ಮುಂಗಾರು ಹಂಗಾಮಿನಲ್ಲಿ ನಾಟಿ ಮಾಡಿದ ಭತ್ತ ಹಾಗೂ ಜೋಳದ ಕಟಾವು ನಡೆದಿದೆ. ಸರಕಾರ ನಿಗದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆ 2,300ರೂ.ಗಿಂತ ಅತೀ ಕಡಿಮೆ ಬೆಲೆಗೆ ಅಂದರೆ 1,350ರಿಂದ 1,400 ರೂ. ವರೆಗೆ ವ್ಯಾಪಾರಸ್ಥರು ಖರೀದಿ ಮಾಡುತ್ತಿದ್ದಾರೆ. ಇದರಿಂದ ಬೆಳೆಗೆ ಮಾಡಿದ ಖರ್ಚು ಸಹಿತ ಬಾರದಂತಾಗಿದೆ. ಅತಿವೃಷ್ಟಿಯಿಂದ ಬಂದಿರುವ ಸ್ವಲ್ಪ ಬೆಳೆಯೂ ಬೆಲೆ ಇಲ್ಲದೇ ರೈತರಿಗೆ ಮೋಸವಾಗುತ್ತಿದೆ. ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಶಿವರಾಜ ಶಿವಪುರಗೆ ಮನವಿ ಸಲ್ಲಿಸಿದರು.
Advertisement