Advertisement

ವೀರಪ್ಪ ಮೊಯ್ಲಿ ಸಾಧನೆ ಶೂನ್ಯ: ದ್ವಾರಕನಾಥ್‌

09:49 PM Apr 01, 2019 | Lakshmi GovindaRaju |

ದೇವನಹಳ್ಳಿ: 2 ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಎಂ.ವೀರಪ್ಪಮೊಯ್ಲಿ ಅವರ ಸಾಧನೆ ಶೂನ್ಯ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಎಸ್‌ಪಿ ಅಭ್ಯರ್ಥಿ ದ್ವಾರಕಾನಾಥ್‌ ದೂರಿದರು.

Advertisement

ನಗರದ ಬಿಬಿ ರಸ್ತೆಯ ಪ್ರತ್ರಿಕಾ ಭವನದಲ್ಲಿ ನಡೆದ ಬಿಎಸ್‌ಪಿ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇವನಹಳ್ಳಿ ಸಮೀಪ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದಿದ್ದು, ಭೂಮಿ ಕಳೆದುಕೊಂಡ ಸ್ಥಳೀಯ ರೈತರ ಮಕ್ಕಳಿಗೆ ಯಾವುದೇ ಉದ್ಯೋಗ ಸಿಗುತ್ತಿಲ್ಲ.

ಇರುವ ಅಲ್ಪ ಭೂಮಿಯಲ್ಲಿ ನೀರಿನ ಕೊರತೆಯಿಂದ ವ್ಯವಸಾಯ ಮಾಡಲಾಗದೆ ಉದ್ಯೋಗಕ್ಕಾಗಿ ವಲಸೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರಿಸಿದರು. ಇಷ್ಟು ವರ್ಷ ರಾಜ್ಯದ ಚುಕ್ಕಾಣಿ ಹಿಡಿದ ಪಕ್ಷಗಳು ತಮ್ಮ ಸ್ವಾರ್ಥದಿಂದ ರೈತರನ್ನು ಮರೆತಿದ್ದಾರೆ.

ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿಯ ದುರಾಡಳಿತ ತನ್ನ ಗೆಲುವಿಗೆ ವರವಾಗಲಿದೆ. ಎತ್ತಿನ ಹೊಳೆ ಯೋಜನೆಯಿಂದ ಯಾವುದೇ ನೀರು ಬಯಲು ಸೀಮೆ ಪ್ರದೇಶಗಳಿಗೆ ಹರಿಯುವುದು ಕಷ್ಟ. ಡಾ.ಪರಮಶಿವಯ್ಯ ವರದಿ ಪ್ರಕಾರ ಕೃಷ್ಣ ಮತ್ತು ಕಾವೇರಿ ನದಿ ನೀರು ಸಮರ್ಪಕವಾಗಿ ಈ ಭಾಗಕ್ಕೆ ಹರಿದು ಬರುವಂತೆ ಮಾಡಬೇಕಾಗಿದೆ.

ಕೆ.ಸಿ.ವ್ಯಾಲಿ, ಎನ್‌.ಸಿ. ವ್ಯಾಲಿ ನೀರು ವಿಷಯುಕ್ತವಾಗಿದೆ. ಹೀಗಾಗಿ ನದಿ ನೀರಿನ ಜೋಡಣೆ ಅವಶ್ಯಕ ಎಂದು ಹೇಳಿದರು. ದಲಿತ ಚಳವಳಿಯಿಂದ ತನ್ನ ಸಾಮಾಜಿಕ ಜೀವನ ಪ್ರಾರಂಭವಾಯಿತು. ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ರ ಅಭಿಲಾಷೆ, ಬಿಎಸ್‌ಪಿ ಸಂಸ್ಥಾಪಕರಾದ ದಿ.ಕಾನ್ಶಿರಾಮ್‌ರ ದೀನದಲಿತರ ಪರವಾದ ವಿಚಾರಗಳು ತನಗೆ ಇಷ್ಟವಾಗಿ ಬಿಎಸ್‌ಪಿ ಸೇರಿದ್ದೇನೆ. ಈ ಮೂಲಕ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆಂದರು.

Advertisement

ಈಗಿನ ರಾಜಕಾರಣ ಏಕೆ ಕೆಟ್ಟದ್ದಾಗಿದೆ. ಅಂದರೆ ರಾಜಕೀಯಕ್ಕೆ ಒಳ್ಳೆಯ ಮನೋಭಾವನೆ ಇರುವ ಮುಖಂಡರು ಬರುತ್ತಿಲ್ಲ. ಮಾನವ ಹಕ್ಕುಗಳ ಬಗ್ಗೆ ಹೋರಾಟ ಮಾಡಿರುವ ತನಗೆ ಸೈನಿಕರ ಸ್ಥಿತಿಗತಿ ನೋಡಿ ಮರುಕ ವ್ಯಕ್ತವಾಗುತ್ತಿದೆ. ದೇಶ ಕಾಯುವ ರೈತರಿಗೆ ಸರಿಯಾದ ಊಟವಿಲ್ಲ, ಇದರ ಬಗ್ಗೆ ಚಿಂತನೆ, ಈ ಭಾಗದ ರೈತರಿಗೆ ನೀರಿನ ಕೊರತೆ, ಕುಡಿಯುವ ನೀರಿಗೆ ತತ್ವಾರವಿದೆ ಎಂದು ಹೇಳಿದರು.

ಬಿಎಸ್‌ಪಿ ಕೇವಲ ಒಂದು ಜಾತಿಯನ್ನು ಓಲೈಸುತ್ತಿದೆ ಎಂಬ ಪ್ರಶ್ನೆಗೆ, ಇದು ಸುಳ್ಳಿನ ಕಂತೆ, ಬಿಎಸ್‌ಪಿಯಲ್ಲಿ ಎಲ್ಲಾ ಜಾತಿಯ ಮುಖಂಡರು, ಕಾರ್ಯಕರ್ತರು ಇದ್ದಾರೆ. ಆದರೆ ರಾಜ್ಯದಲ್ಲಿ ಜಾತಿ ರಾಜಕಾರಣ ನಡೆಯುತ್ತಿದೆ. ಆಂಧ್ರದ ಪವನ್‌ಕಲ್ಯಾಣ್‌ ಕರ್ನಾಟಕದ ಗಡಿ ಭಾಗಗಳಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಮತದಾರರು ಕ್ರಮಸಂಖ್ಯೆ 1ರ ಆನೆ ಗುರುತಿಗೆ ಮತ ನೀಡಿ ಎಂದು ಹೇಳಿದರು.

ಈ ವೇಳೆ ಸಂಘಟನೆಯ ಹೂಡಿ ವೆಂಕಟೇಶ್‌, ಹೈಕೋರ್ಟ್‌ ವಕೀಲ ಶ್ರೀನಿವಾಸ್‌, ಸಾತನೂರು ಆನಂದ್‌, ಬೆಂ.ಗ್ರಾ ಬಿಎಸ್ಪಿ ಉಪಾಧ್ಯಕ್ಷ ಸಾವಕನಹಳ್ಳಿ ಶ್ರೀನಿವಾಸ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next