Advertisement
ಪೂಂಜ ಕ್ಷೇತ್ರದ ಆಸ್ರಣ್ಣ ಕೃಷ್ಣ ಪ್ರಸಾದ್ ಆಚಾರ್ಯ ಅವರು ಕಂಬಳ ಉದ್ಘಾಟಿಸಿದರು. ಪೂಂಜ ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ಇಲ್ಲಿನ ಮುಜಿಲ್ನಾಯಿ ದೈವಸ್ಥಾನ ಜೊತೆಗೆ ವಿಶೇಷ ಧಾರ್ಮಿಕ ನಂಟು ಹೊಂದಿರುವ ಈ ಕಂಬಳಕ್ಕೆ ಧಾರ್ಮಿಕ ಮತ್ತು ವೈಜ್ಞಾನಿಕ ಸಂಬಂಧವೂ ಇದೆ ಎಂದು ಅವರು ಶುಭ ಹಾರೈಸಿದರು.
Related Articles
Advertisement
ಕಂಬಳ ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಪದಾಧಿಕಾರಿಗಳಾದ ಬಾಬು ರಾಜೇಂದ್ರ ಶೆಟ್ಟಿ ಅಜ್ಜಾಡಿ, ಕಿರಣ್ ಕುಮಾರ್ ಮಂಜಿಲ, ಸಂದೇಶ ಶೆಟ್ಟಿ ಪೊಡುಂಬ, ಪುಷ್ಪರಾಜ ಜೈನ್, ಎಚ್.ಹರೀಶ ಹಿಂಗಾಣಿ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ರಾಜೇಶ ಶೆಟ್ಟಿ ಕೊನೆರೊಟ್ಟು, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಜನಾರ್ದನ ಬಂಗೇರ ತಿಮರಡ್ಕ, ನಿತ್ಯಾನಂದ ಪೂಜಾರಿ ಕೆಂತಲೆ, ಪ್ರಣೀತ್ ಹಿಂಗಾಣಿ, ಕೃಷ್ಣ ಶೆಟ್ಟಿ ಉಮನೊಟ್ಟು, ರಾಜೇಶ್ ಜಿ. ಶೆಟ್ಟಿ, ಪ್ರಮುಖರಾದ ಮಹಾಬಲ ಪೂಜಾರಿ ಕುಂಜಾಡಿ, ಸ್ಥಳದಾನಿಗಳಾದ ಸುಧೀರ್ ಶೆಟ್ಟಿ , ಸುಧಾಕರ ಚೌಟ ಬಾವ, ರಾಜು ಗುಮ್ಮಣ್ಣ ಶೆಟ್ಟಿ, ಪ್ರವೀಣ ಕುಲಾಲ್, ಹರೀಶ ಶೆಟ್ಟಿ, ಸುಂದರ ಪೂಜಾರಿ, ತೀರ್ಪುಗಾರರಾದ ವಿಜಯ ಕುಮಾರ್ ಕಂಗಿನಮನೆ, ಸುಧಾಕರ ಶೆಟ್ಟಿ, ವಿದ್ಯಾಧರ ಜೈನ್, ರವೀಂದ್ರ ಕುಮಾರ್, ಕೋಣಗಳನ್ನು ಬಿಡಿಸುವ ವಲೇರಿಯನ್ ಡೇಸಾ, ಸುದೇಶ್ ಕುಮಾರ್,ಜನಾರ್ದನ ನಾಯ್ಕ್, ಅಜಿತ್ ಕುಮಾರ್, ಸುರೇಶ್ ಶೆಟ್ಟಿ, ಮಹಾವೀರ ಜೈನ್, ಸತೀಶ್ ಕುಮಾರ್, ಪ್ರಕಾಶ ಕಜೆಕಾರ್, ಸುದೀಪ್, ಯಶವಂತ, ಸಂಕಪ್ಪ ಶೆಟ್ಟಿ, ಶ್ರೀಧರ ಆಚಾರ್ಯ ಮತ್ತಿತರಿದ್ದರು.
ಕಂಬಳ ಸಮಿತಿ ಗೌರವ ಸಲಹೆಗಾರ ಸುರೇಶ ಶೆಟ್ಟಿ ಸಿದ್ದಕಟ್ಟೆ ಸ್ವಾಗತಿಸಿ, ವಂದಿಸಿದರು. ಪ್ರಚಾರ ಸಮಿತಿ ಸಂಚಾಲಕ ಮೋಹನ್ ಕೆ.ಶ್ರೀಯಾನ್ ಕಾರ್ಯಕ್ರಮ ನಿರೂಪಿಸಿದರು.
ಇದೇ ವೇಳೆ ಓಟದ ಕೋಣಗಳನ್ನು ಕೊಂಬು, ಬ್ಯಾಂಡ್, ವಾದ್ಯಗಳ ಘೋಷದೊಂದಿಗೆ ಸಾಂಪ್ರದಾಯಕವಾಗಿ ಕಂಬಳ ಕರೆಗೆ ಇಳಿಸಲಾಯಿತು. ಓಟದ ಕೋಣಗಳ ಹಣೆಗೆ ಕುಂಕುಮ ಹಚ್ಚಿ , ಕೋಣಗಳ ಯಜಮಾನರಿಗೆ. ಅಡಿಕೆ ಸಹಿತ ವೀಳ್ಯೆದೆಲೆ ನೀಡಿಕಂಬಳ ಪದಾಧಿಕಾರಿಗಳು ಸ್ವಾಗತಿಸಿದರು. ವಾಮದಪದವು ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ಸ್ಥಳದಲ್ಲೇ ಕೋವಿಡ್ ತಪಾಸಣೆ ಮತ್ತು ಲಸಿಕೆ ವಿತರಣೆ ನಡೆಯಿತು.