ಬೆಳಗಾವಿ: ತೀವ್ರತರವಾದ ಎದೆಬಿಗಿತ, ಕೆಮ್ಮು, ಜ್ವರ, ಉಸಿರಾಟದ ತೊಂದರೆಯಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವ್ಯಕ್ತಿಗೆ ಹೃದಯದ ಬಲಭಾಗದಲ್ಲಿ ಬೆಳೆದಿದ್ದ ಗಡ್ಡೆ ಹಾಗೂ ಶ್ವಾಸಕೋಶದ ರಕ್ತನಾಳಕ್ಕೆ ಶಸ್ತ್ರಚಿಕಿತ್ಸೆ ನೆರವೇರಿಸಿ, ಅವನನ್ನು ಉಳಿಸುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯ
ಶಸ್ತ್ರಚಿಕಿತ್ಸಕರು ಯಶಸ್ವಿಯಾಗಿದ್ದಾರೆ.
Advertisement
ಚಿಕ್ಕೋಡಿ ತಾಲೂಕಿನ 38 ವರ್ಷದ ರೋಗಿಯೊಬ್ಬರು ಆಸ್ಪತ್ರೆಗೆ ಬಂದ ತಕ್ಷಣ ಹƒದ್ರೋಗ ತಜ್ಞ ಡಾ| ಸಮೀರ್ ಅಂಬರ್ ಅವರು ವಿವಿಧ ತಪಾಸಣೆ ನಡೆಸಿದಾಗ, ರೈಟ್ ಆಟ್ರಿಯಮ್ ಮೈಕ್ಸೋಮಾ ಮತ್ತು ಪಲ್ಮನರಿ ಎಂಬೋಲಿಮ್ ಎರಡನ್ನೂ ಹೊಂದಿರುವದು ಕಂಡು ಬಂದಿತು.
ಮೈಕ್ಸೋಮಾ) ಮತ್ತು ಪಲ್ಮನರಿ ಎಂಬಾಲಿಸಮ್‌ಗೆ ಶಸ್ತ್ರಚಿಕಿತ್ಸೆ ನೆರವೇರಿಸುವುದು ಅತ್ಯಂತ ಕ್ಲಿಷ್ಟಕರವಾಗಿತ್ತು. ಸಾಮಾನ್ಯವಾಗಿ ಶೇ. 80 ಹೃದಯದ ಗೆಡ್ಡೆಗಳು ಎಡ ಭಾಗದಲ್ಲಿರುತ್ತವೆ. ಆದರೆ ಈ ರೋಗಿಗೆ ಬಲಭಾಗ ದಲ್ಲಿತ್ತು. ಇಂತಹ ಪ್ರಕರಣಗಳು
ಲಕ್ಷ ರೋಗಿಗಳಲ್ಲಿ ಒಬ್ಬರಿಗೆ ಮಾತ್ರ ಕಂಡುಬರುತ್ತದೆ. ಸರಿಯಾದ ಸಮಯಕ್ಕೆ ಶಸ್ತ್ರಚಿಕಿತ್ಸೆ ನೆರವೇರಿಸಿದರ ಪರಿಣಾಮ ರೋಗಿಯು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಾ| ಪಾರ್ಶ್ವನಾಥ ಪಾಟೀಲ ಅವರು ತಿಳಿಸಿದ್ದಾರೆ. ಹೃದಯ ಶಸ್ತ್ರಚಿಕಿತ್ಸಕರಾದ ಡಾ| ದರ್ಶನ ಡಿ.ಎಸ್ ಮತ್ತು ಡಾ| ಪಾರ್ಶ್ವನಾಥ ಪಾಟೀಲ ನೇತೃತ್ವದ ಶಸ್ತ್ರಚಿಕಿತ್ಸಾ ತಂಡಕ್ಕೆ ಅರವಳಿಕೆ ತಜ್ಞ ವೈದ್ಯರಾದ ಡಾ| ಶರಣಗೌಡ ಪಾಟೀಲ ಸಹಕರಿಸಿದರು. ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ| ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ| ಕರ್ನಲ್ ಎಂ ದಯಾನಂದ ಅಭಿನಂದಿಸಿದ್ದಾರೆ.