Advertisement

ವೀರಶೈವ ಧರ್ಮ ಸಮೃದ್ಧಿ-ಜ್ಞಾನದ ಸಂಕೇತ

08:07 PM Apr 03, 2021 | Team Udayavani |

ಅಕ್ಕಿಆಲೂರು : ದೇಶದಲ್ಲಿ ಹತ್ತು ಹಲವು ಧರ್ಮಗಳು ನೆಲೆಯೂರಿದ್ದು, ಹೊರ ದೇಶಗಳ ವಿವಿಧ ಧರ್ಮಗಳಿಗೂ ಭಾರತ ಆಶ್ರಯ ತಾಣವಾಗಿದೆ. ಇವೆಲ್ಲವುಗಳ ಪೈಕಿ ವೀರಶೈವ ಧರ್ಮ ಸಮೃದ್ಧಿ ಮತ್ತು ಜ್ಞಾನದ ಸಂಕೇತವಾಗಿ ಜಗತ್ತನ್ನು ರಕ್ಷಿಸುವ ಉದ್ದೇಶ ಹೊಂದಿದೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಹೇಳಿದರು.

Advertisement

ಪಟ್ಟಣದ ಮುತ್ತಿನಕಂತಿಮಠ ಗುರುಪೀಠದಲ್ಲಿ ಲಿಂ.ವೀರರಾಜೇಂದ್ರ ಶಿವಾಚಾರ್ಯ ಶ್ರೀಗಳ 29ನೇ ಪುಣ್ಯಸ್ಮರಣೋತ್ಸವ, ನೂತನ ಶಿಲಾಮಠದ ಹೊಸ್ತಿಲು ಪೂಜಾ ಕಾರ್ಯಕ್ರಮದ ಪ್ರಯುಕ್ತ ನಡೆದ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಸನಾತನ ಕಾಲದಲ್ಲಿ ಸ್ಥಾಪಿತಗೊಂಡು ವಿಶ್ವಮಾನ್ಯವಾಗಿ ಪ್ರಕಾಶಿಸುತ್ತಿರುವ ವೀರಶೈವ ಧರ್ಮ ಸ್ವಾವಲಂಬಿ ಮತ್ತು ಪರಿಪೂರ್ಣವಾಗಿದೆ. ಸಮಾಜದಲ್ಲಿರುವ ಜಾತೀಯತೆ, ಅಸಮಾನತೆ, ಅಸ್ಪೃಶ್ಯತೆ ವಿರುದ್ಧ ಹೋರಾಡಿ ಕಲ್ಯಾಣ ರಾಜ್ಯ ಸ್ಥಾಪಿಸುವ ಉದ್ದೇಶದಿಂದ ಕಾರ್ಯನಿರತವಾಗಿರುವ ಮಠ- ಮಾನ್ಯಗಳೊಂದಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದರು.

ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ಆಶೀರ್ವಚನ ನೀಡಿ, ಪ್ರಾಚೀನ ಪರಂಪರೆಯ ಉಳವಿಗಾಗಿ ಮಠ-ಮಾನ್ಯಗಳಿಂದು ಮನೆಗೆ ಗೋಡೆ ಮತ್ತು ತೋಟಕ್ಕೆ ಬೇಲಿಯಂತೆ ರûಾ ಕವಚವಾಗಿ ಕಾರ್ಯಪ್ರವೃತ್ತವಾಗಿವೆ. ಸಮುದಾಯದಲ್ಲಿ ಅಧರ್ಮದ ಆರಾಧಕರಾಗಿ ಶಾಂತಿ ಕದಡುವ ಕೆಲಸದಲ್ಲಿ ತೊಡಗಿರುವ ದುಷ್ಠ ಶಕ್ತಿಗೆ ತಕ್ಕ ಪಾಠ ಕಲಿಸುವ ಮೂಲಕ ನಮ್ಮ ದೇಶಕ್ಕಿರುವ ವಿಶ್ವಗುರುವೆಂಬ ಬಿರುದನ್ನು ಸಂರಕ್ಷಿಸುವಲ್ಲಿ ಯುವಶಕ್ತಿ ಮುಂದಾಗಬೇಕಿದೆ.

ಸಮಾಜದಲ್ಲಿ ಅನೇಕ ದುಶ್ಚಟಗಳಿಗೆ ಅಂಟಿಕೊಂಡು ಭವಿಷ್ಯ ಹಾಳು ಮಾಡಿಕೊಳ್ಳುತ್ತಿರುವ ಯುವಪೀಳಿಗೆ ಸಮಾಜಮುಖೀ ಕಾರ್ಯ ಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜವಾಬ್ದಾರಿ ಪ್ರದರ್ಶಿಸಬೇಕೆಂದರು. ಹಾವೇರಿ ಹರಸೂರು ಬಣ್ಣದ ಮಠದ ಅಭಿನವ ರುದ್ರ ಮಲ್ಲಿಕಾರ್ಜುನ ಶ್ರೀಗಳು ಆಶೀರ್ವಚನ ನೀಡಿದರು. ನಂತರ ಗದಗಿನ ಸದಾನಂದ ಶಾಸ್ತ್ರೀಗಳು ಪ್ರವಚನ ಆರಂಭಿಸಿದರು.

ಕೊತ್ತಲಚಿಂತಿಯ ಶರಣಕುಮಾರ ಗವಾಯಿಗಳು ಸಂಗೀತ, ಕಂಚಿನೆಗಳೂರಿನ ಷಣ್ಮುಖಯ್ಯ ಹಿರೇಮಠ ವಾಯ್‌ಲಿನ್‌, ಗುಲ್ಬರ್ಗಾದ ಸಂತೋಷಕುಮಾರ ತಬಲಾ ಸಾಥ್‌ ನೀಡಿದರು. ಅಕ್ಕಿಆಲೂರಿನ ಗ್ರಾಪಂ ಸದಸ್ಯರನ್ನು ಸನ್ಮಾನಿಸಲಾಯಿತು. ಗಂಗಪ್ಪನವರು ಸಾಲವಟಿಗಿ, ಪ್ರಭಣ್ಣನವರು ಬೆಲ್ಲದ ಸೇರಿದಂತೆ ಪ್ರಮುಖರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next