ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಹೊಸವರ್ಷಾಚರಣೆ ಸಂದರ್ಭದಲ್ಲಿ ಸಾರ್ವಜನಿಕ ಗುಂಪು ಸೇರುವುದನ್ನು ತಪ್ಪಿಸುವ ಸಲುವಾಗಿ ನಗರದ ಕೆಲ ರಸ್ತೆ ಮತ್ತು ಮೇಲುಸುತೇವೆಗಳಲ್ಲಿ ಸಂಚಾರ ನಿರ್ಬಂಧಿಸಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್, ಸೆಂಟ್ ಮಾರ್ಕ್ಸ್ ರಸ್ತೆ, ರೆಸ್ಟ್ ಹೌಸ್ ರಸ್ತೆ ಮತ್ತು ರೆಸಿಡೆನ್ಸಿ ರಸ್ತೆಗಳಲ್ಲಿ ಡಿ.31 ರಾತ್ರಿ 8 ಗಂಟೆಯಿಂದ ಮತ್ತು 2020 ಜ.1 ಬೆಳಗ್ಗೆ ಆರು ಗಂಟೆವರೆಗೆ ವಾಹನ ಸಂಚಾರ ನಿರ್ಬಂಧ ಹಾಗೂ ಇತರೆ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ.
ತುರ್ತು ಸೇವಾ ವಾಹನಗಳಿಗೆ ಮಾತ್ರ ಪ್ರವೇಶ: ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆಜಂಕ್ಷನ್), ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್,ಮ್ಯೂಸಿಯಂ ರಸ್ತೆ, ರೆಸ್ಟ್ ಹೌಸ್ ಪಾರ್ಕ್ ರಸ್ತೆ,ರೆಸಿಡೆನ್ಸಿ ರಸ್ತೆಯಲ್ಲಿ ಪೊಲೀಸ್ ವಾಹನಗಳು, ಕರ್ತವ್ಯ ನಿರತ ತುರ್ತು ಸೇವಾ ವಾಹನಗಳನ್ನುಹೊರತು ಪಡಿಸಿ ಇತರೆ ವಾಹನಗಳಿಗೆ ಪ್ರವೇಶ ಹಾಗೂ ಸಂಚಾರ ನಿಷೇಧಿಸಲಾಗಿದೆ. ಈ ಮಾರ್ಗದ ಮೂಲಕ ಬೇರೆಡೆ ಹೋಗುವ ವಾಹನ ಸವಾರರು ಸಂಚಾರ ಪೊಲೀಸರು ಸೂಚಿಸುವ ಪರ್ಯಾಯ ಮಾರ್ಗದ ಕಡೆಯಿಂದ ಸಂಚರಿಸಬೇಕು ಎಂದು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗದ ಒಂದೇ ಕುಟುಂಬದ ನಾಲ್ವರಲ್ಲಿ ರೂಪಾಂತರಿ ಕೊರೊನ ಸೋಂಕು ಪತ್ತೆ
ಮೇಲು ಸೇತುವೆ ಬಂದ್: ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಮೈಕೋ ಲೇಔಟ್, ವಿಮಾನ ನಿಲ್ದಾಣ, ವೈಟ್ ಫೀಲ್ಡ್, ಎಚ್‌ಎಸ್ ಆರ್, ಹಲಸೂರು, ಕೆ.ಆರ್.ಪುರ, ಪುಲಕೇಶಿನಗರ, ಬಾಣಸವಾಡಿ, ಅಶೋಕನಗರ, ವಿಲ್ಸ ನ್‌ಗಾರ್ಡ್‌ನ್, ಆಡುಗೋಡಿ, ಉಪ್ಪಾರಪೇಟೆ, ಚಿಕ್ಕಪೇಟೆ, ಬ್ಯಾಟರಾಯನಪುರ, ಕಾಮಾಕ್ಷಿಪಾಳ್ಯ, ಬ್ಯಾಟರಾಯನಪುರ, ವಿ.ವಿ.ಪುರ, ಬಸವನಗುಡಿ, ಜಯನಗರ, ಬನಶಂಕರಿ, ರಾಜಾಜಿನಗರ, ಮಲ್ಲೇಶ್ವರಂ,ಯಶವಂತಪುರ, ಪೀಣ್ಯ, ಕೆಂಗೇರಿ, ಆರ್.ಟಿ.ನಗರ, ಹೆಬ್ಟಾಳ, ಚಿಕ್ಕಜಾಲ ಸಂಚಾರ ಠಾಣಾವ್ಯಾಪ್ತಿಯಲ್ಲಿರುವ 45 ಮೇಲು ಸೇತುವೆಗಳಮೇಲೆ ಸಂಚಾರ ನಿರ್ಬಂಧ ಹೇರಲಾಗಿದೆ.ವಾಹನ ಸವಾರರು ಪರ್ಯಾಯ ಮಾರ್ಗದಲ್ಲಿ ತೆರಳಲು ಸೂಚಿಸಲಾಗಿದೆ.
ವಾಹನ ನಿಲುಗಡೆ : ಎಂ.ಜಿ.ರಸ್ತೆ,(ಕ್ವೀನ್ಸ್ ವೃತ್ತ)ದಿಂದ ಟ್ರಿನಿಟಿ ವೃತ್ತದವರೆಗೆ, ಕಬ್ಬನ್ ರಸ್ತೆ, ರೆಸಿಡೆನ್ಸಿರಸ್ತೆ,ರಿಚ್‌ಮಂಡ್ ರಸ್ತೆ, ಇನ್‌ಫೆಂಟ್ರಿ ರಸ್ತೆ, ಬ್ರಿಗೇಡ್ ರಸ್ತೆ, ಅಶೋಕನಗಹಳೇಪಿಎಸ್ ಜಂಕ್ಷನ್‌ವರೆಗೆ, ಚರ್ಚ್‌ಸ್ಟ್ರೀಟ್, ಮ್ಯೂಸಿಯಂ,ರೆಸ್ಟ್‌ಹೌಸ್ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಮಗರತ್ ರಸ್ತೆ, ಕಮಿಷಿನರೇಟ್ ರಸ್ತೆ,ಮಾರ್ಕನ್ ರಸ್ತೆ, ಮೈನ್ ಗಾರ್ಡ್ ಕ್ರಾಸ್‌ರಸ್ತೆ ಮತ್ತು ಡೆಸ್ಪೆನ್ಸರಿ ರಸ್ತೆ, ಇಂದಿರಾಗನರ100 ಅಡಿ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.