾಪುರದಲ್ಲಿ ಲಾರಿಯಿಂದ 70 ಸಾವಿರ ಮೌಲ್ಯದ ಟೊಮೆಟೋ ಕದಿಯಲಾಗಿತ್ತು. 

ಮಾರುಕಟ್ಟೆಯಲ್ಲಿ ಟೊಮೆಟೋ ಕಳವಾಗುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಇಂಧೋರ್‌ನ ತರಕಾರಿ ವ್ಯಾಪಾರಸ್ಥರು ಭದ್ರತೆಗಾಗಿ ಸಿಬಂದಿಗಳನ್ನು ನೇಮಿಸಿಕೊಂಡಿದ್ದಾರೆ. 

ಈ ವಿಚಾರ ಸಾಕಷ್ಟು ಸುದ್ದಿಯಾಗಿದ್ದು ಸಾಮಾಜಿಕ ತಾಣಗಳಲ್ಲೂ ಹಲವರು ಟೀಕೆಗಳ ಮಳೆಯನ್ನೇ ಸುರಿಸಿದ್ದಾರೆ. ಇದು ಅಚ್ಛೇ ದಿನ್‌ ಅಲ್ಲವೆ ಎಂದು ಬರೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next